ಇಂದು ಮಂಡ್ಯ ಮತದಾರ ಪ್ರಭುವಿನ ‘ಮಹಾತೀರ್ಪು’
ಮಂಡ್ಯ

ಇಂದು ಮಂಡ್ಯ ಮತದಾರ ಪ್ರಭುವಿನ ‘ಮಹಾತೀರ್ಪು’

May 23, 2019

ಮಂಡ್ಯ: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಪ್ರಭು ಬರೆದಿರುವ ‘ಮಹಾತೀರ್ಪು’ ಇಂದು ಬಹಿರಂಗಗೊಳ್ಳಲಿದೆ.

ಹೈವೋಲ್ಟೇಜ್ ಕದನ ಕಣವಾಗಿರುವ ಈ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬ ರೀಶ್ ಸೇರಿದಂತೆ 22 ಅಭ್ಯರ್ಥಿಗಳ ಹಣೆ ಬರಹ ಇಂದು ಬಯಲಾಗಲಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಮಾಜಿ ಸಚಿವ, ನಟ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಸ್ಪರ್ಧೆಯಿಂದಾಗಿ ಈ ಭಾರಿ ಕ್ಷೇತ್ರದ ಚುನಾವಣೆ ಅತ್ಯಂತ ರೋಚಕತೆ ಪಡೆದು ಕೊಂಡಿದೆ. ಇಡೀ ಇಂಡಿಯಾವೇ ಮಂಡ್ಯದ ಫಲಿತಾಂಶ ಏನಾಗಲಿದೆ ಎಂಬ ಕಾತುರ ದಲ್ಲಿ ಕಾದುಕುಳಿತಿದೆ.

ಏ.18ರಂದು ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದು ಶೇ.80.42 ರಷ್ಟು ಮತದಾನವಾಗಿತ್ತು. ಅಂದಿನಿಂದ ಇಂದಿನವರೆಗೂ ಫಲಿತಾಂಶ ಕ್ಕಾಗಿ ಜನತೆ ತೀವ್ರ ಕುತೂಹಲದಿಂದ ಕಾದು ಕುಳಿತಿದ್ದಾರೆ. ಎಲ್ಲಿ ನೋಡಿದರೂ, ಯಾವುದೇ ಸಭೆ ಸಮಾರಂಭದಲ್ಲೂ ಯಾರು ಗೆಲ್ಲುತ್ತಾರೆ? ಎಂಬುದೇ ಚರ್ಚೆಯ ವಿಷಯವಾಗಿತ್ತು. ಮತದಾನ ಬಳಿಕ ಭಾರೀ ಬೆಟ್ಟಿಂಗ್ ಭರಾಟೆ ನಡೆದಿದ್ದು, ಊಹಿ ಸಲೂ ಆಗದಷ್ಟು ಪ್ರಮಾಣದಲ್ಲಿ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ. ನಗದು ಮಾತ್ರವ ಲ್ಲದೇ ಜಮೀನು, ಕುರಿ, ಮೇಕೆ, ಕಾರು, ಬೈಕ್‍ಗಳೂ ಬೆಟ್ಟಿಂಗ್ ವಸ್ತುಗಳಾದವು. ಇಷ್ಟೆಲ್ಲಾ ಕುತೂಹಲದ ನಡುವೆ ಗುರುವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳ ಲಿದೆ. ಜಿಲ್ಲೆ ಮಾತ್ರವಲ್ಲ ಇಡೀ ದೇಶವೇ ಮಂಡ್ಯದತ್ತ ಕುತೂಹಲದ ದೃಷ್ಟಿ ನೆಟ್ಟಿದೆ.

ಚುನಾವಣಾ ಮಹಾಸಮರದಲ್ಲಿ ಗೆಲುವಿಗಾಗಿ ಮತದಾರರ ಬಳಿ ಮತ ಭಿಕ್ಷೆ ಬೇಡುತ್ತಿದ್ದ ಅಭ್ಯರ್ಥಿಗಳೀಗ ದೇವರ ಮೊರೆ ಹೋಗಿದ್ದಾರೆ. ಮತ ಎಣಿಕೆಗೆ ಕ್ಷಣಗಣನೆ ಆರಂಭ ಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲೀಗ ಢವಢವ ಶುರುವಾಗಿದೆ.
6 ತಿಂಗಳ ಹಿಂದೆಯಷ್ಟೇ ನಡೆದಿದ್ದ ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಜೆಡಿಎಸ್‍ಗೆ ಈ ಬಾರಿಯ ಚುನಾವಣೆ ಕಬ್ಬ್ಬಿಣದ ಕಡಲೆಯಾಗಿದೆ. ಅನುಕಂಪದ ಅಲೆಯಲ್ಲಿ ಕಣಕ್ಕಿಳಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ‘ಮಂಡ್ಯ ಸ್ವಾಭಿಮಾನ’ದ ಬೆಂಬಲ ದೊರೆತಿದ್ದರೂ ವಿಜಯ ನಮ್ಮದೇ ಎಂಬ ಖಚಿತ ನಿಲುವಿನ ಪರಿಸ್ಥಿತಿಯೂ ಇಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಾಯಕರು ಗೆಲುವು ನಮ್ಮದೇ ಎನ್ನುತ್ತಿದ್ದರೆ, ಪಕ್ಷೇತರ ಅಭ್ಯರ್ಥಿ ಕಡೆಯವರು `ನಾವು ಗೆz್ದÉೀ ಗೆಲ್ಲುತ್ತೇವೆ’ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದ ಬಿಜೆಪಿ ನಾಯಕರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ವಿದ್ಯು ನ್ಮಾನ ಮತಯಂತ್ರಗಳಲ್ಲಿ ಅಡಗಿರುವ ಮತದಾರ ಪ್ರಭು ಬರೆದಿರುವ ರಹಸ್ಯ ಏನು ಎಂಬುದು ಗೊತ್ತಾಗಬೇಕಾದರೆ ಮೇ23ರ ಮಧ್ಯಾಹ್ನ 12 ಗಂಟೆಯವರೆಗೆ ಕಾಯಲೇಬೇಕಿದೆ.

ಅಭ್ಯರ್ಥಿಗಳು ಮತ್ತವರ ಕುಟುಂಬದ ವರು, ಬೆಂಬಲಿಗರು, ಕಾರ್ಯಕರ್ತರಂತೂ ಚಡಪಡಿಸುತ್ತಿದ್ದಾರೆ. ಫಲಿತಾಂಶ ಏನಾಗುವುದೋ ಎಂಬ ಕಾತರದಲ್ಲಿದ್ದ್ದಾರೆ. ಯಾವ ವಿಧಾನ ಸಭಾ ಕ್ಷೇತ್ರದಲ್ಲಿ, ಯಾವ ಊರಿನ ಯಾವ ಬೂತ್‍ನಲ್ಲಿ ತಮಗೆ ಹೆಚ್ಚು ಮತಗಳು ಬಂದಿವೆ. ಎಲ್ಲಿ, ಯಾರು ಕೈಕೊಟ್ಟು ಒಳೇಟು ನೀಡಿರಬಹುದೆಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಮಾತ್ರವಲ್ಲ ಪಕ್ಷಗಳ ನಾಯಕರೂ ಸಹ ತೊಡಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಇದು ಯಾರಿಗೆ ವರವಾಗಬಹುದು. ಯಾರಿಗೆ ಯಾವ ಕ್ಷೇತ್ರ ಹೆಚ್ಚು ಮತಗಳನ್ನು ನೀಡಬಹುದು. ತಮ್ಮ ಗೆಲುವಿನ ಅಂತರ ಎಷ್ಟಿರಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಂತಿಮವಾಗಿ ಮೈತ್ರಿ ಧರ್ಮ ಎಷ್ಟರಮಟ್ಟಿಗೆ ಪಾಲನೆಯಾಗಿದೆ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಲಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಶೇ.71.45ರಷ್ಟು ಹಾಗೂ ಉಪ ಚುನಾ ವಣೆಯಲ್ಲಿ ಶೇ.52ರಷ್ಟು ಮತದಾನ ನಡೆ ದಿತ್ತು. 2014ರ ಲೋಕಸಭೆ ಚುನಾವಣೆ ಇದುವರೆಗೆ ಮಂಡ್ಯ ಮಟ್ಟಿಗಿನ ಅತಿ ಹೆಚ್ಚು ಪ್ರಮಾಣದ ಮತದಾನ ಅದಾಗಿತ್ತು. ಆ ದಾಖಲೆಯನ್ನು ಈ ಚುನಾವಣೆಯಲ್ಲಿ ಮತದಾರರು ಮುರಿದಿದ್ದು, ಜಿದ್ದಾಜಿದ್ದಿನ ಹಣಾಹಣಿಯ ಪರಿಣಾಮ ಶೇ.80.24ರಷ್ಟು ಮತದಾನ ನಡೆದು ದಾಖಲೆ ಬರೆದಿದೆ.