ಹಳ್ಳಿಗಾಡಿಗೂ ಕಾಲಿಟ್ಟ ಸರಗಳ್ಳರು!
ಮಂಡ್ಯ

ಹಳ್ಳಿಗಾಡಿಗೂ ಕಾಲಿಟ್ಟ ಸರಗಳ್ಳರು!

May 23, 2019

ಕೆಜಿ ಕೊಪ್ಪಲು ಗ್ರಾಮಕ್ಕೆ ಬೈಕ್‍ನಲ್ಲಿ ಬಂದು ಸರ ಕಿತ್ತೊಯ್ದರು!
ಮದ್ದೂರು: ಬೆಂಗಳೂರು, ಮೈಸೂರು ಮೊದಲಾದ ದೊಡ್ಡ ನಗರ ಗಳಲ್ಲಿಯಷ್ಟೇ ನಡೆಯುತ್ತಿದ್ದ ಸರಗಳವು ಪ್ರಕರಣಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ನಗರಗಳಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ ಎಂಬ ಕಾರಣಕ್ಕೋ ಏನೋ ದ್ವಿಚಕ್ರ ವಾಹನ ಸರಗಳ್ಳರು ಈಗ ಹಳ್ಳಿ ಗಾಡಿನ ಕಡೆಗೆ ಕಾಲಿಟ್ಟಿದ್ದಾರೆ! ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸರಗಳವು ಪ್ರಕರಣ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಯುವಕ ರಿಬ್ಬರು ಮಹಿಳೆಯಿಂದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಹೋಬ ಳಿಯ ಕೆಜಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕೆಜಿ ಕೊಪ್ಪಲು ನಿವಾಸಿ ಸುರೇಶ್ ಎಂಬ ವರ ಪತ್ನಿ ಶಕುಂತಲಾ ತಮ್ಮ ತಾಯಿ ಅಲಮೇಲಮ್ಮ ಅವರ ಜತೆ ಸೋಮವಾರ ಸಂಜೆ 4ರ ವೇಳೆ ಬಟ್ಟೆ ಒಗೆಯಲೆಂದು ಕಾಲುವೆಗೆ ತೆರಳುತ್ತಿದ್ದಾಗ ಕೊಪ್ಪ ಮಾರ್ಗದ ರಸ್ತೆಯಲ್ಲಿ ಹಿಂದಿನಿಂದ ಮೋಟಾರ್ ಬೈಕ್‍ನಲ್ಲಿ ಬಂದ ಇಬ್ಬರು ಶಕುಂತಲಾ ಅವರ ಕೊರಳಿನಲ್ಲಿದ್ದ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ.

ಕಳ್ಳರು ಸರವನ್ನು ಜೋರಾಗಿ ಎಳೆದು ಕೀಳುವಾಗ ಶಕುಂತಲಾ ಅವರು ನೆಲಕ್ಕೆ ಬಿದ್ದಿದ್ದು, ಅವರಿಗೆ ಗಾಯಗಳಾಗಿವೆ. ಕೊಪ್ಪ ಪೆÇಲೀಸ್ ಠಾಣೆಯಲ್ಲಿ ಸರಗಳವು ಪ್ರಕರಣ ದಾಖಲಾಗಿದೆ.

Translate »