ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೂರಾರು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹಲವು ವರ್ಷ ಗಳಿಂದ ಮತದಾನ ಮಾಡಿರುವ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಮತದಾರರ ಹಕ್ಕು. ಈ ಹಕ್ಕು ಚಲಾವಣೆ ಮಾಡಿ ಪ್ರಜಾಪ್ರಭುತ್ವದಲ್ಲಿ ನಮಗೆ ಇಷ್ಟವಾದ ವ್ಯಕ್ತಿ ಯನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬರ ಕರ್ತ ವ್ಯವೂ ಹೌದು. ಕಳೆದ ಮಹಾನಗರಪಾಲಿಕೆ ಚುನಾ ವಣೆ, ವಿಧಾನ…
ಮೈಸೂರು ಎನ್‍ಆರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಶೇ.60.83 ಮತದಾನ
April 19, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆ ಸಂಬಂಧ ಎನ್‍ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಶೇ.60.83ರಷ್ಟು ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಗಾಂಧಿನಗರ, ಉದಯಗಿರಿ, ಕ್ಯಾತ ಮಾರನಹಳ್ಳಿ, ಗೌಸಿಯಾನಗರ, ಶಕ್ತಿನಗರ ಸೇರಿದಂತೆ ಕ್ಷೇತ್ರದ ವಿವಿಧೆಡೆಯಲ್ಲಿ ಒಟ್ಟು 282 ಮತಗಟ್ಟೆಗಳಲ್ಲಿ ಕ್ಷೇತ್ರದ ಮತ ದಾರರು ಮತ ಚಲಾಯಿಸಿದರು. ಬೆಳಿಗ್ಗೆ 9 ಗಂಟೆ ವೇಳೆ ಶೇ.4.48 ಮತ ಚಲಾವಣೆ ಆಗುವ ಮೂಲಕ ನಿಧಾನಗತಿಯಲ್ಲಿದ್ದ ಮತದಾನ, ಬೆಳಿಗ್ಗೆ 11ರ ವೇಳೆಗೆ ಶೇ.10.17ರಷ್ಟು ಹೆಚ್ಚಳ ಗೊಂಡಿತು. ಆ ಬಳಿಕ ಮತದಾನದ ಬಿರುಸು ಗೊಂಡಿದ್ದು, ಮಧ್ಯಾಹ್ನ…
ಕೆ.ಆರ್.ಕ್ಷೇತ್ರದಲ್ಲಿ ಆರಂಭದಲ್ಲಿ ಉತ್ಸಾಹ ಬಿಸಿಲೇರುತ್ತಿದ್ದಂತೆ ನಿರುತ್ಸಾಹ
April 19, 2019ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ಚುರುಕಾಗಿ ಆರಂಭವಾದ ಮತ ದಾನ ಮಧ್ಯಾಹ್ನದ ವೇಳೆಗೆ ಇಳಿಮುಖ ವಾಯಿತು. ಆದರೆ ಮತ್ತೆ ಸಂಜೆ ಬಿರುಸಾಗಿ ಸಾಗಿತು. ಕ್ಷೇತ್ರದ ಎಲ್ಲಾ 270 ಮತಗಟ್ಟೆಗಳಲ್ಲಿಯೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತ ಶೇ.60.36 ರಷ್ಟು ಮತದಾನ ನಡೆಯಿತು. ಕೆ.ಆರ್.ಕ್ಷೇತ್ರದಲ್ಲಿ 1,20,146 ಪುರು ಷರು, 1,23,568 ಮಹಿಳೆಯರು ಹಾಗೂ 22 ತೃತೀಯ ಲಿಂಗಿಗಳು ಸೇರಿ ಒಟ್ಟು 2,43, 736 ಮತದಾರರಿದ್ದು, ಇಂದು ಬೆಳಿಗ್ಗೆ ಎಲ್ಲ ಮತಗಟ್ಟೆಗಳಲ್ಲಿಯೂ ನಿಗದಿತ ಸಮಯದಲ್ಲಿ ಮತದಾನ ಆರಂಭವಾಯಿತು. ಆರಂಭದಲ್ಲಿ ಮತ…
ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ಶಾಸಕ ನಾಗೇಂದ್ರ ಅಸಮಾಧಾನ
April 19, 2019ಮೈಸೂರು: ಮತದಾನ ಗುರುತಿನ ಚೀಟಿ ಇದ್ದರೂ ಸಾಕಷ್ಟು ಮತದಾರರನ್ನು ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಇದಕ್ಕೆ ಚುನಾವಣಾ ಅಧಿಕಾರಿಗಳ ಲೋಪವೇ ಕಾರಣ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸಾಕಷ್ಟು ಮತದಾರರು ಈ ಸಂಬಂಧ ನನಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ವಿದೇಶದಿಂದ ನನ್ನ ಸ್ನೇಹಿತರು ಮತದಾನ ಮಾಡಲು ಬಂದಿದ್ದರು. ಅವರ ಹೆಸರನ್ನು…
ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ
April 19, 2019ಮೈಸೂರು: ಕಡ್ಡಾಯ ಮತದಾನ ಮಾಡುವ ಕುರಿತು ಯುವಕರು ಸ್ಕೇಟಿಂಗ್ ಮೂಲಕ ಮೈಸೂರಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. ಮತದಾನ ಜಾಗೃತಿ ಕುರಿತ ಟೀ ಶರ್ಟ್ ಹಾಗೂ ಸ್ಕೇಟಿಂಗ್ ತೊಟ್ಟ ಯುವಕರು, ಸಿದ್ದಾರ್ಥ ಬಡಾವಣೆ, ನಜರ್‍ಬಾದ್, ಪುರಭವನ, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಸ್ಕೂಲ್, ಜಿಲ್ಲಾಧಿಕಾರಿ ಕಚೇರಿ, ಶಿವರಾಂಪೇಟೆ, ಡೈರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಕೇಟಿಂಗ್ ನಡೆಸಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮತದಾನ ನಮ್ಮ ಹಕ್ಕು. ಹಾಗಾಗಿ ನಮ್ಮ ತಂಡದಿಂದ ಪ್ರತಿಯೊಬ್ಬರೂ ತಪ್ಪದೇ ಮತ ದಾನ…
ಕೊಡಗಿನ ಹಿರಿಯ ದಂಪತಿ ಉತ್ಸಾಹ
April 19, 2019ಮೈಸೂರು: ಸುಡು ಬಿಸಿಲನ್ನು ಲೆಕ್ಕಿಸದೆ 86ರ ಪ್ರಾಯದ ಕೊಡಗಿನ ದಂಪತಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದರು. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿರ್ಮಲಾ ಶಾಲೆಯ ಮತಗಟ್ಟೆ ಸಂಖ್ಯೆ-84ಕ್ಕೆ ಆಗಮಿಸಿದ ಕೊಡಗು ಮೂಲದ ವಿವಿ ಮೊಹಲ್ಲಾ ನಿವಾಸಿಗಳಾದ ಎಂ.ಎಂ. ನಂಜಪ್ಪ (86) ಹಾಗೂ ಇವರ ಪತ್ನಿ ಚಿಮ್ಮಿ ನಂಜಪ್ಪ (81) ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಾಥ್ ನೀಡಿದರು. ಇದೇ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ನಾವೇ ಮತ ಹಾಕದಿದ್ದರೇ ಮತ್ಯಾರು ಮತ ನೀಡುತ್ತಾರೆ….
ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸಾ ಭಾಗ್ಯ
April 19, 2019ಮೈಸೂರು: ಮತದಾನ ಪ್ರಮಾಣ ಹೆಚ್ಚಳ ಮಾಡುವ ಜಿಲ್ಲಾಡಳಿ ತದ ಪ್ರಯತ್ನಕ್ಕೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದ್ದವು. ಅನಿ ಫೌಂಡೇಷನ್ `ಓಟ್ ಫಾರ್ ಬೆಟರ್ ಇಂಡಿಯಾ’ ಶೀರ್ಷಿಕೆಯಡಿ ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸೆ ನೀಡುವ ಮೂಲಕ ಮತದಾನ ಜಾಗೃತಿಗೆ ಕೈ ಜೋಡಿಸಿತು. ಮತದಾನದ ಪ್ರಮಾಣ ಹೆಚ್ಚಿಸಲು ಉಚಿತ ದಂತ ಚಿಕಿತ್ಸೆ ಅಭಿಯಾನ ನಡೆಸುತ್ತಿದ್ದು, ಈಗಾಗಲೇ 85 ಮಂದಿ ಹೆಸರನ್ನು ನೋಂದಾಯಿಸಿದ್ದಾರೆ. ಅದರಲ್ಲಿ 35 ಮಂದಿಗೆ ಉಚಿತ ದಂತ ಚಿಕಿತ್ಸೆ ನೀಡಲಾಗಿದ್ದು, ಇನ್ನೂ 50 ಮಂದಿಗೆ ದಂತ…
ಮತಯಂತ್ರವಿದ್ದ ಬಸ್‍ನಲ್ಲಿ ಬೆಂಕಿ
April 19, 2019ಚಾಲಕನ ಜಾಗೃತಿ: ತಪ್ಪಿದ ಅನಾಹುತ ಮೈಸೂರು: ಇವಿಎಂ ಮತಯಂತ್ರಗಳನ್ನು ತರುತ್ತಿದ್ದ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಗೌರಿಶಂಕರ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಮಂಗಳವಾರ ಸಂಜೆ ಮಹಾರಾಣಿ ಕಾಲೇಜಿಗೆ ತರುತ್ತಿದ್ದಾಗ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ವೈಯರ್‍ಗಳನ್ನು ಕತ್ತರಿಸಿ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಬೇರೊಂದು ಬಸ್‍ನ್ನು ತರಿಸಿ ಮತಯಂತ್ರಗಳನ್ನು ಸಾಗಿಸಿದರು.
ಸಚಿವ ಸತೀಶ್ ಜಾರಕಿ ಹೊಳಿ ಹೇಳಿಕೆಗೆ ಬ್ರಾಹ್ಮಣರ ಖಂಡನೆ
April 19, 2019ಮೈಸೂರು: ದೇಶದ ಸೇನೆಯಲ್ಲಿ ಬ್ರಾಹ್ಮಣ ಸಮುದಾಯ ಸೇವೆ ಸಲ್ಲಿಸಿ ಜೀವ ಬಿಟ್ಟ ಇತಿಹಾಸವಿಲ್ಲ ಎಂದು ಸಚಿವ ಸತೀಶ್ ಜಾರಕಿ ಹೊಳಿ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ವೇಳೆ ಬ್ರಾಹ್ಮಣರ ನಿಂದನೆ ಹೇಳಿಕೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎಸ್.ವೆಂಕಟನಾರಾಯಣ, ಸ್ವಾತಂತ್ರ್ಯ ಸಂಗ್ರಾಮ ಮತ್ತು ಸೇನೆಯಲ್ಲಿ ಬ್ರಾಹ್ಮಣರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದು ದೇಶದ ಇತಿಹಾಸದ ತಿಳುವಳಿಕೆ ಇದ್ದವರಿಗೆ ಅರಿವಾಗುತ್ತದೆ. ಆದರೆ ಸಚಿವರು ಇತಿಹಾಸದ ಅರಿವಿಲ್ಲದೆ ಚುನಾವಣೆ ವೇಳೆ…
ಗೆಲುವು ನಿಶ್ಚಿತ: ವಿಜಯಶಂಕರ್
April 19, 2019ಮೈಸೂರು: ಇಡೀ ಕ್ಷೇತ್ರದಲ್ಲಿ ಎಲ್ಲಿಯೂ ಇವರಿಗೆ ಮತ ಏಕೆ ಹಾಕಬೇ ಕೆಂಬ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿಲ್ಲ. ಹೀಗಾಗಿ ಖಂಡಿತ ಮತ್ತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನತೆ ಆಶೀರ್ವದಿಸುವ ವಿಶ್ವಾಸವಿದೆ ಎಂದು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುರುವಾರ ರಾತ್ರಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸಮಸ್ತ ಸಮಾಜಗಳು ನನಗೆ ಮತದಾನ ಮಾಡುವ ಮೂಲಕ ಬೆಂಬಲ ನೀಡಿರುವ ವಿಶ್ವಾಸ ನನಗಿದೆ. ಕಾಂಗ್ರೆಸ್ ಪರವಾಗಿರುವ ಅಗೋಚರ ಮತದಾರರು ನನ್ನ ಗೆಲುವಿಗೆ…










