ಹೆಣ್ಣು ಚಿರತೆ ಅನುಮಾನಾಸ್ಪದ ಸಾವು
ಮಂಡ್ಯ

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು

July 21, 2018

ಮಂಡ್ಯ: ಎರಡು ವರ್ಷದ ಹೆಣ್ಣು ಚಿರತೆ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ವಿಷ ಪ್ರಾಸನ ಶಂಕೆ ವ್ಯಕ್ತವಾಗಿದೆ.
ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಬಳಿ ಚಿರತೆ ಶವ ಕಬ್ಬಿನ ಗದ್ದೆ ಸಮೀಪ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಭಾಗದಲ್ಲಿ ಇದುವರೆಗೂ ಚಿರತೆ ಹಾವಳಿಯ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಚಿರತೆ ಶವ ಪತ್ತೆ ಆಗಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ.

ವಿಷ ಪ್ರಾಶನ ಅನುಮಾನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »