ವಸತಿ, ವಾಣಿಜ್ಯ ಕಟ್ಟಡಗಳ ನಕ್ಷೆ ಅನುಮೋದನೆಗೆ ಸರಳ ವಿಧಾನ
ಮೈಸೂರು

ವಸತಿ, ವಾಣಿಜ್ಯ ಕಟ್ಟಡಗಳ ನಕ್ಷೆ ಅನುಮೋದನೆಗೆ ಸರಳ ವಿಧಾನ

July 20, 2018
  • ಏಕಗವಾಕ್ಷಿ ಇಲ್ಲವೇ ಆನ್‍ಲೈನ್ ಮೂಲಕ 30 ದಿನದಲ್ಲಿ ಅನುಮತಿ
  •  ಸಂಬಂಧಪಟ್ಟ ದಾಖಲಾತಿಗಳ ಒದಗಿಸಬೇಕಷ್ಟೆ
  • 30×40 ನಿವೇಶನಕ್ಕೆ ತಕ್ಷಣ ಅನುಮತಿ; 40×60ಕ್ಕೆ ನಂತರ ವಿಸ್ತರಣೆ
  • ರೇರಾ ಜಾರಿ ನಂತರ 924 ನಿರ್ಮಾಣ ಸಂಸ್ಥೆ ಕಪ್ಪು ಪಟ್ಟಿಗೆ ಸೇರ್ಪಡೆ

ಬೆಂಗಳೂರು: ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ನಕ್ಷೆಯೊಂದಿಗೆ ಮನೆಯಿಂದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವ ಮಹತ್ವ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ.

ಇದರೊಂದಿಗೆ ಬಡಾವಣೆ ಹಾಗೂ ವಸತಿ ಸಮುಚ್ಛಯ ನಿರ್ಮಿಸಿಕೊಡುವ ಹೆಸರಿ ನಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ 924 ನಿರ್ಮಾಣ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ನಕ್ಷೆಗೆ ಅನುಮತಿ ಪಡೆ ಯಲು ಗ್ರಾಹಕರು ಪಡುತ್ತಿದ್ದ ಪಾಡಿಗೆ ಇತಿಶ್ರೀ ಹಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿನೂ ತನ ಯೋಜನೆ ಜಾರಿಗೊಳ್ಳಲಿದೆ. ನಗರಾ ಭಿವೃದ್ಧಿ ಇಲಾಖೆ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನಾ ನಕ್ಷೆಗೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಿದ್ದು, ಅದರ ಮೂಲಕ ಇಲ್ಲವೇ ಮನೆಯಿಂದಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ 30 ದಿನ ದೊಳಗಾಗಿ ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸಂಸ್ಥೆಗಳಿಂದ ಅನುಮತಿ ಪಡೆದು ಕೊಳ್ಳಬಹುದು.

30×40 ಚದರಡಿ ಅಳತೆಯ ನಿವೇಶನದಲ್ಲಿ ವಸತಿ ನಿರ್ಮಿಸುವ ಮಾಲೀ ಕರು ತಕ್ಷಣವೇ ಅನುಮತಿ ಪಡೆಯಬಹುದು. ಇದೇ ವ್ಯವಸ್ಥೆಯನ್ನು 40×60 ಚದರಡಿ ನಿವೇಶನದ ಮಾಲೀಕರಿಗೂ ಕ್ರಮೇಣ ವಿಸ್ತರಿಸುವುದಾಗಿ ವಸತಿ ಮತ್ತು ನಗರಾಭಿ ವೃದ್ಧಿ ಸಚಿವ ಯು.ಟಿ.ಖಾದರ್ ಪತ್ರಿಕಾ ಗೋಷ್ಠಿಯಲ್ಲಿಂದು ಪ್ರಕಟಿಸಿದರು. ಮೂಲ ನಕ್ಷೆಗೆ ಅನುಮತಿ ಪಡೆಯಲು ಗ್ರಾಹಕರು ಸ್ಥಳೀಯ ಸಂಸ್ಥೆಗಳ ನಿಯಮಾನುಸಾರ ಅರ್ಜಿ ನೋಂದಾವಣಿ ಮಾಡಿಕೊಳ್ಳಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಗ್ರಾಹಕರು ಸಮರ್ಪಕ ಮಾಹಿತಿ ನೀಡದಿದ್ದರೆ ಅರ್ಜಿ ಸ್ವೀಕೃತವಾಗುವುದಿಲ್ಲ. ಅನುಮತಿ ಪಡೆಯಲು ಇದುವರೆಗೂ ಅಗ್ನಿಶಾಮಕ, ಪರಿಸರ, ರೈಲ್ವೆ, ನಗರಾಭಿವೃದ್ಧಿ, ವಿದ್ಯುತ್ ಇಲಾಖೆ ಸೇರಿದಂತೆ 14 ಸಂಸ್ಥೆಗಳಿಗೆ ಅಲೆದಾಡಬೇಕಿತ್ತು. ಇದೀಗ ಅರ್ಜಿಯನ್ನು ಸಂಬಂಧಪಟ್ಟ ವಿಭಾಗವೇ ಎಲ್ಲಾ ಇಲಾಖೆ ಗಳಿಗೆ ರವಾನಿಸುತ್ತದೆ. ಸ್ವೀಕರಿಸಿದ 7 ದಿನದೊಳಗಾಗಿ ಸಂಬಂಧಪಟ್ಟ ಸಂಸ್ಥೆಗಳು ಅರ್ಜಿ ಪರಿಶೀಲಿಸಿ, ಏಕಗವಾಕ್ಷಿ ವ್ಯವಸ್ಥೆಗೆ ರವಾನಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಯಾವುದೇ ಸಂಬಂಧಪಟ್ಟ ಕಚೇರಿಯಿಂದ ಅನುಮತಿ ದೊರೆಯದಿದ್ದರೆ ಅರ್ಜಿ ಸ್ವೀಕೃತಿಯೇ ಅನುಮತಿ ಎಂಬುದಾಗಿ ಪರಿಗಣಿಸಲಾಗುವುದು.

ಅನುಮತಿ ನೀಡಿದ ನಂತರ ಕಟ್ಟಡದಲ್ಲಿ ಬೆಂಕಿ ಅನಾಹುತ ಅಥವಾ ಇನ್ನಾವುದೇ ಅನಾಹುತ ಸಂಭವಿಸಿದರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರ ನ್ನಾಗಿ ಮಾಡಲಾಗುವುದು ಎಂದರು. ಸರ್ಕಾರದ ಈ ತೀರ್ಮಾನದಿಂದ ನಿವೇಶನ ಮಾಲೀಕರ ಶೇಕಡ 80ರಷ್ಟು ಸಮಸ್ಯೆ ಪರಿಹರಿಸಿದಂತಾಗುತ್ತದೆ.

ಐಡಿಎಸ್‍ಐ ಎಂಬ ಸಂಸ್ಥೆ 7.46 ಕೋಟಿ ರೂ. ವೆಚ್ಚದಲ್ಲಿ ಇದಕ್ಕೆ ಸಂಬಂಧಿಸಿದ ತಂತ್ರಾಂಶವನ್ನು ಸಿದ್ಧಪಡಿಸಿದೆ ಎಂದು ಖಾದರ್ ಹೇಳಿದರು.

ಕೇಂದ್ರ ಸರ್ಕಾರ, ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಕಾಯಿದೆ ಜಾರಿ ನಂತರ ಕರ್ನಾಟಕದಲ್ಲಿ 924 ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇಂತಹ ಸಂಸ್ಥೆಗಳಿಂದ ನಿವೇಶನ ಇಲ್ಲವೇ ವಸತಿ ಪಡೆದು ವಂಚನೆಗೆ ಒಳಗಾದರೆ ಸರ್ಕಾರ ಜವಾಬ್ದಾರಿಯಲ್ಲ ಮತ್ತು ಇಂತಹ ಸಂಸ್ಥೆಗಳು ನಿರ್ಮಿಸುವ ಕಟ್ಟಡಗಳಿಗೆ ಮೂಲ ಸೌಕರ್ಯ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮುಂದೆ ಬಡಾವಣೆ ಇಲ್ಲವೇ ವಸತಿ ಸಮುಚ್ಛಯ ನಿರ್ಮಿಸುವವರು ಕಡ್ಡಾಯವಾಗಿ ಪ್ರಾಧಿಕಾರದಡಿ ನೋಂದಾಯಿಸಿಕೊಂಡು ಸದಸ್ಯತ್ವ ಪಡೆದುಕೊಳ್ಳಬೇಕು. ನಿವೇಶನ, ವಸತಿ ಪಡೆಯುವವರೂ ಕೂಡ, ತಾವು ವ್ಯವಹರಿಸಲು ಇಚ್ಛಿಸುವ ಸಂಸ್ಥೆ ರೇರಾದಡಿ ನೋಂದಾವಣಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

Translate »