ಏತ ನೀರಾವರಿ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀರಿನ ಸೌಲಭ್ಯ: ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಏತ ನೀರಾವರಿ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಗೆ ನೀರಿನ ಸೌಲಭ್ಯ: ಸಚಿವ ಸಿ.ಎಸ್.ಪುಟ್ಟರಾಜು

February 11, 2019

ಚಿನಕುರಳಿ: ಶ್ಯಾದನಹಳ್ಳಿ ಗೇಟ್ ಬಳಿ ಮೊಸಳೆ ಹಳ್ಳದಲ್ಲಿ ಹರಿದು ಹೋಗುವ ಬೀಳು ನೀರನ್ನು ಏತ ನೀರಾವರಿ ಯೋಜನೆಯಡಿ 80 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಮೂಲಕ ಕೆ.ಬೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಅನುಕೂಲ ಮಾಡಿ ಕೊಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಗ್ರಾಮದಲ್ಲಿ ನೂತನವಾಗಿ ಕರಿಪುಟ್ಟೇ ಗೌಡರ ಕುಟುಂಬ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ನೀರಾವರಿ ವಂಚಿತವಾಗಿ ರುವ ನಾರಾಯಣಪುರ, ಬಳಘಟ್ಟ, ಮೇಲು ಕೋಟೆ, ಜಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಗೆ 200 ಕೋಟಿ ರೂ. ಅಂದಾಜಿಸಲಾಗಿದ್ದು, ಈ ಯೋಜನೆ ಗಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ 100 ಕೋಟಿ ಮಂಜೂರು ಮಾಡಿದ್ದಾರೆ. ಉಳಿದ ಹಣವನ್ನು ಸಹ ಮಂಜೂರು ಮಾಡಿಸಿ ಆ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಿ ನೀರಾವರಿ ಪ್ರದೇಶ ವನ್ನಾಗಿ ಮಾಡಲಾಗುವುದು ಎಂದರು.
ಚಿನಕುರಳಿ ಗ್ರಾಮದ ಶ್ರೀಆಂಜನೇಯ ಸ್ವಾಮಿ, ರಾಮದೇವರ ದೇವಸ್ಥಾನ ಹಾಗೂ ಗುಮ್ಮನಹಳ್ಳಿಯ ಹಿರಿದೇವಮ್ಮನ ದೇವ ಸ್ಥಾನದ ಅಭಿವೃದ್ದಿಗಾಗಿ ಸರ್ಕಾರದಿಂದ 2.10 ಕೋಟಿ ಹಣ ಮಂಜೂರು ಮಾಡಿಸಿ ದ್ದೇನೆ. ಜತೆಗೆ ಗ್ರಾಮದ ರಾಮಮಂದಿದ ದೇವಸ್ಥಾನದ ಆವರಣವನ್ನು ಅಭಿವೃದ್ಧಿಪಡಿ ಸಲು ತೀರ್ಮಾನಸಿದ್ದೇನೆ. ಅದಕ್ಕೆ ಗ್ರಾಮಸ್ಥರು, ಗ್ರಾಮದ ಯಜಮಾನರು ನಿಂತು ಜವಾಬ್ದಾರಿ ಹೊರಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಜನರು ನನ್ನನ್ನು ಮನೆ ಮಗನಂತೆ ಪ್ರೀತಿಸುತ್ತಾರೆ. ಆದರೂ ನನಗೆ ನನ್ನ ಹುಟ್ಟೂರಿನ ಮೇಲೆ ಅಪಾರ ಪ್ರೀತಿ. ನನಗೆ ಜನ್ಮಕೊಟ್ಟ ಚಿನಕುರಳಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಗ್ರಾಮದ ಋಣ ತೀರಿಸ ಬೇಕಿದೆ. ಅದಕ್ಕಾಗಿಯೇ ನನ್ನ ತಂದೆ-ತಾಯಿ ಹೆಸರಿನಲ್ಲಿ ನನಗೆ ಸಿಗುವ ವೇತನ ದಲ್ಲಿ ಸುಮಾರು 50 ಲಕ್ಷ ಹಣ ವನ್ನು ಗ್ರಾಮದ ಅಭಿವೃದ್ಧಿಗಾಗಿ ನೀಡುತ್ತೇನೆ. ಜೊತೆಗೆ ಸರ್ಕಾರದಿಂದ ಅನುದಾನ ತಂದು ಗ್ರಾಮ ವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸುತ್ತೇನೆ ಎಂದರು. ಕೊಮ್ಮೇರಹಳ್ಳಿ ಪೀಠಾಧ್ಯಕ್ಷ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಕೆ.ಕೆಂಪೇಗೌಡ ಮಾತನಾಡಿದರು.

ಜಿಪಂ ಸದಸ್ಯ ಸಿ.ಅಶೋಕ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪುಟ್ಟೇ ಗೌಡ, ಸದಸ್ಯ ಸಿ.ಎಸ್.ಗೋಪಾಲೇಗೌಡ, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷ ನಾಗರಾಜು, ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮೇಗೌಡ, ವಿಎಸ್‍ಎಸ್ ಎನ್‍ಬಿ ಅಧ್ಯಕ್ಷ ಕೆ.ಎಸ್.ಜಯರಾಮ್, ಡೈರಿ ಅಧ್ಯಕ್ಷ ಹೊನ್ನರಾಜು, ಅರಳುಕುಪ್ಪೆ ಗ್ರಾಪಂ ಅಧ್ಯಕ್ಷ ಮಹದೇವು, ಹೊನ ಗಾನಹಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಹಿರಿಯರಾದ ಲಕ್ಷ್ಮೇಗೌಡ, ಯಜಮಾನರಾದ ಸಿ.ಎಂ.ತಮ್ಮಣ್ಣೇಗೌಡ, ಸುಬ್ಬೇಗೌಡ, ಕಂಟ್ಲೇ ಕಾಳೇಗೌಡ, ಎಚ್.ಎಲ್.ಸ್ವಾಮೀಗೌಡ, ಎ.ಎಸ್. ರಮೇಶ್ ಸೇರಿದಂತೆ ಹಲವರಿದ್ದರು.

Translate »