ಬುದ್ದಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ
ಮಂಡ್ಯ

ಬುದ್ದಿಮಾಂದ್ಯ ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ

July 20, 2018

ಮದ್ದೂರು:  ಬುದ್ದಿಮಾಂದ್ಯ ಅಪ್ರಾಪ್ತೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಯರಗನಹಳ್ಳಿ ಗ್ರಾಮದ ಪ್ರದೀಪ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು.

ಘಟನೆ ವಿವರ: ಮಂಗಳವಾರ ಸಂಜೆ ಬುದ್ಧಿಮಾಂದ್ಯ ಬಾಲಕಿಯೊಬ್ಬಳು ಅಂಗಡಿಗೆ ಬಂದಿದ್ದ ವೇಳೆ ಆಕೆಯನ್ನು ತಿಂಡಿ ಕೊಡಿಸುವ ನೆಪದಲ್ಲಿ ಆರೋಪಿಗಳು ಆಟೋದಲ್ಲಿ ಯರಗನಹಳ್ಳಿ ಗ್ರಾಮಕ್ಕೆ ಕರೆ ತಂದಿದ್ದಾರೆ. ನಂತರ ಪ್ರದೀಪ್ ಅವರ ಮನೆಯಲ್ಲಿ ಅತ್ಯಾಚಾರ ನಡೆಸಿ ಬಳಿಕ ಪಟ್ಟಣದ ಮದ್ದೂರಮ್ಮ ದೇಗುಲ ಆವರಣಕ್ಕೆ ತಂದು 100 ರೂ. ನೀಡಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ವಿಚಾರ ಬಾಲಕಿಯ ತಾಯಿಗೆ ತಿಳಿದು ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತ್ಯಾ ಚಾರ ನಡೆಸಿದ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »