ಚಿನಕುರಳಿಯಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ
ಮಂಡ್ಯ

ಚಿನಕುರಳಿಯಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ

February 11, 2019

ಚಿನಕುರಳಿ: ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಸಿ.ಅಶೋಕ್ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಓದು ಬರಹ ಗೊತ್ತಿಲ್ಲದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಸಾಕ್ಷರ ಭಾರತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮಹಿಳೆಯರು ಅಕ್ಷರಸ್ಥರಾಗಬೇಕು ಎಂದು ತಿಳಿಸಿದರು.

ಸಾಕ್ಷರ ಭಾರತ್ ಕಾರ್ಯಕ್ರಮವನ್ನು ಕಳೆದ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಸಮ್ಮಿಶ್ರ ಆರಂಭಿಸಿದೆ. ಇದರಿಂದ ಸಾಕಷ್ಟು ಅನಕ್ಷರಸ್ಥ ಮಹಿಳೆಯರಿಗೆ ಅನುಕೂಲ ವಾಗಲಿದೆ ಎಂದರು. ಈ ವೇಳೆ ತಾಪಂ ಸದಸ್ಯರಾದ ಸಿ.ಎಸ್.ಗೋಪಾಲೇಗೌಡ, ಅಲ್ಪಳ್ಳಿ ಗೋವಿಂದಯ್ಯ, ಗ್ರಾಪಂ ಅಧ್ಯಕ್ಷರಾದ ವರಲಕ್ಷ್ಮಿ, ಕೃಷ್ಣೇಗೌಡ, ಮಾಜಿ ಅಧ್ಯಕ್ಷ ನಾಗಣ್ಣ, ಸಾಕ್ಷರ ಭಾರತ್ ತಾಲೂಕು ಯೋಜನಾಧಿಕಾರಿ ಎಸ್.ರಾಘವೇಂದ್ರ, ಗ್ರಾಪಂ ಸದಸ್ಯರಾದ ಸಿ.ಎ. ಲೋಕೇಶ್, ಸಿ.ಡಿ.ಮಹದೇವು, ಒಕ್ಕೂಟದ ಅಧ್ಯಕ್ಷ ಕಾಮಾಕ್ಷಿ, ಲಕ್ಷ್ಮಿ, ವಿನುತ, ರೂಪ ಸೇರಿದಂತೆ ಹಲವರಿದ್ದರು.

Translate »