ನರೇಗಾದಡಿ ಕೂಲಿ ಕೆಲಸಕ್ಕೆ ಆಗ್ರಹಿಸಿ ತಾಪಂಗೆ ಮುತ್ತಿಗೆ
ಮಂಡ್ಯ

ನರೇಗಾದಡಿ ಕೂಲಿ ಕೆಲಸಕ್ಕೆ ಆಗ್ರಹಿಸಿ ತಾಪಂಗೆ ಮುತ್ತಿಗೆ

July 20, 2018

ಮದ್ದೂರು:  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಕ್ಷಣ ಕೆಲಸ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿ ಕಾರ್ಯಕರ್ತರು ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಪಂ ಎದುರು ಜಮಾಯಿಸಿದ ಸಮಿತಿಯ ಮಹಿಳೆಯರು ಕೆಲಸ ನೀಡದ ಪಿಡಿಓಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಸಮಿತಿ ಕಾರ್ಯದರ್ಶಿ ಶೋಭ ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ಯಡಗನ ಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಯಡಗನ ಹಳ್ಳಿ, ಗೋಪನಹಳ್ಳಿ, ಸಬ್ಬನಹಳ್ಳಿ ಗ್ರಾಮದ ಕೂಲಿಕಾರರು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಡಿಎ ಕೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ ಡಿ.ಕೆ.ಕೆರೆ, ಮುಟ್ಟನಹಳ್ಳಿ, ಚಿಕ್ಕಮರಿಗೌಡನದೊಡ್ಡಿ ಗ್ರಾಮದ ಕೂಲಿ ಕಾರರು ಮೇ.18 ರಂದು ಅರ್ಜಿ ಸಲ್ಲಿದ್ದಾರೆ.

ಜೊತೆಗೆ ಇನ್ನು ಹಲವಾರು ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಅರ್ಜಿ ಹಾಕಿದ್ದರೂ, ಕೆಲಸ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಭಾರತೀನಗರ ಗ್ರಾಪಂ ವ್ಯಾಪ್ತಿಗೆ ಸೇರಿದ ಗುಡಿಗೆರೆ ಗ್ರಾಮದಲ್ಲಿ ಕೂಲಿಗಾರರಿಗೆ ಕೆಲ ದಿನಗಳು ಮಾತ್ರ ಕೆಲಸ ನೀಡಿ, ಕಡಿಮೆ ಕೂಲಿ ನೀಡಿ, ಹೆಚ್ಚಿನ ಕೆಲಸ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ತಾಪಂ ಅಧಿಕಾರಿಗಳ ಗಮನ ಸೆಳೆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕೂಡಲೇ ಕೆಲಸ ನೀಡದ ಕೂಲಿ ಕಾರರಿಗೆ ಉದ್ಯೋಗ ಭತ್ಯೆ ನೀಡಬೇಕು ಮತ್ತು ಕೆಲಸ ಮಾಡಿರುವ ಕೂಲಿಕಾರಿಗೆ ಸಮರ್ಪಕವಾಗಿ ಸಂಬಳ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿ, ತಾಪಂ ಇಒ ಮಣಿಕಂಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ದೇವಿ, ಕಾರ್ಯದರ್ಶಿ ಸುನಿತಾ, ತಾಲೂಕು ಅಧ್ಯಕ್ಷೆ ಡಿ.ಕೆ.ಲತಾ, ಮುಖಂಡರಾದ ಜಯ ಶೀಲ, ಶಿವಮ್ಮ, ಚಂದ್ರಕಲಾ, ಮೀನಾಕ್ಷಮ್ಮ, ಉಮಾ, ಜಯಮ್ಮ ಇನ್ನಿತರರು ಹಾಜರಿದ್ದರು.

Translate »