ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 22, 2018

ಮೇಲುಕೋಟೆ: ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದರು.

ಮಾಣಿಕ್ಯನಹಳ್ಳಿ ಗ್ರಾಮದ ಬಾಲಭೈರ ವೇಶ್ವರ ಸಮುದಾಯ ಭವನದಲ್ಲಿ ಬೆಂಗ ಳೂರಿನ ವಲ್ರ್ಡ್ ಆಫ್ ವುಮೆನ್ ಹದಿ ಹರೆಯದ ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ನೈರ್ಮಲ್ಯೀ ಕರಣದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಗ್ರಾಮೀಣ ಹೆಣ್ಣುಮಕ್ಕಳು ಸಮರ್ಪಕವಾಗಿ ಬಳಸಿ ಕೊಳ್ಳಬೇಕು. ಹೆಣ್ಣು ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯದಲ್ಲಿ ಏರು ಪೇರಾದರೆ ಗರ್ಭಾಶಯ ತೊಂದರೆಯಾಗಿ ಗರ್ಭಕೋಶದ ಕ್ಯಾನ್ಸರ್‍ಗೆ ತುತ್ತಾಗುವ ಅಪಾಯವಿರುತ್ತದೆ.

ಆರಂಭದ ಹಂತದಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆದು ಕೊಳ್ಳಬೇಕು. ಈ ಹಿಂದೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವೊಂದರಲ್ಲೇ ಗರ್ಭಾಶಯ ಕ್ಯಾನ್ಸ್‍ರ್‍ಗೆ ತುತ್ತಾಗಿದ್ದ 4ಸಾವಿರ ಮಹಿಳೆಯರಿಗೆ ಉಚಿತ ಚಿಕಿತ್ಸೆ ಕೊಡಿಸಲಾಗಿತ್ತು ಎಂದರು. ಹೆಣ್ಣುಮಕ್ಕಳು ಇಂದು ಪುರುಷರಿಗಿಂತ ಸದೃಢವಾದ ಆರೋಗ್ಯ ಹೊಂದಿದ್ದಾರೆ. ಗ್ರಾಮೀಣ ಹದಿಹರೆಯದ ಹೆಣ್ಣು ಮಕ್ಕಳು ಋತುಚಕ್ರದಂತಹ ಸಮಯದಲ್ಲಿ ದೈಹಿಕ ಸ್ವಚ್ಛತೆಗೆ ಮಹತ್ವ ನೀಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳೇ ಇರಲಿಲ್ಲ. ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದರು. ಆದರೆ ಕಾಲ ಬದಲಾಗಿದ್ದು ಆರೋಗ್ಯದ ವಿಚಾರದಲ್ಲಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸಿಯೇ ಮುಂದುವರೆಯಬೇಕು ಎಂದರು.

ವಸತಿ ಶಾಲೆಗೆ 10ಕೋಟಿ: ಮೇಲು ಕೋಟೆ ಹೋಬಳಿ ಮೂಡಲಕೊಪ್ಪಲು ಗ್ರಾಮದಲ್ಲಿ ಹೆಣ್ಣುಮಕ್ಕಳ ವಸತಿ ಶಾಲೆಗೆ 10 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಇದೇ ವೇಳೆ ಮೇಲುಕೋಟೆ ಹೋಬಳಿಯ ಸರ್ಕಾರಿ ಶಾಲಾ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಕೀಲ ಅರವಿಂದರಾಘವನ್ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

ವಲ್ರ್ಡ್ ಆಫ್ ವುಮನ್ ಟ್ರಸ್ಟಿ ವಂದನಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಋತುಚಕ್ರ ಆರಂಭವಾದರೆ ಹೆಣ್ಣು ಮಕ್ಕಳನ್ನು ಶಾಲೆಯಿಂದ ದೂರವಿಡಲಾ ಗುತ್ತದೆ. ಈಗ ಕಾಲ ಸ್ವಲ್ಪ ಬದಲಾಗಿದ್ದು, ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಿದೆ. ದೈಹಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ ಅಗತ್ಯವಿರುವ ಕಾರಣ ನಮ್ಮ ಸಂಸ್ಥೆ ಕಾಳಜಿ ವಹಿಸಿ ಈ ಭಾಗದ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜಿನ ಹೆಣ್ಣುಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವ ನ್ಯಾಪ್‍ಕಿನ್ ಸೆಟ್ ವಿತರಿ ಸಿದೆ. ಹೆಣ್ಣುಮಕ್ಕಳು ಕಿಟ್ ಸಮರ್ಪಕ ವಾಗಿ ಬಳಸಿಕೊಳ್ಳಬೇಕು ಎಂದರು.

ಸಮಾರಂಭವನ್ನು ವಲ್ರ್ಡ್ ಆಫ್ ವುಮನ್ಸ್ ಅಧ್ಯಕ್ಷೆ ಅಶ್ವಿನಿಓಜಾ ಉದ್ಘಾ ಟಿಸಿದರು. ಕಾರ್ಯಕ್ರಮದ ವ್ಯವಸ್ಥಾಪಕ ವಕೀಲ ಅರವಿಂದರಾಘವನ್, ಮೈಸೂರು ವಿಭಾಗದ ಜೆ.ಡಿ.ಮರಿಸ್ವಾಮಿಗೌಡ, ಪಾಂಡವಪುರ ಬಿಇಓ ಮಲ್ಲೇಶ್ವರಿ, ಜಿಪಂ ಸದಸ್ಯೆ ಶಾಂತಲ, ಮಾಣ ಕ್ಯನಹಳ್ಳಿ ಗ್ರಾಪಂ ಅಧ್ಯಕ್ಷೆ ಅನಿತ, ಸಮಾಜಸೇವಕ ಶಂಕರ್, ಪಾಪಣ್ಣಗೌಡ, ವಲ್ರ್ಡ್ ಆಫ್ ವುಮೆನ್ಸ್ ಸಂಸ್ಥೆಯ ನಿರ್ಮಲ, ಸಂಧ್ಯಾ, ವಿನಿತ, ಪ್ರೀತಿ, ಕವಿತಾಗಾರ್ಲ, ಗ್ರಾಪಂ ಸದಸ್ಯ ಕರೀಗೌಡ, ಮತ್ತಿತರ ಗಣ್ಯರು ಭಾಗ ವಹಿಸಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ 3 ಲಕ್ಷ ರೂ. ಮೌಲ್ಯದ 500 ಕಿಟ್‍ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.

Translate »