ಮಂಡ್ಯ

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು
ಮಂಡ್ಯ

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು

July 21, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ನಗರದ ಸಂಜಯ ವೃತ್ತದ ಬಳಿಯ ಆರ್.ಪಿ ರಸ್ತೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಕಮಾನು ಗಾಳಿಗೆ ಉರುಳಿ ಬಿದ್ದ ಘಟನೆ ನಗರದಲ್ಲಿಂದು ನಡೆಯಿತು.ಇಂದು ಬೆಳಿಗ್ಗೆ 11ರ ಸುಮಾರಿನಲ್ಲಿ ಗಾಳಿಗೆ ಸ್ವಾಗತ ಕಮಾನು ಉರುಳಿ ಬಿತ್ತಾದರೂ ಸ್ಥಳದಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸ್ವಾಗತ ಕಮಾನು ಉರುಳಿ ಬಿದ್ದುದನ್ನು ಕಂಡ ಸ್ಥಳದಲ್ಲಿದ್ದ ಪೊಲೀಸರು ಕುಸಿದ ಕಮಾನನ್ನು ತಕ್ಷಣವೇ ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಎಂ…

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು
ಮಂಡ್ಯ

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು

July 21, 2018

ಮಂಡ್ಯ: ಎರಡು ವರ್ಷದ ಹೆಣ್ಣು ಚಿರತೆ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ವಿಷ ಪ್ರಾಸನ ಶಂಕೆ ವ್ಯಕ್ತವಾಗಿದೆ. ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಬಳಿ ಚಿರತೆ ಶವ ಕಬ್ಬಿನ ಗದ್ದೆ ಸಮೀಪ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಭಾಗದಲ್ಲಿ ಇದುವರೆಗೂ ಚಿರತೆ ಹಾವಳಿಯ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಚಿರತೆ ಶವ ಪತ್ತೆ ಆಗಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ. ವಿಷ ಪ್ರಾಶನ ಅನುಮಾನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಷಾಢ ಶುಕ್ರವಾರದ ಪ್ರಯುಕ್ತ ಮದ್ದೂರಮ್ಮನಿಗೆ ವಿಶೇಷ ಪೂಜೆ
ಮಂಡ್ಯ

ಆಷಾಢ ಶುಕ್ರವಾರದ ಪ್ರಯುಕ್ತ ಮದ್ದೂರಮ್ಮನಿಗೆ ವಿಶೇಷ ಪೂಜೆ

July 21, 2018

ಮದ್ದೂರು:  ಪಟ್ಟಣದ ಶಕ್ತಿದೇವತೆ ಶ್ರೀ ಮದ್ದೂರಮ್ಮ ದೇವಾಲಯಲ್ಲಿ ಮೊದಲ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯಿಂದಲೇ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಹೆಂಗಳೆಯರು ದೇವರಿಗೆ ಮಡಲಕ್ಕಿ ನೀಡಿ, ವಿಶೇಷ ಪೂಜೆ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು. ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ನರೇಗಾದಡಿ ಕೂಲಿ ಕೆಲಸಕ್ಕೆ ಆಗ್ರಹಿಸಿ ತಾಪಂಗೆ ಮುತ್ತಿಗೆ
ಮಂಡ್ಯ

ನರೇಗಾದಡಿ ಕೂಲಿ ಕೆಲಸಕ್ಕೆ ಆಗ್ರಹಿಸಿ ತಾಪಂಗೆ ಮುತ್ತಿಗೆ

July 20, 2018

ಮದ್ದೂರು:  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಕ್ಷಣ ಕೆಲಸ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿ ಕಾರ್ಯಕರ್ತರು ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಪಂ ಎದುರು ಜಮಾಯಿಸಿದ ಸಮಿತಿಯ ಮಹಿಳೆಯರು ಕೆಲಸ ನೀಡದ ಪಿಡಿಓಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ಶೋಭ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಯಡಗನ ಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಯಡಗನ ಹಳ್ಳಿ, ಗೋಪನಹಳ್ಳಿ, ಸಬ್ಬನಹಳ್ಳಿ ಗ್ರಾಮದ ಕೂಲಿಕಾರರು…

ಮೈಷುಗರ್ ಆರಂಭಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮಂಡ್ಯ

ಮೈಷುಗರ್ ಆರಂಭಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

July 20, 2018

ಮಂಡ್ಯ:  ರೈತರ ಜೀವನಾಡಿ ಮೈಷುಗರ್ ಕಾರ್ಖಾನೆ ಶೀಘ್ರ ಪ್ರಾರಂಭಿ ಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯ ಕರ್ತರು ನಗರದಲ್ಲಿಂದು ಪ್ರತಿಭಟನಾ ಧರಣಿ ನಡೆಸಿದರು. ಸರ್‍ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮೈಷುಗರ್ ಕಾರ್ಖಾನೆ ಶೀಘ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಬೆಳೆ ನಷ್ಟದಿಂದ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚು…

ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ
ಮಂಡ್ಯ

ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ

July 20, 2018

ಮೇಲುಕೋಟೆ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಇತ್ತೀಚೆಗೆ ಕೆರೆತೊಣ್ಣೂರಿನಲ್ಲಿ ಭಕ್ತರು ನಿರ್ಮಿಸಿರುವ ಕುಠೀರಕ್ಕೆ ಪ್ರವೇಶಿಸಿ ರಾಮಾ ನುಜರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀನಂಬಿನಾರಾಯಣಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಐತಿಹಾಸಿಕ ಕೆರೆತೊಂಡನೂರು 11ನೇ ಶತಮಾನದಲ್ಲಿ ರಾಮಾನುಜರಿಗೆ ಆಶ್ರಯ ನೀಡಿದ ಪವಿತ್ರ ಭೂಮಿ. ಈ ಪುಟ್ಟ ಗ್ರಾಮಕ್ಕೆ ರಾಮಾನುಜಾಚಾರ್ಯರ ಕಾಲದಲ್ಲಿದ್ದ ವೈಭವವನ್ನು ಮತ್ತೆ ತಂದು ಕೊಡಬಹುದು. ಪ್ರಕೃತಿಯ ಸುಂದರ ಮಡಿಲಲ್ಲಿರುವ ಕೆರೆತೊಣ್ಣೂರು ರಾಜ್ಯದ ಗಮನ ಸೆಳೆಯುವ…

ಇಂದು ಕಾವೇರಿಗೆ ಸಿಎಂ ಬಾಗೀನ
ಮಂಡ್ಯ

ಇಂದು ಕಾವೇರಿಗೆ ಸಿಎಂ ಬಾಗೀನ

July 20, 2018

ಮಂಡ್ಯ: ಜಿಲ್ಲೆಯ ಜೀವ ನಾಡಿ ಕೃಷ್ಣರಾಜ ಸಾಗರ ಜಲಾಶಯ ಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಜು.20) ಬಾಗೀನ ಅರ್ಪಿಸಲಿದ್ದು, ಸಕಲ ಸಿದ್ಧತೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊಡಗು ಜಿಲ್ಲೆಯಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಅವರು ಅಣೆಕಟ್ಟೆ ಯಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ತರುವಾಯ ಬಾಗೀನ ಅರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಇಂಧನ ಸಚಿವ…

ಬುದ್ದಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ
ಮಂಡ್ಯ

ಬುದ್ದಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ

July 20, 2018

ಮದ್ದೂರು:  ಬುದ್ದಿಮಾಂದ್ಯ ಅಪ್ರಾಪ್ತೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಯರಗನಹಳ್ಳಿ ಗ್ರಾಮದ ಪ್ರದೀಪ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು. ಘಟನೆ ವಿವರ: ಮಂಗಳವಾರ ಸಂಜೆ ಬುದ್ಧಿಮಾಂದ್ಯ ಬಾಲಕಿಯೊಬ್ಬಳು ಅಂಗಡಿಗೆ ಬಂದಿದ್ದ ವೇಳೆ ಆಕೆಯನ್ನು ತಿಂಡಿ ಕೊಡಿಸುವ ನೆಪದಲ್ಲಿ ಆರೋಪಿಗಳು ಆಟೋದಲ್ಲಿ ಯರಗನಹಳ್ಳಿ ಗ್ರಾಮಕ್ಕೆ ಕರೆ ತಂದಿದ್ದಾರೆ. ನಂತರ ಪ್ರದೀಪ್ ಅವರ ಮನೆಯಲ್ಲಿ ಅತ್ಯಾಚಾರ ನಡೆಸಿ ಬಳಿಕ ಪಟ್ಟಣದ ಮದ್ದೂರಮ್ಮ ದೇಗುಲ…

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ

July 19, 2018

ಅಣೆಕಟ್ಟೆಯಿಂದ ಭೋರ್ಗರೆಯುತ್ತಿರುವ ನೀರಿಗೆ ಬಣ್ಣ ಬಣ್ಣದ 500 ಎಲ್‍ಇಡಿ ಬಲ್ಬ್‍ಗಳ ಮೆರಗು ಮೈಸೂರು: ಮೈದುಂಬಿದ ಕಾವೇರಿಗೀಗ ಬಣ್ಣದ ಓಕುಳಿ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೃಷ್ಣರಾಜ ಸಾಗರ ಅಣೆ ಕಟ್ಟೆಯ ಸೌಂದರ್ಯವನ್ನು ವೀಕ್ಷಿಸಲು ಈಗ ಎರಡು ಕಣ್ಣು ಸಾಲದು. ಕಾವೇರಿ ಕಣಿವೆಯಲ್ಲಿ ಸಮೃದ್ಧವಾಗಿ ಮಳೆ ಯಾಗಿರುವುದರಿಂದ ನಾಲ್ಕು ವರ್ಷಗಳ ನಂತರ ಇದೀಗ ಕೆಆರ್‌ಎಸ್‌ ಜಲಾಶಯ ತುಂಬಿ ತುಳು ಕುತ್ತಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿದ್ದು, ಅಣೆಕಟ್ಟೆ ಬಳಿ ಭೋರ್ಗರೆದು ಹರಿ ಯುತ್ತಿರುವ ಕಾವೇರಿಯ ಪ್ರಕೃತಿ ಸೌಂದರ್ಯ ವನ್ನು…

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಮಂಡ್ಯ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 19, 2018

ಮಂಡ್ಯ: ಎಲ್ಲಾ ವಿದ್ಯಾರ್ಥಿ ಗಳಿಗೂ ಉಚಿತ ಬಸ್‍ಪಾಸ್ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಎಬಿವಿಪಿಯಿಂದ ಪ್ರತಿಭಟನೆ ನಡೆಯಿತು. ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಆವರಣದಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡ ಆರ್.ಸಂತೋಷ್ ಮಾತ ನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದ 2018-19ನೇ ಸಾಲಿನ ವಾರ್ಷಿಕ ಬಜೆಟ್‍ನಲ್ಲಿ ಎಸ್‍ಸಿ/ ಎಸ್‍ಟಿ ಸೇರಿದಂತೆ ರಾಜ್ಯದ…

1 79 80 81 82 83 108
Translate »