ಕೆಲಸ ನಿರಾಕರಣೆ ವಿರೋಧಿಸಿ ಧರಣಿ
ಮಂಡ್ಯ

ಕೆಲಸ ನಿರಾಕರಣೆ ವಿರೋಧಿಸಿ ಧರಣಿ

May 23, 2019

ಮಂಡ್ಯ: ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದು ನಿಯಮ ಬಾಹಿರ ಎಂದು ಖಂಡಿಸಿರುವ ಮೆ.ಮೆಗ್ನೀ ಷಿಯಂ ಅಂಡ್ ಅಲೈಡ್ ಪ್ರಾಡಕ್ಟ್‍ನ ಕಾರ್ಮಿ ಕರು, ಹೈಕೋರ್ಟ್ ತೀರ್ಪಿನನ್ವಯ ಕನಿಷ್ಠ ವೇತನ ನೀತಿಯನ್ನು ಅನುಷ್ಠಾನಗೊಳಿಸ ಬೇಕು ಎಂದು ಅಗ್ರಹಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರÀು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಜಮಾವಣೆಗೊಂಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು.

ಮದ್ದೂರಿನ ಹುರುಗಲವಾಡಿ ಕೈಗಾ ರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯು 2 ತಿಂಗಳಿನಿಂದ ಕಾರ್ಮಿಕರಿಗೆ ಕೆಲಸ ಕೊಡದೇ ಸತಾಯಿಸುತ್ತಿದ್ದಾರೆ. 2 ತಿಂಗಳಿ ನಿಂದ ವೇತನವನ್ನೂ ನೀಡಿಲ್ಲ. ಕಾರ್ಖಾ ನೆಯ ಬಾಗಿಲನ್ನೂ ಮುಚ್ಚಲಾಗಿದೆ. ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕಾರ್ಮಿಕರ ಜೀವನ ನಡೆಸುವುದು ಬಹಳ ದುಸ್ತರ ವಾಗಿದೆ. ಹಲವಾರು ವರ್ಷಗಳಿಂದ ಕಾನೂನು ಪ್ರಕಾರ ನೀಡಬೇಕಾಗಿರುವ ಬೋನಸ್ ನೀಡಿಲ್ಲ. ಮೂಲ ಸೌಕರ್ಯಗಳನ್ನು ನೀಡದೆ ಕಾರ್ಮಿಕರಿಗೆ ಬಹಳ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಆದ್ದರಿಂದ ಕಾರ್ಮಿಕ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಅಕ್ರಮ ಬೀಗ ಮುದ್ರೆಯನ್ನು ತೆರವುಗೊಳಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಹೈಕೋರ್ಟ್ ತೀರ್ಪಿನನ್ವಯ ಕನಿಷ್ಠ ವೇತನ ಕೊಡಿಸ ಬೇಕೆಂದು ಆಗ್ರಹಿಸಿದರು.

ಕಾರ್ಮಿಕರ ಸಂಘದ ಅಧ್ಯಕ್ಷ ರಾಜು, ಉಪಾಧ್ಯಕ್ಷ ಮಾಯಣ್ಣಘಿ, ಸಹ ಕಾರ್ಯ ದರ್ಶಿ ರಾಮು, ಪ್ರಧಾನ ಕಾರ್ಯದರ್ಶಿ ಪಿ.ತಿಮ್ಮೇಶ್, ಸಿಐಟಿಯು ಸಿ.ಕುಮಾರಿ, ಜಿ.ರಾಮಕೃಷ್ಣ, ಚಂದ್ರಶೇಖರ್, ಚಲುವ ರಾಜು ಪ್ರತಿಭಟನೆಯಲ್ಲಿದ್ದರು.

Translate »