ಸರ್ಕಾರಿ ವೃತ್ತಿ ಸೇವಾ ಮನೋಭಾವದಿಂದ ಕೂಡಿರಲಿ
ಮಂಡ್ಯ

ಸರ್ಕಾರಿ ವೃತ್ತಿ ಸೇವಾ ಮನೋಭಾವದಿಂದ ಕೂಡಿರಲಿ

June 18, 2018

ಮಂಡ್ಯ:  ಸರ್ಕಾರಿ ವೃತ್ತಿ ಸೇವಾ ಮನೋಭಾದಿಂದ ಕೂಡಿರಲಿ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಹೆಚ್. ನಾಗರಾಜು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶ್ರೀಸಂಗೊಳ್ಳಿ ರಾಯಣ್ಣ ಸಹಕಾರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿ ಜನಪರ ಸಾಧನೆ ಮಾಡಿದವರನ್ನು ಹುಡುಕಿ ಅಭಿನಂದಿಸುತ್ತಿ ರುವುದು ಶ್ಲಾಘನೀಯ. ಇಂತಹ ಸೇವಾ ಕಾರ್ಯ ಪ್ರವೃತ್ತಿಯುಳ್ಳವನ್ನು ಗುರುತಿಸಿ, ಪ್ರೋತ್ಸಾಹಿಸುವುದು ಉತ್ತಮ ಎಂದು ನುಡಿದರು.

ದಕ್ಷತೆ ಮತ್ತು ಪ್ರಾಮಾಣಿಕ ಸೇವಾ ವೃತ್ತಿ ಮಾಡುವುದು ತುಂಬ ವಿರಳ. ಅಂತಹ ಸೇವಾ ಮನೋಭಾವನೆಯುಳ್ಳವರನ್ನು ಸಂಘವು ಅಭಿನಂದಿಸುತ್ತಿರುವುದು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ಮಾತನಾಡಿ, ನಿವೃತ್ತಿಯಾದ ಮೇಲೆ ಸುಮ್ಮನೆ ಇರಲು ಸಾಧ್ಯವಿಲ್ಲ. ನೌಕರರು, ಕೃಷಿ, ತೋಟಗಾರಿಕೆ ನೋಡಿ ಕೊಂಡು ದುಡಿಯುವತ್ತ ಸಾಗುತ್ತಿದ್ದಾರೆ. ಅದರಲ್ಲಿ ಅಧಿಕಾರಿ ಎಂ. ಬೋರೇಗೌಡ ಅವರು ತೋಟಗಾರಿಕೆಯನ್ನು ಆಯ್ಕೆ ಮಾಡಿಕೊಂಡಿ ರುವುದು ಉತ್ತಮವಾಗಿದೆ ಎಂದರು.

ಮಾದರಿ ರೈತರಾಗುವುದು ಮತ್ತು ರೈತರಿಗೆ ಮಾರ್ಗದರ್ಶಕರಾಗಿ ನಿವೃತ್ತ ನೌಕರರು, ಅಧಿಕಾರಿಗಳು ಸಾಧನೆ ಮಾಡಲು ಹೊರಟಿ ರುವುದು ಹೆಮ್ಮೆ ತರುತ್ತದೆ ಎಂದು ತಿಳಿಸಿದರು.

ಭಾರತ ಕೃಷಿ ಪ್ರಧಾನ ದೇಶ. ಬಹು ಪಾಲು ಜನರು ರೈತಾಪಿ ಸಮುದಾಯವೇ ಆಗಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕ ಮತ್ತು ಸದೃಢವಾಗಿ ಬೆಳೆಸಲು ವಿದ್ಯಾವಂತರು ಪ್ರಯತ್ನಿಸಬೇಕಿದೆ. ಈ ಮಣ್ಣಿನಲ್ಲಿ ಸಂಗೊಳ್ಳಿ ರಾಯಣ್ಣನಂತಹವರು ಹುಟ್ಟಿ ನಾಡುಕಟ್ಟಿ ಬೆಳೆಸಿದ್ದಾರೆ. ಅವರ ಚರಿತ್ರೆ ಮತ್ತು ಆದರ್ಶಗಳನ್ನು ನಾವು ತಿಳಿದು ಕೊಂಡು, ಮೈಗೂಡಿಸಿಕೊಳ್ಳಬೇಕಿದೆ. ಮಣ್ಣಿನ ಋಣ ತೀರಿಸಲು ಕೃಷಿ ಕ್ಷೇತ್ರದತ್ತ ಎಲ್ಲರೂ ಮುಖ ಮಾಡಬೇಕಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಬರುತ್ತಿವೆ. ಆಧುನಿಕ ಕೃಷಿ ಪದ್ಧತಿಯಿಂದ ಉತ್ತಮ ಲಾಭ, ತೋಟಗಾರಿಕೆ ಬೆಳೆಗಳು, ಹೈನುಗಾರಿಕೆ ವಿಧಾನಗಳನ್ನು ಅಳವಡಿಸಿ ಕೊಂಡರೆ ಭವಿಷ್ಯ ಜೀವನವು ಉತ್ತಮ ವಾಗಿರುವುದು ಎಂದು ಸಲಹೆ ನೀಡಿದರು.

ಸಂಕುಚಿತ ಮನೋಭಾವ ಬಿಟ್ಟು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ತಂತ್ರಜ್ಞಾನ, ತಾಂತ್ರಿಕ ಅಂಶಗಳನ್ನು ಅಳ ವಡಿಸಿಕೊಂಡು, ಸಾಧನೆ ಮಾಡಲು ಸದೃಢ ರಾದರೆ, ಆರ್ಥಿಕವಾಗಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಇದೇ ಸಂದರ್ಭ ಶಿಕ್ಷಣ ಇಲಾಖೆಯ ಎಂ ಬೋರೇಗೌಡ, ಮೀನುಗಾರಿಕೆ ಇಲಾಕೆಯ ಬಿ.ವೀರಭದ್ರಪ್ಪ, ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ತಾ. ಅಧ್ಯಕ್ಷ ಎಸ್.ಕೆ. ರಾಜು ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಬಿ.ನಾಗರಾಜು, ಕೆ.ಟಿ. ಕೃಷ್ಣ, ದಾಸಪ್ಪ, ದೊಡ್ಡಯ್ಯ, ಹುಚ್ಚೇಗೌಡ, ಬಸವರಾಜು, ಭಾರತಿ, ಚಂದ್ರಮ್ಮ, ಪುಟ್ಟಸ್ವಾಮಿ, ಚನ್ನಬಸವಯ್ಯ, ಪ್ರೇಮ, ರಮೇಶ್‍ಬಾಬು, ಜಯಸುಂದರಿ ಮತ್ತಿತರರಿದ್ದರು.

Translate »