ನ.29ರಂದು ನಗರಾಭಿವೃದ್ಧಿ ಸಚಿವರಿಂದ ಮುಡಾ ಅದಾಲತ್
ಮೈಸೂರು

ನ.29ರಂದು ನಗರಾಭಿವೃದ್ಧಿ ಸಚಿವರಿಂದ ಮುಡಾ ಅದಾಲತ್

November 22, 2018

ಮೈಸೂರು:  ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್, ನವೆಂ ಬರ್ 29ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ) ಕಚೇರಿ ಸಭಾಂಗಣದಲ್ಲಿ ಮುಡಾ ಅದಾಲತ್ ನಡೆಸುವರು.

ಅಂದು (ಗುರುವಾರ) ಬೆಳಿಗ್ಗೆ 10 ಗಂಟೆಗೆ ಮುಡಾ ಅದಾಲತ್ ಸಭೆಯಲ್ಲಿ ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಹಾಜರಿರುವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಸಚಿವರು, ಸಾಧ್ಯವಿರುವ ಸಮಸ್ಯೆ ಇತ್ಯರ್ಥಪಡಿಸು ವರು. ಆ ಮೂಲಕ, ಸಾರ್ವಜನಿಕರಿಂದ ‘ಅದಾಲತ್’ ಯೋಜನೆಯಡಿ ಬಂದಿರುವ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಯೋಜನೆಯನ್ನು ಅಂತ್ಯಗೊಳಿಸಲಾಗುವುದು. ಅದಾಲತ್ ನಂತರ ಸಚಿವರು ಮುಡಾ ಅಧಿಕಾರಿ ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸ್ಥಳೀಯ ಮಟ್ಟದ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವರು. ನ. 24ರಂದು ಮುಡಾ ಸಭೆ: ಅದಕ್ಕೂ ಮೊದಲು ಜಿಲ್ಲಾಧಿಕಾರಿ ಹಾಗೂ ಮುಡಾ ಅಧ್ಯಕ್ಷರೂ ಆಗಿರುವ ಅಭಿರಾಂ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ನವೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ಪ್ರಾಧಿಕಾರದ ಸಭೆ ನಡೆಯಲಿದೆ. ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮೈಸೂರಿನಲ್ಲಿ ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನಗಳ ಪಟ್ಟಿ ತಯಾರಿಸಿರುವ ಮುಡಾ ಅಧಿಕಾರಿಗಳು, ಪೂರಕ ದಾಖಲಾತಿಗಳೊಂದಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಡಿಸುವರು.

Translate »