ಯೋಗದಿಂದ ದೈಹಿಕ, ಮಾನಸಿಕ ಉಲ್ಲಾಸ ಸಾಧ್ಯ
ಮಂಡ್ಯ

ಯೋಗದಿಂದ ದೈಹಿಕ, ಮಾನಸಿಕ ಉಲ್ಲಾಸ ಸಾಧ್ಯ

June 18, 2018

ಮಂಡ್ಯ:  ಯಾವುದೇ ಕೆಲಸ ವನ್ನೂ ಒಂದೇ ಮನಸ್ಸಿನಿಂದ ಮಾಡಲು ಯೋಗ ಸಹಕಾರಿಯಾಗುತ್ತದೆ. ಯೋಗ ದಿಂದ ಮನಸ್ಸು ಉಲ್ಲಾಸವಾಗುತ್ತದೆ. ದೇಹದ ಆರೋಗ್ಯ ಮತ್ತು ಚೇತೋಹಾರಿ ಯಾಗಿರುತ್ತದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ತಿಳಿಸಿದರು.

ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಸರ್ಕಾರ, ಆಯುಷ್ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಆಯುಷ್ ಇಲಾಖೆ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಸರ್ಕಾರಿ ಮಹಾವಿದ್ಯಾಲಯ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2018ರ ಅಂಗವಾಗಿ ಜಿಲ್ಲಾ ಯುವಜನ ಸಮಾವೇಶ ಮತ್ತು ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸನಾತನ ಸಂಸ್ಕøತಿಯಲ್ಲಿ ಯೋಗವೂ ಒಂದಾಗಿದ್ದು, ಸಪ್ತಋಷಿ ಗಳಿಂದ ಪ್ರಾರಂಭವಾದ ಯೋಗ ನಂತರದ ದಿನಗಳಲ್ಲಿ ಸಾಧು ಸಂತರಿಂದ ಎಲ್ಲ ಮಾನವರೂ ಅಭ್ಯಾಸ ಮಾಡುವಂತಾ ಯಿತು ಎಂದು ತಿಳಿಸಿದರು.
ಭಾರತೀಯ ಸಂಸ್ಕøತಿಯ ಪ್ರತೀಕವಾಗಿ ರುವ ಯೋಗ ಇಂದು ವಿಶ್ವಮನ್ನಣೆ ಗಳಿಸಿದೆ. ಪ್ರಪಂಚದಾದ್ಯಂತ ಯೋಗ ದಿನಾಚರಣೆ

ಆಚರಿಸುವ ಮೂಲಕ ಯೋಗಾಭ್ಯಾಸವನ್ನು ಮಾಡಲು ಎಲ್ಲರೂ ಮುಂದಾಗಿದ್ದಾರೆ. ಶಿವನು ಸಂತರಿಗೆ ಯೋಗದ ರಹಸ್ಯ ಹೇಳಿ ಕೊಟ್ಟಿದ್ದಾನೆಂದು ನಂಬಲಾಗಿದೆ. ನಂತರ ಸಾಧು ಸಂತರು ನಿರಂತರ ಅಭ್ಯಾಸ ಆರಂಭಿಸಿ ದರು. ದೇಹ, ಮನಸ್ಸು, ಬುದ್ಧಿಯನ್ನು ಕೇಂದ್ರೀಕರಿಸಿ ಬ್ರಹ್ಮನಲ್ಲಿ ಲೀನಗೊಳ್ಳು ವುದೇ ಯೋಗ. ಇದು ಸತತ ಸಾಧನೆಯ ಮೂಲಕ ಅಭ್ಯಾಸ ಮಾಡಬೇಕೆಂದು ಹೇಳಿದರು.
ಭಗವದ್ಗೀತೆಯಲ್ಲೂ ಸಹ ಯೋಗದ ಉಲ್ಲೇಖವಿರುವುದನ್ನು ನಾವು ಕಾಣುತ್ತೇವೆ. ಜೂ.21ರಂದು ಯೋಗ ದಿನಾಚರಣೆ ಅಂಗವಾಗಿ ಎಲ್ಲರೂ ಅಭ್ಯಾಸ ಮಾಡ ಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೇ ಸತತ ಅಭ್ಯಾಸ ಮಾಡಬೇಕೆಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ನೆಹರು ಯುವ ಕೇಂದ್ರದ ಸಮನ್ವ ಯಾಧಿಕಾರಿ ಸಿದ್ದರಾಮಪ್ಪ ಮಾತನಾಡಿ, ಜೂ.21ರಂದು ವಿಶ್ವಯೋಗ ಕಾರ್ಯ ಕ್ರಮ ನಡೆಯಲಿದ್ದು, ಅಂದು 45 ನಿಮಿಷ ಗಳ ಕಾಲ ಯೋಗಾಭ್ಯಾಸ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವಿದ್ಯಾರ್ಥಿ ಗಳಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿ ಕೊಂಡಿದ್ದು, ಅಂದು ಎಲ್ಲ ವಿದ್ಯಾರ್ಥಿ ಗಳೂ ಯೋಗಾಭ್ಯಾಸ ಮಾಡಬೇಕೆಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಎ.ಸಿ.ರಮೇಶ್ ಮಾತನಾಡಿದರು. ಪ್ರಾಂಶುಪಾಲ ಪೆÇ್ರ.ಶಿವ ನಂಜೇಗೌಡ, ಎನ್‍ಎಸ್‍ಎಸ್ ಉಪ ಕಾರ್ಯ ಕ್ರಮ ಸಲಹೆಗಾರ ಡಾ.ಎಚ್.ಎಸ್.ಸುರೇಶ್, ಎಸ್‍ಪಿವೈಎಸ್‍ಎಸ್ ಜಿಲ್ಲಾ ಸಂಚಾಲಕ ಎಸ್.ಶಂಕರನಾರಾಯಣಶಾಸ್ತ್ರಿ, ಕ್ರೆಡಿಟ್ ಐ ನಿರ್ದೇಶಕ ಡಾ.ಎಂ.ಪಿ.ವರ್ಷಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಗಳಾದ ಲಿಂಗರಾಜು, ಜಗದೀಶ್, ನೇತ್ರಾವತಿ ಇತರರಿದ್ದರು.

Translate »