ಕಾನೂನಿನಡಿ ಶ್ರೀರಾಮ ಮಂದಿರ ನಿರ್ಮಿಸಲಿ
ಮಂಡ್ಯ

ಕಾನೂನಿನಡಿ ಶ್ರೀರಾಮ ಮಂದಿರ ನಿರ್ಮಿಸಲಿ

February 11, 2019

ಶ್ರೀರಂಗಪಟ್ಟಣ: ಕಾನೂನಿನಲ್ಲಿ ರುವ ಅವಕಾಶವನ್ನು ಬಳಸಿಕೊಂಡು ಶ್ರೀರಾಮ ಮಂದಿರ ನಿರ್ಮಾಣ ಮಾಡ ಬೇಕು ಎಂದು ಮೈಸೂರಿನ ಹಿರಿಯ ನ್ಯಾಯವಾದಿ ಶ್ಯಾಮ್‍ಭಟ್ ತಿಳಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರಾಜ್ಯ ದಿಕ್ಸೂಚಿ ಮತ್ತು ಸುಧಾ ರಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅವರ ರಾಮಮಂದಿರ ಮತ್ತು ಸುಗ್ರಿವಾಜ್ಞೆ ಸಾಧ್ಯತೆ ಒಂದು ಅವಲೋಕನ ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಜವಹರಲಾಲ್ ನೆಹರು ವಿಶ್ವವಿದ್ಯಾ ನಿಲಯದಲ್ಲಿ ಅಧ್ಯಯನ ಮಾಡಿದ ಹೆಚ್ಚು ಮಂದಿ ನ್ಯಾಯಾಧೀಶರು ಈಗ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾಧೀಶರಾಗಿದ್ದಾರೆ. ಆದರೆ ಸಲಿಂಗಕಾಮ ಅಪರಾಧವಲ್ಲ ಎಂದು ಹೇಳುವ ನ್ಯಾಯಾಲಯ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಡುತ್ತದೆ ಎಂದು ನಂಬಿಕೆ ಇಲ್ಲ ಎಂದರು. ರಾಜ್ಯ ಸಾಮರಸ್ಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, 1822ರಲ್ಲೇ ರಾಮಮಂದಿರ ನಿರ್ಮಾಣ ಸಂಬಂಧ ಬ್ರಿಟನ್ ಕೋರ್ಟ್‍ನಲ್ಲಿ ಪ್ರಕರಣ ದಾಖ ಲಾಗಿದೆ. ನ್ಯಾಯಾಧೀಶರ ಇಚ್ಛಾಶಕ್ತಿ ಕೊರತೆಯಿಂದಾಗಿ ಪ್ರಕರಣ ಇತ್ಯರ್ಥ ಪಡಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದÀು ಬೇಸರ ವ್ಯಕ್ತಪಡಿಸಿದರು.

ಡಾ.ಸುಧಾಕರ್ ಹೊಸಳ್ಳಿ ಮಾತನಾಡಿ, ಧಾರ್ಮಿಕ ಹಿತಾಸಕ್ತಿಗಳನ್ನು ಉಳಿಸಿಕೊಳ್ಳ ಬೇಕು. ಮತದಾನದ ದಿನವನ್ನು ಧರ್ಮ ಸಂಸ್ಥಾಪನಾ ದಿನವನ್ನಾಗಿ ಆಚರಿಸಬೇಕು. ಯುವಕರಿಗೆ ಮತದಾನದ ಅರಿವು ಮೂಡಿಸ ಬೇಕು. ಇಲ್ಲದಿದ್ದರೆ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತದೆ. ರಾಜ್ಯ ಬಜೆಟ್ ಅಧಿವೇಶನ ದಲ್ಲಿ ಪ್ರತಿಪಕ್ಷದ ನಾಯಕರಿಗೆ ಬಜೆಟ್ ಪ್ರತಿ ಗಳನ್ನು ನೀಡದಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದ್ದು. ಅದನ್ನು ಯುವಕ ರು ಖಂಡಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಚುನಾ ವಣೆಯಲ್ಲಿ ವಿಜೇತರಾದ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕುಗಳ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಗುಜರಾತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಕುಮಾರ ಸೋಮ ಶೇಖರ ಶರ್ಮಾ, ರಾಜ್ಯ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬಿ.ಎಸ್.ಅನುಪಮ, ಡಾ.ಪ್ರದೀಪ್, ಮದನ್, ಅಭಿ ಕಾರ್ಯಕ್ರಮದಲ್ಲಿದ್ದರು.

Translate »