ಮಂಡ್ಯ

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ
ಮಂಡ್ಯ

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ

July 23, 2018

ಮಂಡ್ಯ:  ಪ್ರಸ್ತುತ ದಿನಗಳಲ್ಲಿ ದೇಶವನ್ನು ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕಲಾತಪಸ್ವಿ ಟ್ರಸ್ಟ್‍ನ ಪ್ರಧಾನ ಪೋಷಕ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು. ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಅಮ್ಮ ಕಿಡ್ಸ್, ಕರ್ನಾಟಕ ಚಿತ್ರಕಲಾ ಆಕಾಡೆಮಿ ಮೈಸೂರು ಆಯೋಜಿಸಿದ್ದ ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ “ಪರಿಸರ” ಕುರಿತ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿಯಾದ ಪ್ಲಾಸ್ಟಿಕ್ ಬಳಿಕೆಯಿಂದ ಪರಿಸರ ಮಾಲಿನ್ಯ ಗೊಳ್ಳುತ್ತಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ತಾಪಮಾನ ಹೆಚ್ಚಳಗೊಳ್ಳಲು ಇದು ಪ್ರಮುಖ…

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ
ಮಂಡ್ಯ

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ

July 23, 2018

ಸಿದ್ದರಾಮಯ್ಯ ಆಗಿದ್ರೆ ಕ್ಷಣಾರ್ಧದಲ್ಲೇ ಕೆಲಸ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್ ಉಚಿತ ಬಸ್‍ಪಾಸ್ ನೀಡದಿದ್ದರೆ ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ಬಂದ್ ಶ್ರೀರಂಗಪಟ್ಟಣ: ಕೇಂದ್ರ ಸರ್ಕಾರ ಕಾವೇರಿ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಇದರ ವಿರುದ್ಧ ರಾಜ್ಯದ ಸಂಸದರು ಧ್ವನಿ ಎತ್ತಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು. ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕಿಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ಪ್ರಾಧಿಕಾರ ರಚನೆಯಾದರೆ ರಾಜ್ಯಗಳಲ್ಲಿನ ಜಲಾಶಯದ ಮೇಲೆ ರಾಜ್ಯದ ಹಿಡಿತ ಕೈ ತಪ್ಪಲಿದೆ….

ರೈತರು, ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳಿಂದ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ರೈತರು, ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳಿಂದ ಪ್ರತ್ಯೇಕ ಪ್ರತಿಭಟನೆ

July 22, 2018

 ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಧರಣಿ ಬಿಜೆಪಿ ಭ್ರಷ್ಟ ಆಡಳಿತದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ ಮಂಡ್ಯ:  ವಿವಿಧ ಬೇಡಿಕೆ ಈಡೇರಿ ಕೆಗೆ ಆಗ್ರಹಿಸಿ ರೈತಸಂಘ, ಕಸ್ತೂರಿ ಕರ್ನಾ ಟಕ ಜನಪರ ವೇದಿಕೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ನಗರದಲ್ಲಿ ಪ್ರತಿಭಟನೆ ನಡೆಸಿದರು. 39ನೇ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ರೇಷ್ಮೆ ಗೂಡು ಹಾಗೂ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತಸಂಘ(ಮೂಲ…

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ
ಮಂಡ್ಯ

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ

July 22, 2018

ಮಂಡ್ಯ: ನಿತ್ಯ ಸಚಿವರೆಂದು ಬಿರುದು ಪಡೆದುಕೊಂಡಿರುವ ಕೆ.ವಿ. ಶಂಕರೇಗೌಡರ ಸಾಧನೆ ಅವಿಸ್ಮರಣೀಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ವಿ.ಶಂಕರ ಗೌಡರ ಆದರ್ಶ, ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕೆಲಸ ಮಾಡ ಲಿದೆ ಎಂಬ ನಂಬಿಕೆ ನನಗಿದೆ. ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ ರುವುದು ಶ್ಲಾಘನೀಯ. ಕರ್ನಾಟಕ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಇಡಲಾಗಿರುವ…

ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ
ಮಂಡ್ಯ

ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ

July 22, 2018

ಮಂಡ್ಯ:  ಜೆಸಿಬಿ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಅರಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಎಸಿ ಹೈಡ್ರಾಲಿಕ್ ರಾಕ್ ಬ್ರೇಕರ್ ಮತ್ತು ಬ್ಯಾಟರಿ ಸೇರಿದಂತೆ ಸುಮಾರು 36 ಲಕ್ಷದ 80 ಸಾವಿರ ಬೆಲೆ ಬಾಳುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಕಾವೇರಿ ದೊಡ್ಡಿ ಗ್ರಾಮದ ನಿವಾಸಿ ಸಿ.ರಾಜು(29), ತಮಿಳುನಾಡು ಮೂಲದ ಪೆರುಮಾಳ್(32), ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ ಮೊಳ್ಳೇನಹಳ್ಳಿ ಗ್ರಾಮದ ಎಂ.ಕೆ ಪ್ರದೀಪ್ ಬಂಧಿತ ಆರೋಪಿಗಳು. ಘಟನೆ ವಿವರ: ಅರಕರೆ ಸಮೀಪದ ಹಂಗರಹಳ್ಳಿ ಗ್ರಾಮದ…

2ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಮಂಡ್ಯ

2ನೇ ಮಹಡಿಯಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

July 22, 2018

ಕೆ.ಆರ್.ಪೇಟೆ: ಪೂಜೆ ಸಲ್ಲಿಸುವ ವೇಳೆ ಮನೆಯ 2ನೇ ಮಹಡಿಯಿಂದ ಕಾಲು ಜಾರಿಬಿದ್ದು ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ಶನಿವಾರ ನಡೆದಿದೆ. ತಾಲೂಕಿನ ಗವಿಮಠ ಶ್ರೀ ಕ್ಷೇತ್ರದ ಉಸ್ತುವಾರಿ ಹಾಗೂ ಸ್ವತಂತ್ರ ಸಿದ್ದ ಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಬಸವರಾಜಪ್ಪ ಅವರ ಪುತ್ರ ನಂದೀಶ್ ಹಿರೇಮಠ್(47) ಮೃತಪಟ್ಟ ವ್ಯಕ್ತಿ. ನಂದೀಶ್ ಅವರು ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುವ ವೇಳೆ ತಾವು ವಾಸವಿದ್ದ ಮನೆಯ ಎರಡನೇ ಮಹಡಿಯ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ…

ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು
ಮಂಡ್ಯ

ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು

July 22, 2018

ಮಂಡ್ಯ: ಕಳ್ಳರು ರಾತ್ರೋರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸುಗಳನ್ನು ಕಳವು ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಅಂಚೆ ಭೂವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಕೆಂಪೇಗೌಡರ ಮಗ ರಾಜಣ್ಣ ಅವರಿಗೆ ಸೇರಿದ 3 ಮತ್ತು ಚಿಕ್ಕೇಗೌಡರ ಪುತ್ರ ರಮೇಶ ಎಂಬುವರ 1 ಹಸುವನ್ನು ಕಳವು ಮಾಡಲಾಗಿದೆ. ಒಂದೊಂದು ಹಸು ತಲಾ 40 ಸಾವಿರ ಬೆಲೆ ಬಾಳಲಿದ್ದು, ಅಂದಾಜು ಒಂದೂವರೆ ಲಕ್ಷ ಮೌಲ್ಯದ ಹಸುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಮೊದಲಿಗೆ ರಾಜಣ್ಣ ಎಂಬುವವರ ಕೊಟ್ಟಿಗೆ ಬೀಗ ಮುರಿದು…

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 22, 2018

ಮೇಲುಕೋಟೆ: ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದರು. ಮಾಣಿಕ್ಯನಹಳ್ಳಿ ಗ್ರಾಮದ ಬಾಲಭೈರ ವೇಶ್ವರ ಸಮುದಾಯ ಭವನದಲ್ಲಿ ಬೆಂಗ ಳೂರಿನ ವಲ್ರ್ಡ್ ಆಫ್ ವುಮೆನ್ ಹದಿ ಹರೆಯದ ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ನೈರ್ಮಲ್ಯೀ ಕರಣದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ…

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ
ಮಂಡ್ಯ, ಮೈಸೂರು

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ

July 21, 2018

ಮೈಸೂರು: ನಾಲ್ಕು ವರ್ಷಗಳ ನಂತರ ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ತಮ್ಮ ಸಚಿವ ಸಹೊದ್ಯೋಗಿಗಳು ಹಾಗೂ ಶಾಸಕರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಿದರು. ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್‍ನಲ್ಲಿ ಕೆಆರ್‌ಎಸ್‌ ಹೆಲಿಪ್ಯಾಡ್‍ಗೆ ಬಂದಿಳಿದ ಕುಮಾರಸ್ವಾಮಿ ಅವರು, ಸಂಜೆ 4.30 ಗಂಟೆಗೆ ಗೋಧೂಳಿ ಶುಭಲಗ್ನದಲ್ಲಿ ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕೆಆರ್‌ಎಸ್‌ನ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಶ್ರೀರಂಗಪಟ್ಟಣದ ಖ್ಯಾತ…

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ
ಮಂಡ್ಯ

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ

July 21, 2018

ರಾಜ್ಯದ ಎಲ್ಲಾ ವರ್ಗದ ರೈತರನ್ನು ಸಾಲ ಮುಕ್ತರನ್ನಾಗಿಸಲು ಬದ್ಧ ಆತ್ಮಹತ್ಯೆಗೆ ಶರಣಾಗದಿರಲು ಸಿಎಂ ಮನವಿ ಮಂಡ್ಯ: ಸಾಲ ಮನ್ನಾ ಯೋಜನೆ ಒಕ್ಕಲಿಗ ಜನಾಂಗಕ್ಕೆ ಮಾತ್ರ ಅನ್ವಯಿ ಸುವುದಿಲ್ಲ. ಎಲ್ಲಾ ವರ್ಗದ ರೈತ ರಿಗೂ ಸಲ್ಲುತ್ತದೆ. ಆದರೆ ಮಾಧ್ಯಮಗಳು ಮತ್ತು ವಿರೋಧಿಗಳು ಜನರ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ದಲ್ಲಿ ಮಾತನಾಡಿದ ಅವರು, ಕೇವಲ ಒಕ್ಕಲಿಗರ ಸಾಲ ಮನ್ನಾ ಮಾಡಲಾಗಿದೆ ಎಂಬ…

1 78 79 80 81 82 108
Translate »