ಮಂಡ್ಯ

ಮಂಡ್ಯ ಋಣ ನಮ್ಮ ಮೇಲಿದೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯ

ಮಂಡ್ಯ ಋಣ ನಮ್ಮ ಮೇಲಿದೆ: ನಿಖಿಲ್ ಕುಮಾರಸ್ವಾಮಿ

March 21, 2019

ಭಾರತೀನಗರ: ನಾನು ಯಾವುದೇ ಸ್ವಾರ್ಥವನ್ನಿಟ್ಟು ಕೊಂಡು ಮಂಡ್ಯಕ್ಕೆ ಬಂದಿಲ್ಲ. ನಮ್ಮ ತಾತ ಮತ್ತು ನಮ್ಮ ತಂದೆಯವರ ಹಾದಿಯಲ್ಲೇ ಜನರ ಸೇವೆ ಮಾಡಲು ಬಂದಿರುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇಲ್ಲಿಗೆ ಸಮೀಪದ ಕರಡಕೆರೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿದ್ದೀರಿ. ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ. ಹಾಗಾಗಿ ನನ್ನನ್ನು ನಿಮ್ಮ ಮನೆಯ ಮಗ ಎಂದು…

ಸಾಲಬಾಧೆ; ನದಿಗೆ ಹಾರಿ ರೈತ ಆತ್ಮಹತ್ಯೆ
ಮಂಡ್ಯ

ಸಾಲಬಾಧೆ; ನದಿಗೆ ಹಾರಿ ರೈತ ಆತ್ಮಹತ್ಯೆ

March 21, 2019

ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಅಕ್ಕಿಹೆಬ್ಬಾಳು ಬಳಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ತೇಗನಹಳ್ಳಿ ಗ್ರಾಮದ ರೈತ ರಂಗಣ್ಣ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಘಟನೆ ವಿವರ: ತೇಗನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಮೀನು ಹೊಂದಿರುವ ರೈತ ರಂಗಣ್ಣ ಬೇಸಾಯಕ್ಕಾಗಿ ಹಾಗೂ ಜಮೀನು ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸೊಸೈಟಿಗಳಿಂದ ಸುಮಾರು ಐದಾರು ಲಕ್ಷ ಸಾಲ ಮಾಡಿದ್ದರು. ಮಳೆ ಸರಿಯಾಗಿ ಆಗದ ಕಾರಣ ಬೆಳೆದಿದ್ದ ಕಬ್ಬು ಮತ್ತು…

ಮಂಡ್ಯ ಲೋಕಸಭೆ ಕ್ಷೇತ್ರ ಮೊದಲ ದಿನ 3 ನಾಮಪತ್ರ
ಮಂಡ್ಯ

ಮಂಡ್ಯ ಲೋಕಸಭೆ ಕ್ಷೇತ್ರ ಮೊದಲ ದಿನ 3 ನಾಮಪತ್ರ

March 20, 2019

ಮಂಡ್ಯ: ಮಂಡ್ಯ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಅದಾಗಲೇ ಅಧಿ ಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದ್ದು, ಮೂರು ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಮೊದಲ ದಿನ ವಾದ ಇಂದು ಕೌಡ್ಲೆ ಚನ್ನಪ್ಪ ಎಂಬವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು, ಸಂಯುಕ್ತ ಜನತಾ ದಳ ಪಕ್ಷದಿಂದ ಒಂದು ಹಾಗೂ ಸಮಾಜವಾದಿ ಪಕ್ಷದಿಂದ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ಅಭ್ಯರ್ಥಿ ನಟರ ಸಿನಿಮಾ ನಿರ್ಬಂಧ: ಚಿತ್ರ ನಟರು ಚುನಾವಣಾ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿರುವುದರಿಂದ…

ಮಳವಳ್ಳಿಯಲ್ಲಿ ನಿಖಿಲ್ ರೋಡ್‍ಶೋ
ಮಂಡ್ಯ

ಮಳವಳ್ಳಿಯಲ್ಲಿ ನಿಖಿಲ್ ರೋಡ್‍ಶೋ

March 20, 2019

ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುವೆ, ಒಂದು ಅವಕಾಶ ಕೊಡಿ ಪ್ರಚಾರ ವೇಳೆ `ಯಶ್, ದರ್ಶನ್ ಗೋ ಬ್ಯಾಕ್’ ಘೋಷಣೆ ಯಾರಿಗೇ ಆಗಲಿ ಗೋಬ್ಯಾಕ್ ಎನ್ನುವುದು ಸರಿಯಲ್ಲ: ನಿಖಿಲ್ ಮಂಡ್ಯ: ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಮಂಗಳವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು. ಮಳವಳ್ಳಿ ತಾಲೂಕಿನ ದೇವಿರಳ್ಳಿ ಬಳಿ ಜೆಡಿಎಸ್ ಕಾರ್ಯಕರ್ತರಿಂದ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ದೊರೆಯಿತು. ಗಡಿ ಭಾಗದಿಂದ ಮಳವಳ್ಳಿ ಪಟ್ಟಣದವರೆಗೂ ಬೈಕ್‍ಗಳ ಮೆರವಣಿಗೆ ನಡೆಯಿತು. ದಳವಾಯಿ ಕೋಡಿಹಳ್ಳಿ,…

ನನ್ನ ದಾರಿ ಸುಗಮವಾಗಿಲ್ಲ ಎಂಬುದರ ಅರಿವಿದೆ: ಸುಮಲತಾ
ಮಂಡ್ಯ

ನನ್ನ ದಾರಿ ಸುಗಮವಾಗಿಲ್ಲ ಎಂಬುದರ ಅರಿವಿದೆ: ಸುಮಲತಾ

March 20, 2019

ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಮಂಡ್ಯ,: ಜಿಲ್ಲೆಯ ಜನರನ್ನು ಉದ್ದೇಶಿಸಿ ಪಕ್ಷೇತರ ಅಭ್ಯರ್ಥಿ ನಟಿ ಸುಮ ಲತಾ ಅಂಬರೀಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿದ್ದು, ಮಂಗಳವಾರ ವೈರಲ್ ಆಗಿದೆ. `ಮಂಡ್ಯದ ಜನತೆಯಲ್ಲಿ ನನ್ನ ಮನ ದಾಳದ ಒಂದು ಮಾತು ಹಂಚಿಕೊಳ್ಳಲು ಬಯಸುತ್ತೇನೆ. ಅಂಬರೀಷ್ ನಮ್ಮೆಲ್ಲರನ್ನು ಅಗಲಿ ಹೋದ ದಿನಗಳಿಂದ ನನ್ನ ಜೀವನದಲ್ಲಿ ಬಿರು ಗಾಳಿ ಎಬ್ಬಿಸಿ ಕತ್ತಲಿನೆಡೆಗೆ ತಳ್ಳಿತ್ತು. ಇಂತಹ ಸಂದರ್ಭ ದಲ್ಲಿ ಜನರ ಶಕ್ತಿ ಮತ್ತು ಪ್ರೀತಿ ಕತ್ತಲಿನಿಂದ…

ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ
ಮಂಡ್ಯ

ಶ್ರೀರಂಗಪಟ್ಟಣ: ಸೆಸ್ಕ್ ಕಚೇರಿಗೆ ಬೆಳಗೊಳ ಗ್ರಾಮಸ್ಥರ ಮುತ್ತಿಗೆ

March 20, 2019

ಶ್ರೀರಂಗಪಟ್ಟಣ: ನಿರಂತರ ಭಾಗ್ಯಜ್ಯೋತಿ ಹಾಗೂ ರಾಜೀವ್ ಗಾಂಧಿ ಭಾಗ್ಯ ಜ್ಯೋತಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬೆಳಗೊಳ ಗ್ರಾಮಸ್ಥರು ಮಂಗಳವಾರ ಇಲ್ಲಿನ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಎರಡೂ ಯೋಜನೆಗಳಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನು ಭವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ದೊಂದಿಗೆ ಮೀಟರ್ ಅಳವಡಿಸಬೇಕಿದೆ. ಈ ಕಾಮಗಾರಿಯ ಗುತ್ತಿಗೆದಾರ ಮತ್ತು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ 100 ಫಲಾನುಭವಿ ಕುಟಂಬ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 27…

ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು
ಮಂಡ್ಯ

ಹೋರಾಟಗಾರರನ್ನು ಕಣ್ಣುಮುಚ್ಚಿ ನಂಬಿದ ಅಯೋಗ್ಯರು ನಾವು

March 20, 2019

ನ್ಯಾಯಾಲಯಕ್ಕೆ 6,750 ರೂ. ದಂಡ ಕಟ್ಟಿ ಹೊರಬಂದ ಕಾವೇರಿ ಹೋರಾಟಗಾರರ ಬೇಸರದ ನುಡಿ ಮಂಡ್ಯ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ವಾದಾಗ ಹಾಗೂ ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದ ಕಾವೇರಿ ಹೋರಾಟಗಾರರನ್ನು ನಂಬಿ ಜಿಲ್ಲೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಪ್ರತಿಭಟನೆಗಳನ್ನು ನಡೆಸಿದ್ದ `ನೈಜ’ ಹೋರಾಟಗಾರರು ಈಗ ಪಶ್ಚಾತ್ತಾಪಪಡುತ್ತಿದ್ದಾರೆ. ತಾಲ್ಲೂಕಿನ ಹಳೆಬೂದನೂರು ಗ್ರಾಪಂ ಸದಸ್ಯರಾದ ಬಿ.ಕೆ.ಕುಮಾರ್, ಸತೀಶ್, ಬಿ.ಟಿ.ಚಂದ್ರಶೇಖರ್, ಬೂದನೂರು ಶಿವು, ಚಿಕ್ಕಸಿದ್ದು, ಲೋಹಿತ್ ಕುಮಾರ್,…

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ
ಮಂಡ್ಯ, ಮೈಸೂರು

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ

March 17, 2019

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವಿನ ಸ್ಪರ್ಧೆ ಜಿಲ್ಲೆಯಲ್ಲಿ ಹೈ ವೊಲ್ಟೇಜ್ ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಇಬ್ಬರೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಪುತ್ರ ನಿಖಿಲ್ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಘೋಷಣೆಯಾಗುತ್ತಿದ್ದಂತೆ ಸಖತ್ ಆಕ್ಟೀವ್ ಆಗಿದ್ದಾರೆ. ಇದರ ಭಾಗವಾಗಿ ಇಂದು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವ ರೊಟ್ಟಿಗೆ ಕಾಂಗ್ರೆಸ್ ನಾಯಕರನ್ನು…

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಮಂಡ್ಯ

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ

March 16, 2019

ಮೇಲುಕೋಟೆ: ಏಕಾದಶಿಯ ಶುಭದಿನವಾದ ಭಾನುವಾರ ರಾತ್ರಿ ನಡೆಯುವ ಶ್ರೀಚೆಲುವನಾರಾಯಣ ಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಉತ್ಸವಕ್ಕೆ ಮೇಲು ಕೋಟೆ ಸಜ್ಜುಗೊಂಡಿದೆ. ಉತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋ ಪತಂಡವಾಗಿ ಆಗಮಿಸಿ ದ್ದಾರೆ. ಇಲ್ಲಿನ ಎಲ್ಲಾ ಛತ್ರಗಳೂ ಸಹ ಭಕ್ತರಿಂದ ಕಿಕ್ಕಿರಿದು ತುಂಬಿವೆ. ರಜಾದಿನದಂದು ನಡೆಯುತ್ತಿರುವ ಈ ಸಲದ ವೈರಮುಡಿ ಉತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಮಾಡಲಾಗಿದೆ. ಭಕ್ತರು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢ ನಾಗಿ ಅಲಂಕಾರಗೊಂಡು ವೈರಮುಡಿ…

ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

March 16, 2019

ಮದ್ದೂರು: ತಾಲೂಕಿನ ಕಾರ್ಕಳ್ಳಿಯ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಹಬ್ಬಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗ್ರಾಮದ ಒಂದು ಗುಂಪಿನ ಭಕ್ತಾಧಿಗಳು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು. ಪ್ರತಿವರ್ಷ 2 ಗುಂಪಿಗೆ ಅವಕಾಶ ನೀಡು ತ್ತಿದ್ದ ಜಿಲ್ಲಾಡಳಿತ ಈ ಬಾರಿ ಒಂದು ಗುಂಪಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಜಿಲ್ಲಾಡಳಿತ ಹಬ್ಬ ಮಾಡಲು ಗ್ರಾಮದಲ್ಲಿರುವ 2 ಗುಂಪಿಗೆ ಅವಕಾಶ ನೀಡಿ ಹಣವನ್ನು ನೀಡುತ್ತಿತ್ತು. ಈ ಸಂಬಂಧವಾಗಿ ಇತ್ತೀಚೆಗೆ…

1 49 50 51 52 53 108
Translate »