ಬಡ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಸಂಕಷ್ಟ ಸ್ಥಿತಿ
ಮೈಸೂರು

ಬಡ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಸಂಕಷ್ಟ ಸ್ಥಿತಿ

May 23, 2019

ಮೈಸೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರ್ಕಾ ರದ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡು ವುದನ್ನು ಸ್ಥಗಿತಗೊಳಿಸಿರುವುದರಿಂದ ಬಡ ರೋಗಿ ಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಪರವಾಗಿ ಮಾತನಾ ಡಿದ ಜಿ.ಎಂ.ರಘು, ಈ ಹಿಂದೆ ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೆ ಸುಮಾರು 8-9 ತಿಂಗಳಿಂದ ಆಸ್ಪತ್ರೆಗೆ ಹೋದರೆ ಸರ್ಕಾರದಿಂದ ನಮಗೆ ನೀಡಿದ್ದ ಕೋಡ್ ಅನ್ನು ತೆಗೆದಿರುವ ಕಾರಣ ಸರ್ಕಾರಿ ವೆಚ್ಚದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವುದನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗಿದೆ ಎಂಬ ಉತ್ತರ ಸಿಗುತ್ತಿದೆ. ಬೇರೆ ದಾರಿ ಇಲ್ಲದೆ ಕೆ.ಆರ್. ಆಸ್ಪತ್ರೆಗೆ ಹೋದರೆ  ಹಗಲಿನಲ್ಲಿ ಸ್ಲೈಡ್ಸ್ ಲಭ್ಯವಿಲ್ಲ ಎಂದು ಹೇಳಿ ಸಾಗ ಹಾಕುತ್ತಿದ್ದಾರೆ. ಬೇಕಿದ್ದರೆ ರಾತ್ರಿ 12 ಗಂಟೆವರೆಗೂ ಕಾದು ಡಯಾಲಿಸಿಸ್ ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ ಎಂದರು.

ಕಿಡ್ನಿ ವೈಫಲ್ಯಕ್ಕೆ ವಾರಕ್ಕೆ ಸುಮಾರು 2-3 ಬಾರಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಒಂದು ಬಾರಿಗೆ ಸುಮಾರು 1500-2000 ರೂ ನಂತೆ ತಿಂಗಳಿಗೆ 24 ಸಾವಿರ ರೂ. ಬೇಕಾಗುತ್ತದೆ. ಬಡ ಜನರು ಎಲ್ಲಿಂದ ತರಬೇಕು? ಬಿಪಿಎಲ್ ಹೊಂದಿರುವ ಬಡ ಕುಟುಂಬಗಳಿಗೆ ಉಚಿತವಾಗಿ 5 ಲಕ್ಷದವರೆಗೆ ಚಿಕಿತ್ಸೆ ಲಭ್ಯವಿದೆ ಎನ್ನುವ ಸರ್ಕಾರಗಳಿಗೆ ಏನನ್ನಬೇಕು? ಉಳ್ಳವರು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಾರೆ. ಆದರೆ ಬಡವರು ಏನು ಮಾಡಬೇಕು? ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಸಚಿವರು ಇದರ ಬಗ್ಗೆ ಪರಿಶೀಲಿಸಿ ತುರ್ತಾಗಿ ಕ್ರಮ ಕೈಗೊಂಡು ಬಡ ರೋಗಿಗಳ ನೆರವಿಗೆ ಬರಬೇಕೆಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.

Translate »