ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ: ಮಕ್ಕಳಿಗೆ ಬಹುಮಾನ ವಿತರಣೆ
ಮಂಡ್ಯ

ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ: ಮಕ್ಕಳಿಗೆ ಬಹುಮಾನ ವಿತರಣೆ

June 18, 2018

ಮಂಡ್ಯ:  ತಾಲೂಕಿನ ಬಿ.ಹೊಸಳ್ಳಿ ಯಲ್ಲಿಯಲ್ಲಿರುವ ಬಿಆರ್‍ವಿ ಅಂತರಾಷ್ಟ್ರೀಯ ಶಾಲೆಯಲ್ಲಿ ಮಂಡ್ಯ ಚೆಸ್ ಅಕಾಡೆಮಿ ಸಂಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಚೆಸ್ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಸಾಹಿತಿ ನೀಲಗಿರಿಗೌಡ ಮತ್ತು ಬಿಆರ್‍ವಿ ಅಂತರಾಷ್ಟ್ರೀಯ ಶಾಲೆ ಸಂಸ್ಥಾಪಕ ವೀರಣ್ಣಗೌಡ ಬಹುಮಾನ ವಿತರಿಸಿದರು.

ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತರ ವಿವರ

ಬಾಲಕಿಯರ ವಿಭಾಗದಲ್ಲಿ: 17 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಎಸ್.ಆರ್.ಪ್ರಣೀತ ಪ್ರಥಮ, ಎಸ್.ಮೇಘನ ದ್ವಿತೀಯ ಹಾಗೂ ಭೂಮಿಕಾ ಉಡುಪ ತೃತೀಯ ಬಹುಮಾನ ಪಡೆದರು.
13 ವರ್ಷದೊಳಗಿನ ಮಕ್ಕಳ ವಿಭಾಗ Àದಲ್ಲಿ ಸುಗಂಧಿಕಟ್ಟಿ ಪ್ರಥಮ, ಸುನಿಧಿ ಕಟ್ಟಿ ದ್ವಿತೀಯ ಹಾಗೂ ಡಿ.ಜಾನವಿ ತೃತೀಯ ಬಹುಮಾನ ಪಡೆದರು. 9 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಜಿ.ಸ್ಫೂರ್ವಿಕ ಪ್ರಥಮ, ಎಸ್.ಪಿ.ಕುಸುಮ ದ್ವಿತೀಯ ಹಾಗೂ ಸಿ.ಸಾನ್ವಿ ತೃತೀಯ ಬಹುಮಾನ ಪಡೆದರು.

ಬಾಲಕರ ವಿಭಾಗದಲ್ಲಿ: 17 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ತನವ್ ಸುದರ್ಶನ್ ಪ್ರಥಮ, ಧ್ರುವ್ ವಿ. ಜೈನ್ ದ್ವಿತೀಯ ಹಾಗೂ ಎನ್. ರಾಕೇಶ್ ತೃತೀಯ ಬಹುಮಾನ ಪಡೆದರು. 13 ವರ್ಷದೊಳಗಿನ ಮಕ್ಕಳ ವಿಭಾಗ ದಲ್ಲ್ಲಿ ಕುಂದನ್ ಡಿ. ಗೌಡ ಪ್ರಥಮ, ಎಂ.ವೈ. ದಿಲೀಪ್‍ಗೌಡ ದ್ವಿತೀಯ ಹಾಗೂ ಗರ್ವ್ ಆರ್‍ಜೈನ್ ತೃತೀಯ ಬಹುಮಾನ ಪಡೆದರು. 9 ವರ್ಷದೊಳಗಿನ ಮಕ್ಕಳ ವಿಭಾಗದಲ್ಲ್ಲಿ ಚಿರಂತ್ ಆರ್. ಸಾವಕ್ ಪ್ರಥಮ, ಎಂ.ಜಿ.ಶ್ರೇಯಸ್ ದ್ವಿತೀಯ ಹಾಗೂ ಎಸ್.ಪ್ರಿತ್ವಿಕ್ ತೃತೀಯ ಬಹುಮಾನ ಪಡೆದರು. ಎಲ್ಲಾ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Translate »