ಮಂಡ್ಯ

ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ:  ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ
ಮಂಡ್ಯ

ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ: ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ

February 11, 2019

ರಾಜಕೀಯ ಪ್ರವೇಶ ಅಂಬಿ ಆಶಯವಲ್ಲ, ಅಭಿಮಾನಿಗಳ ಆಶಯ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ನನ್ನ ಪ್ರಥಮ ಆದ್ಯತೆ ಮಂಡ್ಯ: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸುಮಲತಾ, ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಕಾಂಗ್ರೆಸ್ ಪಕ್ಷ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು. ನಾಗಮಂಗಲ ತಾಲೂಕಿನ ಆದಿಚುಂಚನ ಗಿರಿ ಶ್ರೀಕ್ಷೇತ್ರಕ್ಕೆ ಭಾನುವಾರ ಬೆಳಿಗ್ಗೆ ಪುತ್ರ ಅಭಿಷೇಕ್ ಸೇರಿದಂತೆ ಚಿತ್ರರಂಗದ ಗಣ್ಯ ರೊಂದಿಗೆ ಭೇಟಿ ನೀಡಿ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಅವರು, ನಂತರ ಮಠಕ್ಕೆ ತೆರಳಿ ಶ್ರೀನಿರ್ಮಲಾನಂದ ನಾಥ…

ಏತ ನೀರಾವರಿ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀರಿನ ಸೌಲಭ್ಯ: ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಏತ ನೀರಾವರಿ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀರಿನ ಸೌಲಭ್ಯ: ಸಚಿವ ಸಿ.ಎಸ್.ಪುಟ್ಟರಾಜು

February 11, 2019

ಚಿನಕುರಳಿ: ಶ್ಯಾದನಹಳ್ಳಿ ಗೇಟ್ ಬಳಿ ಮೊಸಳೆ ಹಳ್ಳದಲ್ಲಿ ಹರಿದು ಹೋಗುವ ಬೀಳು ನೀರನ್ನು ಏತ ನೀರಾವರಿ ಯೋಜನೆಯಡಿ 80 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಅನುಕೂಲ ಮಾಡಿ ಕೊಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಗ್ರಾಮದಲ್ಲಿ ನೂತನವಾಗಿ ಕರಿಪುಟ್ಟೇ ಗೌಡರ ಕುಟುಂಬ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ನೀರಾವರಿ ವಂಚಿತವಾಗಿ ರುವ ನಾರಾಯಣಪುರ, ಬಳಘಟ್ಟ, ಮೇಲು ಕೋಟೆ, ಜಕ್ಕನಹಳ್ಳಿ…

ಚಿನಕುರಳಿಯಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ
ಮಂಡ್ಯ

ಚಿನಕುರಳಿಯಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ

February 11, 2019

ಚಿನಕುರಳಿ: ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಸಿ.ಅಶೋಕ್ ಭಾನುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಓದು ಬರಹ ಗೊತ್ತಿಲ್ಲದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮಹಿಳೆಯರು ಅಕ್ಷರಸ್ಥರಾಗಬೇಕು ಎಂದು ತಿಳಿಸಿದರು. ಸಾಕ್ಷರ ಭಾರತ್ ಕಾರ್ಯಕ್ರಮವನ್ನು ಕಳೆದ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಸಮ್ಮಿಶ್ರ ಆರಂಭಿಸಿದೆ. ಇದರಿಂದ ಸಾಕಷ್ಟು ಅನಕ್ಷರಸ್ಥ ಮಹಿಳೆಯರಿಗೆ ಅನುಕೂಲ ವಾಗಲಿದೆ ಎಂದರು. ಈ ವೇಳೆ ತಾಪಂ ಸದಸ್ಯರಾದ ಸಿ.ಎಸ್.ಗೋಪಾಲೇಗೌಡ,…

ಕಾನೂನಿನಡಿ ಶ್ರೀರಾಮ ಮಂದಿರ ನಿರ್ಮಿಸಲಿ
ಮಂಡ್ಯ

ಕಾನೂನಿನಡಿ ಶ್ರೀರಾಮ ಮಂದಿರ ನಿರ್ಮಿಸಲಿ

February 11, 2019

ಶ್ರೀರಂಗಪಟ್ಟಣ: ಕಾನೂನಿನಲ್ಲಿ ರುವ ಅವಕಾಶವನ್ನು ಬಳಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣ ಮಾಡ ಬೇಕು ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಶ್ಯಾಮ್‍ಭಟ್ ತಿಳಿಸಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರಾಜ್ಯ ದಿಕ್ಸೂಚಿ ಮತ್ತು ಸುಧಾ ರಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅವರ ರಾಮಮಂದಿರ ಮತ್ತು ಸುಗ್ರಿವಾಜ್ಞೆ ಸಾಧ್ಯತೆ ಒಂದು ಅವಲೋಕನ ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಜವಹರಲಾಲ್ ನೆಹರು ವಿಶ್ವವಿದ್ಯಾ ನಿಲಯದಲ್ಲಿ ಅಧ್ಯಯನ ಮಾಡಿದ ಹೆಚ್ಚು ಮಂದಿ ನ್ಯಾಯಾಧೀಶರು ಈಗ ಸುಪ್ರೀಂ…

ರಥಸಪ್ತಮಿ, ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಮೇಲುಕೋಟೆ ಸಜ್ಜು
ಮಂಡ್ಯ

ರಥಸಪ್ತಮಿ, ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಮೇಲುಕೋಟೆ ಸಜ್ಜು

February 11, 2019

ಮೇಲುಕೋಟೆ: ಇಲ್ಲಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಾ ಲಯ ಫೆ.12 ರಂದು ನಡೆಯುವ ರಥಸಪ್ತಮಿ ಮಹೋ ತ್ಸವ ಮತ್ತು 20ನೇ ವರ್ಷದ ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಸಜ್ಜುಗೊಂಡಿದೆ. ಅಂದು ಮುಂಜಾನೆ 6ರಿಂದ 9.30 ರವರೆಗೆ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳ ದಲ್ಲಿ ಕರ್ನಾಟಕದ ಎಲ್ಲಾ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಭಾರತ ಸರ್ಕಾರದ ತಂಜಾವೂರಿನ ಸೌತ್ ಜೋನ್ ಕಲ್ಚರಲ್ ಸೆಂಟರ್ ಪ್ರಾಯೋ…

ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ
ಮಂಡ್ಯ, ಮೈಸೂರು

ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ

February 5, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದನ್ನು ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ. ಸಂಪಾದಕರೊಟ್ಟಿಗೆ ಅನೌಪಚಾರಿಕ ವಾಗಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಕೇಳಿ ಬಂದ ಪ್ರಶ್ನೆಗೆ ತಮ್ಮ ಪುತ್ರನ ಬಗ್ಗೆ ವ್ಯಾಖ್ಯಾನ ಮಾಡುವ ಮೂಲಕ ಆತನೇ ಅಭ್ಯರ್ಥಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಡಾಕ್ಟರ್…

ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ

ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

January 24, 2019

ಸುರಂಗಕ್ಕೆ ಕುತ್ತು ತಂದಿರುವ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ ಮಿಮ್ಸ್ ವಿರುದ್ಧ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಸಬ್ಬನಕುಪ್ಪೆ ಗ್ರಾಪಂ ವಿರುದ್ಧ ನೌಕರಳ ಧರಣಿ ತಾ.ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ ನೆಲಮಾಕನಹಳ್ಳಿ ಪಡಿತರದಾರರ ಪ್ರತಿಭಟನೆ ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಜಿಲ್ಲಾದ್ಯಂತ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಹೊರಗುತ್ತಿಗೆ ಕಾರ್ಮಿಕರು ಹಾಗೂ ರೈತರು, ಮದ್ದೂರಲ್ಲಿ ರೈತರು, ಬೆಸಗರಹಳ್ಳಿ, ಮಳವಳ್ಳಿಯಲ್ಲಿ ಪಡಿತರದಾರರು, ಸಬ್ಬನಕುಪ್ಪೆ ಗ್ರಾಪಂ ಮುಂದೆ ನೌಕರೆಯೊಬ್ಬರು ಒಳಗೊಂಡಂತೆ ಹಲವೆಡೆ ಪ್ರತಿಭಟನೆ ನಡೆದಿರುವ…

ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ
ಮಂಡ್ಯ

ಫೆ. 10ರಂದು ವೀರಶೈವ ಮಹಾಸಭಾ ಚುನಾವಣೆ

January 24, 2019

ಕೆ.ಆರ್.ಪೇಟೆ: ತಾಲೂಕು ವೀರಶೈವ ಮಹಾಸಭಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.10ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜ.29 ಮಧ್ಯಾಹ್ನ 3ಗಂಟೆವರೆಗೆ ಕೊನೆಯ ದಿನವಾಗಿರುತ್ತದೆ. ನಾಮಪತ್ರ ವಾಪಸ್ ಪಡೆಯಲು ಫೆ.2ರಂದು ಮಧ್ಯಾಹ್ನ 3ಗಂಟೆಯವರೆಗೆ ಅವಕಾಶವಿರುತ್ತದೆ. ಫೆ.10ರಂದು ಬೆಳಿಗ್ಗೆ 8ರಿಂದ 4ಗಂಟೆಯವರೆಗೆ ನಡೆಯಲಿದೆ ನಂತರ ಚುನಾವಣೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾ ಗುವುದು. ಪಟ್ಟಣದ ಹಳೆ ಕಿಕ್ಕೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ರೈಸ್ ಮಿಲ್ ಕಟ್ಟಡದಲ್ಲಿರುವ ತಾಲೂಕು ವೀರಶೈವ ಮಹಾಸಭಾ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ಹಾಗೂ ನಾಮಪತ್ರ…

ಹಳ್ಳಕ್ಕೆ ಉರುಳಿದ ಕಾರು: ಅದರಲ್ಲಿದ್ದವರು ಅಪಾಯದಿಂದ ಪಾರು
ಮಂಡ್ಯ

ಹಳ್ಳಕ್ಕೆ ಉರುಳಿದ ಕಾರು: ಅದರಲ್ಲಿದ್ದವರು ಅಪಾಯದಿಂದ ಪಾರು

January 24, 2019

ಮಂಡ್ಯ: ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಹುಂಡೈ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಹಳ್ಳಕ್ಕೆ ಬಿದ್ದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ನಡೆದಿದೆ. ಕಾರು ಮಗುಚಿ ಬಿದ್ದಿದ್ದರು ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳ ನೋಂದಣಿ ಹೊಂದಿರುವ ಈ ಹುಂಡೈ ಕಾರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿಯಾದ ಕಾರು ಸಿನಿಮೀಯಾ ರೀತಿಯಲ್ಲಿ ಸುಮಾರು ನಾಲ್ಕು ಪಲ್ಟಿ ಆಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ…

ಮಂಡ್ಯ ಜಿಲ್ಲೆಯ ವಿಜ್ಞಾನಿಗೆ ಒಲಿದ ‘ಬಾಲ ಪುರಸ್ಕಾರ’
ಮಂಡ್ಯ

ಮಂಡ್ಯ ಜಿಲ್ಲೆಯ ವಿಜ್ಞಾನಿಗೆ ಒಲಿದ ‘ಬಾಲ ಪುರಸ್ಕಾರ’

January 24, 2019

ಮಂಡ್ಯ: ರಾಜ್ಯದ ಹೆಮ್ಮೆಯ ಪುತ್ರ, ಮಂಡ್ಯ ಜಿಲ್ಲೆಯ ಯುವ ವಿಜ್ಞಾನಿ ಸಿ.ಎಸ್.ಮೊಹಮ್ಮದ್ ಸುಹೇಲ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಧಾನ್ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಸ್ಥಳೀಯ ಮಟ್ಟದಿಂದ ಸಂಶೋಧನೆಗಳನ್ನು ಆರಂಭಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೊಹಮ್ಮದ್ ಸುಹೇಲ್‍ಗೆ ಈ ಬಾರಿಯ ನಾವೀನ್ಯದ (ಇನೋವೆಷನ್) ಕ್ಷೇತ್ರದಲ್ಲಿ ಬಾಲ ಪುರಸ್ಕಾರ ಪ್ರಶಸ್ತಿ ಒಲಿದಿದೆ. ನಾವೀನ್ಯತೆ, ವಿದ್ವಾಂಸ, ಕ್ರೀಡಾ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಈ ವರ್ಷ ಒಟ್ಟು 26 ಮಕ್ಕಳಿಗೆ…

1 53 54 55 56 57 108
Translate »