ಮಂಡ್ಯ

ಸಮ್ಮಿಶ್ರ ಸರ್ಕಾರದಲ್ಲಿ ಕುರುಬ ಸಮಾಜಕ್ಕೆ ಅನ್ಯಾಯ: ಖಂಡನೆ

June 18, 2018

ಕೆ.ಆರ್.ಪೇಟೆ:  ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ದಲ್ಲಿ ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡದ ಕ್ರಮವನ್ನು ತಾಲೂಕು ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಖಂಡಿಸಿದರು.

ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್‍ನ ಸಂಘದ ಕಚೇರಿಯಲ್ಲಿ ನಡೆದ ಮುಂಖಡರು ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವೀರಶೈವ-ಲಿಂಗಾ ಯಿತರನ್ನು ಹೊರತು ಪಡಿಸಿದರೆ, ಕುರುಬ ಸಮಾಜ ಜನಸಂಖ್ಯೆಯಲ್ಲಿ 2ನೇ ಸ್ಥಾನ ದಲ್ಲಿದೆ. ಆದರೂ ಕಾಂಗ್ರೆಸ್ ವರಿಷ್ಠರು ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದ್ದಾರೆ. ಇದು ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಕುರುಬ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮಾಜವು ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಾಲೂಕು ಯುವ ಕುರುಬರ ಸಂಘದ ಅಧ್ಯಕ್ಷ ನಿಂಗೇಗೌಡ, ಮುಖಂಡರಾದ ಮೋಹನ್, ಸಿದ್ದೇಗೌಡ, ಕೆ.ಎನ್.ಕಾಳೇಗೌಡ, ಅನಂತು, ಕೆ.ರಾಮೇ ಗೌಡ, ದೇವರಾಜು, ಜಿ.ಎಸ್.ಕರೀಗೌಡ, ತ್ಯಾಗರಾಜು, ವಿಎಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಕೃಷ್ಣೇಗೌಡ, ಬಸವರಾಜು ಮತ್ತಿತರರಿದ್ದರು.

Translate »