ಲಗ್ನಪತ್ರಿಕೆಯಲ್ಲಿ `ಸಂಸದ’ ನಿಖಿಲ್!ಸುಮಲತಾಗೆ ಫ್ಲೆಕ್ಸ್‍ನಲ್ಲಿ ಅಭಿನಂದನೆ
ಮಂಡ್ಯ

ಲಗ್ನಪತ್ರಿಕೆಯಲ್ಲಿ `ಸಂಸದ’ ನಿಖಿಲ್!ಸುಮಲತಾಗೆ ಫ್ಲೆಕ್ಸ್‍ನಲ್ಲಿ ಅಭಿನಂದನೆ

May 23, 2019

ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಫಲಿತಾಂಶ ತಿಳಿಯಲು ಮಧ್ಯಾಹ್ನದವರೆಗೂ ಕಾಯಬೇಕಿದ್ದರೂ, ತಾಲೂಕಿನ ಜೆಡಿಎಸ್ ಮುಖಂಡರು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಅದಾಗಲೇ `ಸಂಸದ’ ಎಂದೇ ಪರಿಗಣಿಸಿಬಿಟ್ಟಿದ್ದಾರೆ!

ಇನ್ನೊಂದೆಡೆ, ಕೊಪ್ಪದಲ್ಲಿ ಸುಮಲತಾ ಅಂಬರೀಶ್ ಅಭಿಮಾನಿಗಳು, ಸುಮಲತಾ ವಿಜಯೋತ್ಸವ ಆಚರಿಸಲು ಮುಂದಾಗಿ ದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರಿಗೆ ಅಭಿನಂದನೆಗಳು ಎಂದೂ ಫ್ಲೆಕ್ಸ್ ಮುದ್ರಿಸಿ ಮುಖ್ಯ ರಸ್ತೆಗಳಲ್ಲಿ ಅಳವಡಿಸಿ ಸಂಭ್ರಮಿಸುತ್ತಿದ್ದಾರೆ.

ಲಗ್ನಪತ್ರಿಕೆ: ಜೆಡಿಎಸ್ ಮುಖಂಡರೊ ಬ್ಬರ ಪುತ್ರನ ಮದುವೆಯ ಆಹ್ವಾನ ಪತ್ರಿಕೆ ಯಲ್ಲಿ ಒಂದು ಪುಟದ ತುಂಬಾ ದೊಡ್ಡ ದಾಗಿ ನಿಖಿಲ್ ಭಾವಚಿತ್ರ ಹಾಕಲಾಗಿದ್ದು, ವಿಶೇಷ ಆಹ್ವಾನಿತರು ನಿಖಿಲ್ ಕುಮಾರಸ್ವಾಮಿ, ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ ಎಂದೇ ನಮೂದಿಸಲಾಗಿದೆ!

ಜೆಡಿಎಸ್ ಮುಖಂಡ ನಾಗರಾಜು ಎಂಬವರ ಮಗನ ಮದುವೆಯ ಆಹ್ವಾನ ಪತ್ರಿಕೆಯಲ್ಲಿಯೇ ಹೀಗೆ ಮುದ್ರಿಸಿ ಅಭಿಮಾನ ತೋರಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಜೆಡಿಎಸ್ ಮುಖಂಡರಾಗಿರುವ ನಾಗರಾಜು ಅವರ ಪುತ್ರನ ವಿವಾಹ ಜೂ.9ರಂದು ಶ್ರೀರಂಗ ಪಟ್ಟಣದ. ಟಿಎಪಿಸಿಎಂಎಸ್ ನ ಸಮು ದಾಯ ಭವನದಲ್ಲಿ ಈ ವಿವಾಹ ನಡೆಯ ಲಿದೆ. ನಿಖಿಲ್ ಗೆದ್ದೇ ಗೆಲ್ಲುತ್ತಾರೆ. ಮದುವೆ ವೇಳೆಗೆ ಅವರು ಸಂಸದರಾಗಿರುತ್ತಾರೆ ಎಂಬ ಅತಿಯಾದ ವಿಶ್ವಾಸದಲ್ಲಿ ಹೀಗೆ ಲಗ್ನ ಪತ್ರಿಕೆ ಮುದ್ರಿಸಲಾಗಿದೆ ಎಂದು ಕುಟುಂಬ ದವರು ತಿಳಿಸಿದ್ದಾರೆ. ಈ ಲಗ್ನಪತ್ರಿಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.