ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅಲೆ ಇರುವುದರಿಂದ ನನ್ನ ಗೆಲುವು ನಿಶ್ಚಿತ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮತ ದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಯುವ ಕರೂ ಸೇರಿದಂತೆ ಕ್ಷೇತ್ರದ ಜನರು ನನ್ನನ್ನು ಬೆಂಬ ಲಿಸಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೂ ಮೋದಿ ಅವರ ಅಲೆ ಇರುವುದರಿಂದ ನಾನು ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ತಿಳಿಸಿದರು. ಕ್ಷೇತ್ರದಾದ್ಯಂತ ಬೆಳಿಗ್ಗೆಯಿಂದ ಸಂಜೆವರೆಗೂ ಸ್ವಯಂಪ್ರೇರಿತವಾಗಿ ಮತದಾರ ತನ್ನ ಹಕ್ಕು ಚಲಾಯಿಸಿರುವುದನ್ನು ಗಮನಿಸಿದರೆ,…
ಮತಗಟ್ಟೆ, ಹೆಸರು ಗೊಂದಲ
April 19, 2019ಮೈಸೂರು: ಎಂದಿನಂತೆ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತಗಟ್ಟೆಯ ಗೊಂದಲ ಮೈಸೂರು -ಕೊಡಗು ಲೋಕಸಭಾ ಚುನಾವಣೆಯಲ್ಲೂ ಕಂಡು ಬಂದಿತು. ಕೆ.ಆರ್. ಕ್ಷೇತ್ರದಲ್ಲಿ ಕೆಲವು ಮತದಾರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದೆ ಪರ ದಾಡುವಂತಾಯಿತು. ಮತದಾನ ಮಾಡಲು ಆಗಮಿಸಿದ್ದ 79ವರ್ಷದ ವೃದ್ಧೆ ಶೀಲಾ ಶಾಂಭವಮೂರ್ತಿ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಎಲ್ಲಾ ದಾಖಲೆಗಳಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಹೆಸರು…
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ
April 19, 2019ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರತಿಷ್ಠೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.71.75ರಷ್ಟು ಮತದಾನ ದಾಖಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಜಿ.ಟಿ.ದೇವೇಗೌಡ ವಿಜಯ ಸಾಧಿ ಸಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ…
ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು
April 19, 2019ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‍ನಲ್ಲಿ ಅವಳಿ-ಜವಳಿ ಸಹೋದರಿಯರಾದ ನಿಸರ್ಗ ಮತ್ತು ವಿಸ್ಮಯ ಇದೇ ಮೊದಲ ಬಾರಿಗೆ ಮತದಾನ ಮಾಡಿದರು. ಗ್ರಾಮದ ವಿಜಯಾ ಸ್ಕೂಲ್‍ನಲ್ಲಿ ಮತದಾನ ಮಾಡಿದ ಅವರು ಕೈ ಬೆರ ಳಿಗೆ ಶಾಯಿ ಹಾಕಿಸಿಕೊಂಡು ಮೊದಲ ಬಾರಿ ಮತದಾನ ಮಾಡಿದ ಖುಷಿ ಅವರಲ್ಲಿತ್ತು. ಈ ಇಬ್ಬರೂ ಅವಳಿ ಸಹೋದರಿಯರು ಹಿನಕಲ್‍ನ ಹೋಟೆಲ್ ವ್ಯಾಪಾರಿ ಕುಶಾಲಪ್ಪ-ದಾಕ್ಷಾಯಿಣಿ ದಂಪತಿ ಪುತ್ರಿಯರು. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿನಿಯರು.
ಭೇರ್ಯ: ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹಣ್ಣಿನ ಸಸಿ, ಮಜ್ಜಿಗೆ ವಿತರಣೆ
April 19, 2019ವೈಯಕ್ತಿಕ ಸ್ವಚ್ಛತೆ ಜಾಗೃತಿಗಾಗಿ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಭೇರ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಚಿಕ್ಕಭೇರ್ಯ ಹಾಗೂ ಹೆಬ್ಸೂರು ಗ್ರಾಮದ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ದೋಷದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿದ್ದನ್ನು ಹೊರತುಪಡಿಸಿ ಉಳಿದಂತೆ ಭೇರ್ಯದಲ್ಲಿ ಶಾಂತಿಯುತ ಮತದಾನವಾಗಿದೆ. ಮತಕೇಂದ್ರಗಳ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ಮತಗಟ್ಟೆಗಳಲ್ಲಿ ವಿಶೇಷಚೇತನರು, ವಯೋವೃದ್ಧರನ್ನು ಗಾಲಿ ಕುರ್ಚಿಯಲ್ಲಿ ಸ್ಥಳೀಯ ಗ್ರಾ.ಪಂ. ಸಿಬ್ಬಂದಿ ಮತಗಟ್ಟೆ ಕರೆತಂದು ಮತದಾನ ಮಾಡಿಸಿದರು. ಕೆಲವು ಮತಗಟ್ಟೆಗಳಿಗೆ ಭೇಟಿ…
ಹುಣಸೂರಲ್ಲಿ ಶೇ.77.45 ಮತದಾನ: ಕೆಲವೆಡೆ ಬಹಿಷ್ಕಾರದ ಬೆದರಿಕೆ, ಅಧಿಕಾರಿಗಳಿಂದ ಮನವೊಲಿಕೆ
April 19, 2019ಹುಣಸೂರು: ಮೈಸೂರು-ಕೊಡಗು ಲೋಕಾಸಭಾ ಕ್ಷೇತ್ರದಲ್ಲಿ ಗುರುವಾರ ಚುನಾವಣೆಗೆ ತಾಲೂಕಿನಲ್ಲಿ ಶೇ.77.45ರಷ್ಟು ಮತದಾನವಾಗಿದೆ. ಈ ಮಧ್ಯೆ, ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ತಿಪ್ಪಲಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ನಂತರ ಅಧಿಕಾರಿಗಳು ಮನವೊಲಿಸಿದ ಬಳಿಕ ಗ್ರಾಮಸ್ಥರು ಮತದಾನ ಮಾಡಿದರು. ಬಿಲ್ಲೇನಹೊಸಳ್ಳಿ ಜನರೂ ಗ್ರಾಮಕ್ಕೆ ರಸ್ತೆ, ಬೀದಿದೀಪ, ಕುಡಿಯುವ ನೀರು ನೀಡುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ 3 ಗಂಟೆಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ ಭರವಸೆ ನೀಡಿದ ನಂತರ 3.30ರ ಬಳಿಕ…
ಇಂದು ಮತದಾನ
April 18, 2019ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರ ದಲ್ಲಿ ನಾಳೆ(ಏ.18) ಮೊದಲ ಹಂತದ ಚುನಾ ವಣೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಐದು ಜಿಲ್ಲೆಗಳ ಜಿಲ್ಲಾಡಳಿತ ಮತದಾನಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಮತ ದಾರರಿಗೆ ಮತಗಟ್ಟೆಗಳಲ್ಲಿ ಸಕಲ ಸೌಲಭ್ಯ ಒದ ಗಿಸಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‍ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ.ಹೆಚ್….
ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಘಟಾನುಘಟಿಗಳಿಗೆ ಅಗ್ನಿ ಪರೀಕ್ಷೆ
April 18, 2019ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಸೇರಿದಂತೆ ಕೆಲವು ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ನಾಳೆ ಮತದಾರರು ನಿರ್ಧರಿಸಲಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಈ ಘಟಾನುಘಟಿಗಳಲ್ಲದೆ, ಹಿರಿಯ ಸಂಸದ ಕೆ.ಹೆಚ್. ಮುನಿಯಪ್ಪ, ಬಸವರಾಜ್, ಸಚಿವ ಕೃಷ್ಣಬೈರೇಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಮಾಜಿ ಕೇಂದ್ರ ಸಚಿವ ವಿ….
ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಮಳೆ
April 18, 2019ಬೆಂಗಳೂರು, ಏ.17- ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮೂರು ದಿನಗಳು ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ನಾಳೆ ನಡೆಯುವ ಮೊದಲ ಹಂತದ ಲೋಕಸಭಾ ಚುನಾ ವಣಾ ಮತದಾನದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಮಿಳುನಾಡು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಇಂದು ಸಂಜೆ ಭಾರೀ ಮಳೆ ಸುರಿದಿದ್ದು, ರಾಜ್ಯದ ನಾನಾ ಜಿಲ್ಲೆಗಳಲ್ಲಿಯೂ…
ಬೆಳ್ಳಿ ರಥದಲ್ಲಿ ಭಗವಾನ್ ಮಹಾವೀರರ ಮೂರ್ತಿ ಉತ್ಸವ
April 18, 2019ಮೈಸೂರು: ಜೈನರ ಆರಾಧ್ಯ ದೈವ, ಅಹಿಂಸಾ ಪ್ರತಿಪಾದಕ, 24ನೇ ತೀರ್ಥಂಕರ ಭಗವಾನ್ ಮಹಾ ವೀರನ ಜಯಂತಿ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಬುಧವಾರ ಭಗವಾನ್ ಮಹಾವೀರ ಮೂರ್ತಿಯ ಅದ್ಧೂರಿ ಉತ್ಸವ ನಡೆಯಿತು. ದಿಗಂಬರ ಜೈನ ಸಮಾಜದ ನೇತೃತ್ವದಲ್ಲಿ ಮಹಾವೀರ ಮಂಡಳಿ, ಸಮೀಕ್ಷಾ ಮಿಲನ್, ಮಹಾವೀರ ಸೇವಾ ಸಂಘ ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ಉತ್ಸವ ನಡೆಯಿತು. ಮೈಸೂ ರಿನ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್. ಜೈನ್ ಬೋರ್ಡಿಂಗ್ ಹೋಂನಿಂದ ಹೊರಟ ಉತ್ಸವದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಭಗ ವಾನ್ ಮಹಾವೀರನ…










