ಜೂಜುಕೋರರ ಬಂಧನ
ಹಾಸನ

ಜೂಜುಕೋರರ ಬಂಧನ

December 1, 2018

ಹಾಸನ: ಹಾಸನ ಗ್ರಾಮಾಂತರ ಠಾಣೆ ಪೊಲೀಸರು 7 ಮಂದಿ ಜೂಜುಕೋರರನ್ನು ಬಂಧಿಸಿ 2,800 ರೂ. ವಶಪಡಿಸಿಕೊಂಡಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ರೇಖಾಬಾಯಿ ಅವರು ತಮ್ಮ ಸಿಬ್ಬಂದಿಯೊಂದಿಗೆ ನ.29ರಂದು ರಾತ್ರಿ 10.30ರ ಸುಮಾರಿನಲ್ಲಿ ಕೈಗಾರಿಕಾ ಪ್ರದೇಶದ ಬಳಿ ಗಸ್ತಿನಲ್ಲಿದ್ದಾಗ ನೋವಾ ಮ್ಯಾಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮೇನ್‍ಗೇಟ್ ಮುಂಭಾಗ ಜೂಜಾಡುತ್ತಿದ್ದ ಪ್ರಸನ್ನ (27), ರೂಪೇಶ್ (24), ಸೋಮಶೇಖರ್ (28), ಗಂಗಾಧರ ಅಲಿಯಾಸ್ ಗಂಗ (30), ಡಿ.ಪಿ.ನಂದೀಶ್ (26), ಕಿರಣ್ ಮತ್ತು ಚಂದ್ರ (40) ಅವರನ್ನು ಬಂಧಿಸಿ, ಅವರಿಂದ 2,800 ರೂ. ವಶಪಡಿಸಿಕೊಂಡಿದ್ದಾರೆ.

Translate »