ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು
ಮಂಡ್ಯ

ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು

July 22, 2018

ಮಂಡ್ಯ: ಕಳ್ಳರು ರಾತ್ರೋರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸುಗಳನ್ನು ಕಳವು ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಅಂಚೆ ಭೂವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಕೆಂಪೇಗೌಡರ ಮಗ ರಾಜಣ್ಣ ಅವರಿಗೆ ಸೇರಿದ 3 ಮತ್ತು ಚಿಕ್ಕೇಗೌಡರ ಪುತ್ರ ರಮೇಶ ಎಂಬುವರ 1 ಹಸುವನ್ನು ಕಳವು ಮಾಡಲಾಗಿದೆ. ಒಂದೊಂದು ಹಸು ತಲಾ 40 ಸಾವಿರ ಬೆಲೆ ಬಾಳಲಿದ್ದು, ಅಂದಾಜು ಒಂದೂವರೆ ಲಕ್ಷ ಮೌಲ್ಯದ ಹಸುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಮೊದಲಿಗೆ ರಾಜಣ್ಣ ಎಂಬುವವರ ಕೊಟ್ಟಿಗೆ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 3 ಹಸುಗಳನ್ನು ಕದ್ದೊಯ್ದ ಬಳಿಕ ರಮೇಶ್ ಅವರ ಮನೆ ಬೀಗ ಮುರಿದು ಒಂದು ಹಸುವನ್ನು ಅಪಹರಿಸಿದ್ದಾರೆ. ಮುಂಜಾನೆ ಮಾಲೀಕರು ಹಸುವಿನ ಕೊಟ್ಟಿಗೆಗೆ ಹೋದಾಗ ಕೊಟ್ಟಿಗೆ ಬೀಗ ಮುರಿದು ಹಸುಗಳ ಕಳ್ಳತನ ಬೆಳಕಿಗೆ ಬಂದಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »