ಮಂಡ್ಯ

ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ
ಮಂಡ್ಯ

ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ

October 22, 2018

ಕೆ.ಆರ್.ಪೇಟೆ:  ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಅ. 23ರಂದು ಪಟ್ಟಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಹಿರಂಗ ಸಭೆಯು ನಡೆಯಲಿದ್ದು, ಸಭೆಯಲ್ಲಿ ತಾಲೂಕಿನ ಎಲ್ಲಾ 6 ಹೋಬಳಿಗಳಿಂದ 25 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಿಲ್ಲೆಯ ರೈತರ ಜೀವನಾಡಿ…

ಸಹಕಾರಿ ಸಂಘಗಳು ದುಡಿಯುವ ವರ್ಗದ ಆಶಾಕಿರಣ
ಮಂಡ್ಯ

ಸಹಕಾರಿ ಸಂಘಗಳು ದುಡಿಯುವ ವರ್ಗದ ಆಶಾಕಿರಣ

October 22, 2018

ಮಂಡ್ಯ: ಸಾಲಸೌಲಭ್ಯ ನೀಡುವುದರ ಜೊತೆಗೆ ಗುಡಿಕೈಗಾರಿಕೆ, ಹೈನು ಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಆರ್ಥಿಕ ನೆರವು ಕಲ್ಪಿಸುತ್ತಿರುವ ಸಹಕಾರಿ ಸಂಘಗಳು ದುಡಿಯುವ ವರ್ಗಗಳ ಪಾಲಿಗೆ ಆಶಾಕಿರಣವಾಗಿವೆ ಎಂದು ಹಿರಿಯ ಸಹಕಾರಿ ಧುರೀಣ ಕೌಡ್ಲೆ ಚನ್ನಪ್ಪ ಹೇಳಿದರು. ನಗರದ ಸುಭಾಷ್ ನಗರದಲ್ಲಿರುವ ಕಾಯಕಯೋಗಿ ಸಹಕಾರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರೈತ ಮಹಿಳೆಯರಿಗೆ ಕಲ್ಪವೃಕ್ಷ ವಿತರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ವಿವಿಧ ಕಾಯಕಗಳನ್ನು ಮಾಡುವ ಮಹಿಳೆ ಯರು, ವರ್ತಕರು, ಕೃಷಿಕರು, ಮೀನು ಗಾರಿಕೆ, ಹಸು ಸಾಕಾಣಿಕೆಗೆ ಅಗತ್ಯ…

ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ
ಮಂಡ್ಯ

ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ

October 22, 2018

ಮಂಡ್ಯ:  ‘ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಕನಸು ಉನ್ನತ ಹುದ್ದೆ ಅಲಂಕರಿಸುವುದು ಆಗಬೇಕು. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಛಲ ಮೈಗೂಡಿಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ಸೂಕ್ತ ತರಬೇತಿಯನ್ನು ನೀಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ ನೀಡಿದರು. ನಗರದ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾ ರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐಎಎಸ್, ಐಎಫ್‍ಎಸ್…

ನಾಗಮಂಗಲದಲ್ಲಿ ಜೆಡಿಎಸ್ ಸಮಾವೇಶದ ಪೂರ್ವಭಾವಿ ಸಭೆ: ಸುರೇಶ್‍ಗೌಡ-ಶಿವರಾಮೇಗೌಡ ಬೆಂಬಲಿಗರ ನಡುವೆ ಕಚ್ಚಾಟ
ಮಂಡ್ಯ

ನಾಗಮಂಗಲದಲ್ಲಿ ಜೆಡಿಎಸ್ ಸಮಾವೇಶದ ಪೂರ್ವಭಾವಿ ಸಭೆ: ಸುರೇಶ್‍ಗೌಡ-ಶಿವರಾಮೇಗೌಡ ಬೆಂಬಲಿಗರ ನಡುವೆ ಕಚ್ಚಾಟ

October 22, 2018

ಮಂಡ್ಯ:  ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಅ. 22ರಂದು ನಾಗಮಂಗಲದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶದ ಅಂಗವಾಗಿ ಪಟ್ಟಣ ದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಸುರೇಶ್‍ಗೌಡ ಹಾಗೂ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅಸಮಾಧಾನ ಸ್ಫೋಟಗೊಂಡಿದೆ. ಸಮಾವೇಶದ ಕುರಿತು ಶಿವರಾಮೇ ಗೌಡರ ಬೆಂಬಲಿಗ ಹಾಗೂ ಜಿಲ್ಲಾ ಪಂಚಾ ಯಿತಿ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಪ್ರತಿ ಜಿಪಂ ಕ್ಷೇತ್ರದಿಂದಲೂ ಜನರು ಹಾಗೂ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಲು ಯಾವ ರೀತಿ ಪೂರ್ವ…

ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ
ಮಂಡ್ಯ

ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ

October 20, 2018

ಎಲ್ಲೆಡೆ ಸಡಗರ, ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾನಪದ ಕಲಾತಂಡಗಳ ಅದ್ಧೂರಿ ಮೆರವಣಿಗೆ ಮಂಡ್ಯ:  ಜಿಲ್ಲೆಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆಯುಧಪೂಜೆ ಅಂಗವಾಗಿ ಸರ್ಕಾರಿ ಕಚೇರಿಗಳು, ಬಸ್ ಡಿಪೋ, ಲಾರಿ, ಆಟೋ ನಿಲ್ದಾಣ, ಮನೆ, ಕಾರ್ಖಾನೆ, ಆಲೆಮನೆ, ಪಂಪ್‍ಸೆಟ್, ಅಂಗಡಿ-ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ನಡೆದರೆ. ದಸರಾ ಅಂಗ ವಾಗಿ ಜಿಲ್ಲೆಯ ವಿವಿಧೆಡೆ ಜಾನಪದ ಕಲಾ ತಂಡಗಳೊಂದಿಗೆ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು….

ಕೆಆರ್‌ಎಸ್‌ ಹೊರ ಹರಿವು ಹೆಚ್ಚಳ
ಮಂಡ್ಯ

ಕೆಆರ್‌ಎಸ್‌ ಹೊರ ಹರಿವು ಹೆಚ್ಚಳ

October 20, 2018

ಮಂಡ್ಯ: ಕೊಡಗು ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಭಾರಿ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಕೆ.ಆರ್‍ಎಸ್‍ನ ನೀರಿನ ಮಟ್ಟ 124.80 ಅಡಿ ಇದ್ದು, ಹೊರಹರಿವು 11,988 ಕ್ಯೂಸೆಕ್ ಇದೆ. ಒಟ್ಟು 49.452 ಟಿಎಂಸಿ ನೀರಿನ ಸಂಗ್ರಹವಿದ್ದು, ಮಳೆ ಹೆಚ್ಚಾದರೆ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ.

ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮನೆಗಳ್ಳತನ

October 20, 2018

ಮಂಡ್ಯ: ಕೃಷ್ಣರಾಜ ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಮನೆಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಭಾರತಿ ಎಂಬುವವರ ಮನೆಯ ಬೀಗ ಮುರಿದು ದುಷ್ಕರ್ಮಿ ಗಳು ಕಳ್ಳತನ ಮಾಡಿದ್ದಾರೆ. ಮನೆಯ ಮಾಲೀಕರಾದ ಭಾರತಿ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಗಿಲು ಮುರಿದು ಕಳ್ಳತನ ನಡೆಸಿ ದ್ದಾರೆ. ಬೀರುವಿನಲ್ಲಿಟ್ಟಿದ್ದ 80 ಸಾವಿರ ರೂಪಾಯಿ ನಗದು ಹಣ, ಲಕ್ಷಾಂತರ ಬೆಲೆ ಬಾಳುವ ಚಿನ್ನದ ಒಡವೆಗಳು ಹಾಗೂ ಮನೆಯ…

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಮಂಡ್ಯ

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

October 20, 2018

ಮಂಡ್ಯ: ದ್ವಿಚಕ್ರ ವಾಹನ ತೊಳೆಯೋ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಉಜ್ಜನಿ ಚೆನ್ನನದೊಡ್ಡಿ ಗ್ರಾಮದಲ್ಲಿ ನಡೆದಿದೆ. ರಮೇಶ್ (40) ಮೃತ ವ್ಯಕ್ತಿ. ದ್ವಿಚಕ್ರ ವಾಹನ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಮೋಟಾರ್‍ನಿಂದ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ
ಮಂಡ್ಯ

ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ

October 20, 2018

ಮಂಡ್ಯ: ಎಚ್1ಎನ್1 ಜ್ವರಕ್ಕೆ ಜಿಲ್ಲೆಯ ಗೃಹಿಣಿ ಯೊಬ್ಬರು ಬಲಿಯಾಗಿ ರುವ ಘಟನೆ ಮದ್ದೂರು ತಾಲೂಕಿನ ವಳಗೆರೆ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ವೆಂಕಟೇಶ್ ಎಂಬುವವರ ಪತ್ನಿ ಬಿ.ಎಸ್.ಜ್ಯೋತಿ(39) ಬೆಂಗಳೂರಿನ ರಾಜರಾಜೇಶ್ವರಿ ನಗರದ ಎಸ್‍ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ವೆಂಕಟೇಶ್ ಬೆಂಗ ಳೂರಿನಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದು ಕೊಂಡು ಜೀವನ ನಿರ್ವಹಿಸುತ್ತಿದ್ದರು. ಪತಿ ಜೊತೆ ವಾಸವಿದ್ದ ಬಿ.ಎಸ್. ಜ್ಯೋತಿ ಅವರಿಗೆ ಕಳೆದ 23 ದಿನಗಳ ಹಿಂದೆ ತೀವ್ರ ಜ್ವರ, ಉಸಿರಾಟದ ತೊಂದರೆ ಕಾಣಿಸಿ…

ಆಯುಧ ಪೂಜೆ: ವ್ಯಾಪಾರ ಭರಾಟೆ ಜೋರು
ಮಂಡ್ಯ

ಆಯುಧ ಪೂಜೆ: ವ್ಯಾಪಾರ ಭರಾಟೆ ಜೋರು

October 18, 2018

ನಗರದೆಲ್ಲೆಡೆ ಕಳೆಗಟ್ಟಿದ ಸಂಭ್ರಮ, ಹೂ, ಹಣ್ಣು, ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಮಂಡ್ಯ: ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ನಗರದ ಮಾರು ಕಟ್ಟೆಯಲ್ಲಿ ಮುನ್ನ ದಿನವಾದ ಬುಧವಾರ ವ್ಯಾಪಾರ-ವಹಿವಾಟು ಚುರುಕಾಗಿತ್ತು. ಪೂಜಾ ಸಾಮಗ್ರಿಗಳು ಹಾಗೂ ವಾಹನಗಳ ಅಲಂಕಾರಿಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಕಂಡು ಬಂತು. ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿ, ಹಣ್ಣು- ಹಂಪಲು, ಬಾಳೆ ದಿಂಡು, ಮಾವಿನ ಸೊಪ್ಪನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದಿದ್ದರು. ಹೂವಿಗೆ ಭಾರಿ ಬೇಡಿ ಕೆಯಿದ್ದು, ಎಲ್ಲೆಂದರಲ್ಲಿ ಹೂ ಮಾರಾಟ ಕಂಡು ಬಂತು….

1 64 65 66 67 68 108
Translate »