ಕೊಡಗಿನ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಡಿ.8ರಂದು ಸಿಎಂ ಹೆಚ್‍ಡಿಕೆ ಶಂಕುಸ್ಥಾಪನೆ
ಮೈಸೂರು

ಕೊಡಗಿನ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಡಿ.8ರಂದು ಸಿಎಂ ಹೆಚ್‍ಡಿಕೆ ಶಂಕುಸ್ಥಾಪನೆ

November 30, 2018

ಮೈಸೂರು: ಕೊಡಗಿ ನಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿನಿಂದ ಮನೆ ಕಳೆದುಕೊಂಡ ನಿರಾಶ್ರಿತ ಕುಟುಂಬ ಗಳಿಗೆ ಸರ್ಕಾರ ಮನೆ ಕಟ್ಟಿಕೊಡುವ ಯೋಜನೆ ಯನ್ನು ರೂಪಿಸಿದೆ ಎಂದು ನಗರಾಭಿ ವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಕಚೇರಿಯಲ್ಲಿ ಮುಡಾ ಅದಾಲತ್ ನಡೆಸಿದ ಸಚಿವರು, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡುತ್ತಿದ್ದರು. ನೈಸರ್ಗಿಕ ವಿಪತ್ತಿನಲ್ಲಿ ನಿರಾ ಶ್ರಿತರಾದವರ ಕುಟುಂಬಗಳನ್ನು ಈಗಾ ಗಲೇ ಗುರುತಿಸಲಾಗಿದ್ದು, 2 ಬೆಡ್‍ರೂಮಿನ ಸುಸಜ್ಜಿತ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಡಿಸೆಂಬರ್ 8ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆ ಯಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ನಿಗದಿಯಾಗಿದೆ ಎಂದ ಅವರು, ಒಂದು ಮನೆಗೆ 9,85,000 ರೂ. ವೆಚ್ಚ ತಗುಲಲಿದ್ದು, ಒಟ್ಟು 845 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

100 ಕೋಟಿ ರೂ. ಮನೆ ನಿರ್ಮಾಣಕ್ಕೆ ಹಾಗೂ 35 ಕೋಟಿ ರೂ.ಗಳನ್ನು ಮೂಲ ಸೌಲಭ್ಯ ಒದಗಿಸಲು ಸರ್ಕಾರ ಖರ್ಚು ಮಾಡು ತ್ತಿದೆ. ಈಗಾಗಲೇ ಮನೆ, ಆಸ್ತಿ-ಪಾಸ್ತಿ ಕಳೆದು ಕೊಂಡ ಕುಟುಂಬಳಿಗೆ ತಲಾ 50 ಸಾವಿರ ರೂ. ತಕ್ಷಣದ ಪರಿಹಾರ ವಿತರಿಸಿರುವು ದರ ಜೊತೆಗೆ ಮನೆ ಕಳೆದುಕೊಂಡವರಿಗೆ ಮಾಸಿಕ 10 ಸಾವಿರ ರೂ.ಗಳನ್ನು ನೀಡ ಲಾಗುತ್ತಿದೆ ಎಂದೂ ಖಾದರ್ ನುಡಿದರು.
ನೈಸರ್ಗಿಕ ವಿಪತ್ತು ಸಂಭವಿಸಿದ ತಕ್ಷ ಣವೇ ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೇ ಸ್ಥಳಕ್ಕೆ ಧಾವಿಸಿ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಸುರಕ್ಷತಾ ಕ್ರಮ ಪುನರ್ವಸತಿ ಕಲ್ಪಿಸಿ ನೆರವಾದುದಕ್ಕೆ ತಾವು ಕೊಡಗಿನ ಜನತೆ ಪರವಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಖಾದರ್ ಅವರು ತಿಳಿಸಿದರು.

ಬಿಲ್ಡಿಂಗ್ ಲೈಸನ್ಸ್, ಲೇಔಟ್ ಪ್ಲಾನ್‍ಗೆ ಏಕಗವಾಕ್ಷಿ ಪದ್ಧತಿ ಜಾರಿ: ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಅವಕಾಶ

ಮೈಸೂರು: ಕಟ್ಟಡಗಳಿಗೆ ಲೈಸನ್ಸ್ ಪಡೆಯಲು ಹಾಗೂ ಬಡಾವಣೆಗಳಿಗೆ ನಕ್ಷೆ ಅನು ಮೋದನೆಗಾಗಿ ಇನ್ನು ಮುಂದೆ ಕಚೇರಿಗಳಿಗೆ ಅಲೆಯ ಬೇಕಾಗಿಲ್ಲ. ಈ ಎರಡೂ ಸೇವೆಗಳಿಗೆ ಏಕಗವಾಕ್ಸಿ ಪದ್ಧತಿ(ಸಿಂಗಲ್ ವಿಂಡೋ ಸಿಸ್ಟಮ್)ಯನ್ನು ಜಾರಿ ಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಇಂದಿಲ್ಲಿ ತಿಳಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಮೈಸೂರಿನ ಲ್ಯಾನ್ಸ್‍ಡೌನ್ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಡಾ, ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಬರುವ ವಾಸದ ಮನೆ ಕಟ್ಟಲು ಅಥವಾ ವಸತಿ ಬಡಾವಣೆಗಳಿಗೆ ನಕ್ಷೆ ಮಂಜೂರು ಮಾಡಿಸಿಕೊಳ್ಳಲು ಜನರು ಇಲಾಖೆಗಳಿಂದ ಎನ್‍ಓಸಿ ಪಡೆಯುವುದಲ್ಲದೆ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಯಿತು. ಅಷ್ಟಾದರೂ ಕೆಲಸ ಮಾಡಿಕೊಡಲು ಅಧಿಕಾರಿಗಳು ಸತಾಯಿಸಿ ಲಂಚಕ್ಕಾಗಿ ಒತ್ತಾಯಯಿಸುತ್ತಿದ್ದ ಪರಿ ಸ್ಥಿತಿಯಿಂದ ಮುಕ್ತಿಗೊಳಿಸುವ ಸಲುವಾಗಿ ಸರ್ಕಾರ ಏಕಗವಾಕ್ಸಿ ಪದ್ಧತಿಯನ್ನು ಜಾರಿಗೊಳಿಸಲು ನಿರ್ಧ ರಿಸಿದೆ ಎಂದರು. ಇದರಿಂದ ಜನರು ಆನ್‍ಲೈನ್ ನಲ್ಲೇ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ದರೆ ಸಾಕು. ನಂತರ ಅಗತ್ಯವಿರುವ ಇಲಾಖೆಗಳಿಂದ ತನ್ನಿಂದ ತಾನೇ ಎನ್‍ಓಸಿ ಪಡೆದು ಎಲ್ಲವೂ ನಿಯಮ ಬದ್ಧವಾಗಿದ್ದರೆ 40 ದಿನದೊಳಗೆ ಅರ್ಜಿದಾರನಿಗೆ ಲೈಸನ್ಸ್ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ಅರ್ಜಿ ಸಲ್ಲಿಸಿದ ನಂತರ ಒಂದು ವಾರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸು ವರಲ್ಲದೆ, ಅರ್ಜಿದಾರನ ಮೊಬೈಲ್‍ಗೂ ಮೆಸೇಜ್ ಮೂಲಕ ಮಾಹಿತಿ ಬರಲಿದೆ. ಸೇವೆಯನ್ನು ಅರ್ಜಿ ದಾರನೇ ಆನ್‍ಲೈನ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಇದರಲ್ಲಿ ಲಭ್ಯವಿದೆ ಎಂದ 30×40 ಅಡಿ ಅಳತೆಯ ಮನೆ ನಿರ್ಮಿಸುವವರು ಸೆಲ್ಫ್ ಲೈಸೆನ್ಸಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ಅಧಿಕಾರಿಗಳಿಗೂ ಶಿಕ್ಷೆ: ಅತಿಕ್ರಮಣ, ನಿಯಮ ಉಲ್ಲಂ ಘಿಸಿ ಕಟ್ಟಡ ನಿರ್ಮಾಣಗೊಳ್ಳುವುದೂ ಸೇರಿದಂತೆ ಯಾವುದೇ ಕಾನೂನು ಬಾಹಿರವಾಗಿ ನಿರ್ಮಾಣ ಗೊಂಡಲ್ಲಿ ಮಾಲೀಕರಿಗಷ್ಟೇ ಅಲ್ಲದೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಗುರಿಯಾಗಿಸುವ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ಯಾವ ಯಾವ ಲೋಪಕ್ಕೆ ಎಷ್ಟು ಶಿಕ್ಷೆ ಎಂಬುದರ ಬಗ್ಗೆ ಈಗಾಗಲೇ ಅಂತಿಮ ರೂಪಕ್ಕೆ ತರಲಾಗಿದೆ. ಇಷ್ಟರಲ್ಲೇ ನೂತನ ಕಾನೂನನ್ನು ಜಾರಿಗೊಳಿಸುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಸರ್ಕಾರ ಪ್ರಕ್ರಿಯೆ ನಡೆಸುತ್ತಿದೆ ಎಂದ ಅವರು, ಇದರಿಂದ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Translate »