ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ
ಮೈಸೂರು

ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ

November 22, 2018

ಮೈಸೂರು:  ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯು ತ್ತಿರುವ ಅಖಿಲ ಭಾರತ 15 ವರ್ಷದೊಳ ಗಿನವರ ಮುಕ್ತ ಚೆಸ್ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ಬುಧವಾರ ಚಾಲನೆ ದೊರೆಯಿತು.

ಚೆಸ್ ಪಾನ್ ಚಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಬೆಂಗ ಳೂರಿನ ಗೋಕುಲ ಎಜುಕೇಷನ್ ಫೌಂಡೇಷನ್‍ನ ಚೇರ್ಮನ್ ಡಾ. ಎಂ.ಆರ್.ಜಯರಾಂ, ನಂತರ ಮಾತ ನಾಡಿ, ಬುದ್ಧಿಮಟ್ಟವನ್ನು ಹೆಚ್ಚಿಸುವ ಚೆಸ್ ಆಟ ಭಾರತೀಯ ಕ್ರೀಡೆಗಳಲ್ಲಿ ಸೇರ್ಪಡೆ ಗೊಂಡಿರುವುದು ಹೆಮ್ಮೆಪಡುವಂಥದ್ದು. ಈ ಆಟದಲ್ಲಿ ನಂಬರ್ ಒನ್ ಆಗಿರುವ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರೂ ಭಾರತೀಯರೇ ಆಗಿದ್ದಾರೆ. ಕ್ರೀಡೆ, ಸಾಹಿತ್ಯ, ಶಿಕ್ಷಣಕ್ಕೆ ಪ್ರಶಸ್ತವಾದ ಮೈಸೂ ರಿನಲ್ಲಿ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿ ನಡೆಯುತ್ತಿರುವುದು ಸಂತ ಸದ ವಿಷಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಪಂ ಸಿಇಓ ಕೆ.ಜ್ಯೊತಿ ಮಾತನಾಡಿ, ಬೌದ್ಧಿಕ ಕಸರತ್ತಿನ ಕ್ರೀಡೆ ಚೆಸ್. ಮಾನಸಿಕ ನೆಮ್ಮದಿ ನೀಡುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಪೋಷಕರು ತಮ್ಮ ಮಕ್ಕಳಲ್ಲಿನ ಕ್ರೀಡೆ ಯನ್ನು ಗುರ್ತಿಸಿ ಪ್ರೋತ್ಸಾಹಿಸುತ್ತಿರು ವುದು ಶ್ಲಾಘನೀಯ ಎಂದರು.

ರಾಜ್ಯದ ಖ್ಯಾತ ಚೆಸ್ ಪಟು ತೇಜ ಕುಮಾರ್ ಮಾತನಾಡಿ, ಮೈಸೂರಿನಲ್ಲಿ 15 ವರ್ಷದೊಳಗಿನವರ ಫಿಡೆ ರೇಟೆಡ್ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಮೈಸೂ ರಿನ ಚೆಸ್ ಪಟುಗಳಿಗೂ ಸದವಕಾಶ ಸಿಕ್ಕಿದೆ. ಇದನ್ನು ಬಳಸಿಕೊಳ್ಳಬೇಕು. ಚೆಸ್‍ನಲ್ಲಿ ಮೈಸೂ ರಿಗರು ಸಾಧನೆ ಮಾಡುವಂತಾಗಬೇಕು ಎಂದು ಹೇಳಿದರು.

ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿ ಯೇಷನ್, ಆಲ್ ಇಂಡಿಯಾ ಚೆಸ್ ಫೆಡ ರೇಷನ್ ಸಹಯೋಗದಲ್ಲಿ ಮೈಸೂರು ಚೆಸ್ ಕ್ಲಬ್ ಆಯೋಜಿಸಿರುವ 5 ದಿನಗಳ ಚೆಸ್ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯ ಗಳಿಂದ 320 ಚೆಸ್ ಪಟುಗಳು ಉತ್ಸಾಹ ದಿಂದ ಭಾಗವಹಿಸಿದ್ದಾರೆ.

ಒಟ್ಟು 8 ವಿಭಾಗಗಳಲ್ಲಿ ಸ್ವಿಸ್ ಲೀಗ್ ಮಾದರಿಯಲ್ಲಿ 9 ಸುತ್ತಿನಲ್ಲಿ ಪಂದ್ಯಗಳು ನಡೆಯಲಿದ್ದು, ಬಾಲಕ, ಬಾಲಕಿಯರು ಭಾಗವಹಿಸಿದ್ದಾರೆ. ಎಲ್ಲಾ ವಿಭಾಗಗಳಿಂದ ಒಟ್ಟು 2.50,000 ರೂ.ಗಳ ಬಹುಮಾನ ಗಳಿದ್ದು, ಮೊದಲ ಬಹುಮಾನ 40,000, 2ನೇ ಬಹುಮಾನ 25,000 ಹಾಗೂ ಮೂರನೇ ಬಹುಮಾನ 15 ಸಾವಿರ ಹೀಗೆ ಒಟ್ಟು 30 ಬಹುಮಾನಗಳಿವೆ. ಅಲ್ಲದೆ 13, 11, 9 ಹಾಗೂ 7 ವರ್ಷ ವಯಸ್ಸಿ ನೊಳಗಿನ ವಿಭಾಗಗಳ ಬಾಲಕ, ಬಾಲಕಿ ಯರಿಗೆ ಪ್ರತ್ಯೇಕವಾಗಿ ತಲಾ 5 ಟ್ರೋಫಿ ಗಳನ್ನು ವಿಜೇತರಿಗೆ ನೀಡಲಾಗುವುದು. ರೇಟಿಂಗ್ ವಿಭಾಗದಲ್ಲೂ ಬಹುಮಾನ ಗಳಿವೆ. 6 ವರ್ಷದೊಳಗಿನ ಅತ್ಯುತ್ತಮ ಕಿರಿಯ ಬಾಲಕ ಮತ್ತು ಬಾಲಕಿ ಟ್ರೋಫಿ ಗಳೂ ಇವೆ. ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮೈಸೂರು ಚೆಸ್ ಕ್ಲಬ್ ಗೌರವ ಅಧ್ಯಕ್ಷ ಎಚ್.ಜಿ.ಶ್ರೀವರ, ಉಪಾಧ್ಯಕ್ಷ ಎನ್.ಆರ್.ಮಂಜುನಾಥ್, ಗೌರವ ಕಾರ್ಯದರ್ಶಿ ಕೆ.ಜಿ.ಜಯಪ್ರಕಾಶ್, ಆಲ್ ಇಂಡಿಯಾ ಚೆಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಹನುಮಂತು, ಮೈಸೂರು ಚೆಸ್ ಕ್ಲಬ್ ಕಾಂiÀರ್iಕಾರಿ ಸದಸ್ಯರಾದ ಲಕ್ಷ್ಮಿನಾರಾಯಣರಾವ್, ಎಸ್.ನಾಗೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »