ಮಂಡ್ಯ

ಮಂಡ್ಯ

ಸಮ್ಮಿಶ್ರ ಸರ್ಕಾರದಲ್ಲಿ ಕುರುಬ ಸಮಾಜಕ್ಕೆ ಅನ್ಯಾಯ: ಖಂಡನೆ

June 18, 2018

ಕೆ.ಆರ್.ಪೇಟೆ:  ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ದಲ್ಲಿ ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡದ ಕ್ರಮವನ್ನು ತಾಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಖಂಡಿಸಿದರು. ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್‍ನ ಸಂಘದ ಕಚೇರಿಯಲ್ಲಿ ನಡೆದ ಮುಂಖಡರು ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವೀರಶೈವ-ಲಿಂಗಾ ಯಿತರನ್ನು ಹೊರತು ಪಡಿಸಿದರೆ, ಕುರುಬ ಸಮಾಜ ಜನಸಂಖ್ಯೆಯಲ್ಲಿ 2ನೇ ಸ್ಥಾನ ದಲ್ಲಿದೆ. ಆದರೂ ಕಾಂಗ್ರೆಸ್ ವರಿಷ್ಠರು ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ್ದಾರೆ. ಇದು ಸಮಾಜದ ಅಭಿವೃದ್ಧಿ…

ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ: ಮಕ್ಕಳಿಗೆ ಬಹುಮಾನ ವಿತರಣೆ
ಮಂಡ್ಯ

ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ: ಮಕ್ಕಳಿಗೆ ಬಹುಮಾನ ವಿತರಣೆ

June 18, 2018

ಮಂಡ್ಯ:  ತಾಲೂಕಿನ ಬಿ.ಹೊಸಳ್ಳಿ ಯಲ್ಲಿಯಲ್ಲಿರುವ ಬಿಆರ್‍ವಿ ಅಂತರಾಷ್ಟ್ರೀಯ ಶಾಲೆಯಲ್ಲಿ ಮಂಡ್ಯ ಚೆಸ್ ಅಕಾಡೆಮಿ ಸಂಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಚೆಸ್ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಸಾಹಿತಿ ನೀಲಗಿರಿಗೌಡ ಮತ್ತು ಬಿಆರ್‍ವಿ ಅಂತರಾಷ್ಟ್ರೀಯ ಶಾಲೆ ಸಂಸ್ಥಾಪಕ ವೀರಣ್ಣಗೌಡ ಬಹುಮಾನ ವಿತರಿಸಿದರು. ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತರ ವಿವರ ಬಾಲಕಿಯರ ವಿಭಾಗದಲ್ಲಿ: 17 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಎಸ್.ಆರ್.ಪ್ರಣೀತ ಪ್ರಥಮ, ಎಸ್.ಮೇಘನ ದ್ವಿತೀಯ ಹಾಗೂ ಭೂಮಿಕಾ ಉಡುಪ ತೃತೀಯ ಬಹುಮಾನ ಪಡೆದರು. 13 ವರ್ಷದೊಳಗಿನ…

ಯೋಗದಿಂದ ದೈಹಿಕ, ಮಾನಸಿಕ ಉಲ್ಲಾಸ ಸಾಧ್ಯ
ಮಂಡ್ಯ

ಯೋಗದಿಂದ ದೈಹಿಕ, ಮಾನಸಿಕ ಉಲ್ಲಾಸ ಸಾಧ್ಯ

June 18, 2018

ಮಂಡ್ಯ:  ಯಾವುದೇ ಕೆಲಸ ವನ್ನೂ ಒಂದೇ ಮನಸ್ಸಿನಿಂದ ಮಾಡಲು ಯೋಗ ಸಹಕಾರಿಯಾಗುತ್ತದೆ. ಯೋಗ ದಿಂದ ಮನಸ್ಸು ಉಲ್ಲಾಸವಾಗುತ್ತದೆ. ದೇಹದ ಆರೋಗ್ಯ ಮತ್ತು ಚೇತೋಹಾರಿ ಯಾಗಿರುತ್ತದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು. ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಆಯುಷ್ ಇಲಾಖೆ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಸರ್ಕಾರಿ ಮಹಾವಿದ್ಯಾಲಯ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಾಗೃತಿ…

ಸರ್ಕಾರಿ ವೃತ್ತಿ ಸೇವಾ ಮನೋಭಾವದಿಂದ ಕೂಡಿರಲಿ
ಮಂಡ್ಯ

ಸರ್ಕಾರಿ ವೃತ್ತಿ ಸೇವಾ ಮನೋಭಾವದಿಂದ ಕೂಡಿರಲಿ

June 18, 2018

ಮಂಡ್ಯ:  ಸರ್ಕಾರಿ ವೃತ್ತಿ ಸೇವಾ ಮನೋಭಾದಿಂದ ಕೂಡಿರಲಿ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಹೆಚ್. ನಾಗರಾಜು ಹೇಳಿದರು. ನಗರದ ಗಾಂಧಿ ಭವನದಲ್ಲಿ ಶ್ರೀಸಂಗೊಳ್ಳಿ ರಾಯಣ್ಣ ಸಹಕಾರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿ ಜನಪರ ಸಾಧನೆ ಮಾಡಿದವರನ್ನು ಹುಡುಕಿ ಅಭಿನಂದಿಸುತ್ತಿ ರುವುದು ಶ್ಲಾಘನೀಯ. ಇಂತಹ ಸೇವಾ ಕಾರ್ಯ ಪ್ರವೃತ್ತಿಯುಳ್ಳವನ್ನು ಗುರುತಿಸಿ, ಪ್ರೋತ್ಸಾಹಿಸುವುದು ಉತ್ತಮ ಎಂದು ನುಡಿದರು. ದಕ್ಷತೆ ಮತ್ತು ಪ್ರಾಮಾಣಿಕ ಸೇವಾ ವೃತ್ತಿ ಮಾಡುವುದು ತುಂಬ ವಿರಳ….

ವಿಸಿ ಫಾರಂ ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ
ಮಂಡ್ಯ

ವಿಸಿ ಫಾರಂ ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ

June 18, 2018

ಮಂಡ್ಯ: ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲೇಷನ್ ನೀಡುವು ದನ್ನು ಕೂಡಲೇ ತಡೆಗಟ್ಟಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಸಿ ಫಾರಂ ಕೃಷಿ ವಿವಿ ವಿದ್ಯಾರ್ಥಿ ಗಳು ಮುಷ್ಕರ ನಡೆಸಿದರು. ವಿಸಿ ಫಾರಂ ಆವರಣದಲ್ಲಿ ಮುಷ್ಕರ ಆರಂಭಿಸಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವಿರೋಧಿ ನಿಲುವು ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು. ಕೃಷಿ ವಿಶ್ವವಿದ್ಯಾಲಯಗಳ ಕಾಯಿದೆಗೆ 2010ರಲ್ಲಿ ತಿದ್ದುಪಡಿ ತಂದು ಖಾಸಗಿ ಕೃಷಿ ವಿವಿ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ಖಾಸಗಿ ಕಾಲೇಜು ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ವಿಭಾಗದಲ್ಲಿ…

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!
ಮಂಡ್ಯ

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!

June 17, 2018

ಮಂಡ್ಯ:  ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸಿದರು. ಮಂಡ್ಯ: ಮಂಡ್ಯ ನಗರದ ಸಂತೇಮಾಳದ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪುಟ್ಟ ಪುಟ್ಟ ಮಕ್ಕಳು ಸಹ ಪ್ರಾರ್ಥನೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸಾಮೂಹಿಕ ಪ್ರಾರ್ಥನೆ ಬಳಿಕ ಯುವಕರು, ಹಿರಿಯರು, ಕಿರಿಯರು ಮತ್ತು ಮಕ್ಕಳು…

ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ

June 17, 2018

ಪಾಂಡವಪುರ: ನಮ್ಮ ಕುಟುಂಬದೊಂದಿಗೆ ದಲಿತ ಮುಖಂಡ ದಿವಂಗತ ಶಿವಣ್ಣ ಅವರು ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದರು ಎಂದು ಜಿಪಂ ಸದಸ್ಯ ಸಿ.ಅಶೋಕ್ ತಿಳಿಸಿದರು. ಪಟ್ಟಣದ ಕಸಾಪ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಮುಖಂಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸಣಬ ಶಿವಣ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶಿವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಶಿವಣ್ಣ ಅವರ ಅಕಾಲಿಕ ನಿಧನ ನಮ್ಮ ಇಡೀ ಕುಟುಂಬಕ್ಕೆ ಅತೀವ ನೋವುಂಟು ಮಾಡಿದೆ. ಶಿವಣ್ಣ ಅವರ ಕುಟುಂಬಕ್ಕೆ ನಮ್ಮ…

11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು
ಮಂಡ್ಯ

11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು

June 17, 2018

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಿ.ಬಿ.ಕಾವಲು ಬಳಿಯ ತೋಟದ ಮನೆಗೆ ಗುಂಪೊಂದು ದಾಳಿ ನಡೆಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 5ಲಕ್ಷ ರೂ. ಮೌಲ್ಯದ 11 ಹಸುಗಳು ಹಾಗೂ 50ಸಾವಿರ ರೂ. ಮೌಲ್ಯದ ತೆಂಗಿನ ಕಾಯಿ ರಾಶಿಯನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಬಿ.ಬಿ.ಕಾವಲಿನ ವೆಂಕಟೇಗೌಡ ಮತ್ತು ಸುಬ್ಬೇಗೌಡರಿಗೆ ಸೇರಿದ ತೋಟದ ಮನೆಯಲ್ಲಿ ಅವರ ಸೋದರ ಸಂಬಂಧಿ ಪ್ರವೀಣ್ ಮತ್ತು ಧರ್ಮಪ್ಪ ಮಲಗಿರುವಾಗ ಜೂ.14ರಂದು ರಾತ್ರಿ ಸುಮಾರು 11ಗಂಟೆ ವೇಳೆ ಪಟ್ಟಣದ ದೀಪಕ್ ಎಂಬಾತ ಏಳೆಂಟು ಮಂದಿಯೊಂದಿಗೆ…

ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ
ಮಂಡ್ಯ

ರೈತರ ಜೀವನಾಡಿ ಮನ್‍ಮುಲ್ ಬಲಪಡಿಸಿ

June 17, 2018

ಕೆ.ಆರ್.ಪೇಟೆ: ತಾಲೂಕಿನ ಅಂಚನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಮನ್‍ಮುಲ್ ನಿರ್ದೇಶಕ ಅಂಬರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗಟ್ಟಿಗೊಳಿಸಿ, ಜಿಲ್ಲೆಯ ರೈತರ ಜೀವನಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವನ್ನು ಬಲಪಡಿಸಬೇಕು. ಹಾಲು ಉತ್ಪಾದಕರ ಸಂಘಗಳು ಮತ್ತು ಸೊಸೈಟಿಗಳು ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಪ್ರತಿ ವಾರವೂ ರೈತರ ಮನೆ ಬಾಗಿಲಿಗೆ ಹಾಲಿನ ಹಣ ನೀಡುವ ಮೂಲಕ ರೈತರಿಗೆ…

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಮಂಡ್ಯ

ಶ್ರೀಸಾಮಾನ್ಯರ ಸಮಸ್ಯೆ ಆಲಿಸಲು ಕಾಲ್ ಸೆಂಟರ್ ಸ್ಥಾಪನೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

June 17, 2018

ಭಾರತೀನಗರ:  ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮದ್ದೂರು ಪಟ್ಟಣದಲ್ಲಿ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಕಾವೇರಿ ನೀರಾವರಿ ನಿಗಮದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ರಾಜ್ಯ ಸಚಿವನಾಗಿರುವುದರಿಂದ ಕ್ಷೇತ್ರದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಕ್ಷೇತ್ರದ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಪಟ್ಟಣದಲ್ಲಿ ಕಾಲ್ ಸೆಂಟರ್ ತೆರೆಯಲಿದ್ದು, ಈ ಕೇಂದ್ರ ಬೆಳಗ್ಗೆ 8 ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯ ನಿರ್ವಹಿಸಲಿದೆ. ಇಲ್ಲಿಗೆ ದೂರು ನೀಡಿದರೆ ಶೀಘ್ರವಾಗಿ ಅದನ್ನು ಬಗೆಹರಿಸಲು…

1 95 96 97 98 99 108
Translate »