ಮೈಸೂರು: ಮೈಸೂರು ಶಿವರಾಂಪೇಟೆಯ ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಆಯೋಜಿಸಿರುವ `ಸಂಗೀತೋತ್ಸವದಲ್ಲಿ ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರಿಂದ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನತಣಿಸಿತು. ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹ ಯೋಗದೊಂದಿಗೆ ಆಯೋಜಿಸಿರುವ ಸಂಗೀತೋತ್ಸವದ 6ನೇ ದಿನವಾದ ಶನಿ ವಾರ, ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನ ಸೂರೆಗೊಂಡಿತು. ಪಕ್ಕವಾದ್ಯದಲ್ಲಿ ಅನೂರು ಅನಂತ ಕೃಷ್ಣ ಶರ್ಮಾ…
ಭಾರತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆ ಇದೆ
April 21, 2019ಮೈಸೂರು: ಭಾರ ತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ವಿವಿಧ ಆಯಾಮಗಳಲ್ಲಿ ಕಲೆಯ ಮೂಲಕ ಮನುಷ್ಯ ತನ್ನ ಸಂಸ್ಕøತಿಯನ್ನು ವ್ಯಕ್ತ ಪಡಿಸುತ್ತಿದ್ದಾನೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾ ನಂದಜೀ ಹೇಳಿದರು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕಾವಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಅವರ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲೆಯ ಮೂಲಕ ಅನಂತವಾದುದನ್ನು ಪಡೆಯಲು ಸಾಧ್ಯ. ಶಿಲ್ಪಕಲೆಗಳು ಮನು ಷ್ಯನಷ್ಟೇ ಅಲ್ಲದೆ ಭಗವಂತನನ್ನು ಪ್ರತಿನಿ ಧಿಸುತ್ತವೆ. ಹೊಟ್ಟೆಯ ಚಿಂತೆಯನ್ನು ನೀಗಿಸಿಕೊಂಡ…
ಇಂದಿನಿಂದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದಿಂದ ಕ್ರೀಡಾ ಕೌಶಲ್ಯ
April 21, 2019ಮೈಸೂರು: ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ವತಿ ಯಿಂದ ಮೈಸೂರಿನ ಮೃಗಾಲಯದ ಎದುರು ಇರುವ ಹ್ಯಾಂಡಿಕ್ರಾಫ್ಟ್ಸ್ ಸೇಲ್ಸ್ ಎಂಪೋರಿಯಂನಲ್ಲಿ ಏ. 21 ರಿಂದ ಮೇ 5 ರವರೆಗೆ ಕ್ರೀಡಾ ಕೌಶಲ್ಯ, ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ಪ್ರದ ರ್ಶನವನ್ನು ಏರ್ಪಡಿಸಲಾಗಿದೆ. ಏ.21ರಂದು ಬೆಳಿಗ್ಗೆ 11 ಗಂಟೆಗೆ ಆರಂಭ ಗೊಳ್ಳುವ ಪ್ರದರ್ಶನವನ್ನು ಪೊಲೀಸ್ ಪ್ರಶಿಕ್ಷಣ ವಿದ್ಯಾಲಯ ಪ್ರಾಚಾರ್ಯ ಡಾ. ಧರಣೀದೇವಿ ಮಾಲಗತ್ತಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆದಿ-ಹೊನ್ನಾಯ ಕನಹಳ್ಳಿ ಮತ್ತು ಶ್ರೀ ಕಪ್ಪಡಿ ಶ್ರೀ ಕ್ಷೇತ್ರ, ಮಂಟೇಸ್ವಾಮಿ…
ಮುರಿದಿದ್ದ ರಂಗಾಯಣ ಗ್ಯಾರೇಜ್ ಬಾಗಿಲು ರಿಪೇರಿ ಕಾರ್ಯ ಆರಂಭ `ಮೈಸೂರು ಮಿತ್ರ’ ವರದಿ ಫಲಶೃತಿ
April 21, 2019ಮೈಸೂರು: ಕಾವಲುಗಾರನ ಮೇಲೆ ಬಿದ್ದು ಗಾಯವಾಗಲು ಕಾರಣವಾಗಿದ್ದ ಮೈಸೂರಿನ ರಂಗಾಯಣದ ವಾಹನ ನಿಲುಗಡೆ ಗ್ಯಾರೇಜಿನ ಬಾಗಿಲುಗಳನ್ನು ರಿಪೇರಿ ಮಾಡಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಗುರುವಾರ ಸಂಜೆ ಬಾಗಿಲು ಮುಚ್ಚಲು ಹೋದ ಕಾವಲುಗಾರ ಶೇಷ ಅವರ ಮೇಲೆ ಕಬ್ಬಿಣದ ಬಾಗಿಲು ಮುರಿದು ಬಿದ್ದ ಕಾರಣ ಆತನಿಗೆ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಶೇಷ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸುಮಾರು 15 ಅಡಿ ಎತ್ತರದ ಈ ಗ್ಯಾರೇಜಿನ ಭಾರವಾದ ಕಬ್ಬಿಣದ ಬಾಗಿಲುಗಳಿಗೆ ಕೇವಲ ಎರಡು ಕಡೆ ಮಾತ್ರ ಕೊಂಡಿಗಳನ್ನು ಹಾಕಿದ್ದರಿಂದ…
ಇಂದಿನಿಂದ ಮೃಗಾಲಯದಲ್ಲಿಬೇಸಿಗೆ ಶಿಬಿರ ಆರಂಭ
April 21, 2019ಮೈಸೂರು: ಮೈಸೂರಿನ ಮೃಗಾಲಯದಲ್ಲಿ ಈ ಸಾಲಿನ ಮಕ್ಕಳ ಬೇಸಿಗೆ ಶಿಬಿರ ನಾಳೆ(ಏ.21) ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ. ಮೃಗಾಲಯದ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಸಿ.ಎಸ್. ಯಾಲಕ್ಕಿ ಹಾಗೂ ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್. ಇಂದ್ರೇಶ್ ಪಾಲ್ಗೊಳ್ಳಲಿದ್ದಾರೆ. ಮೊದಲನೇ ತಂಡದ ಶಿಬಿರ ಏ.21ರಿಂದ 30ರವರೆಗೆ, 2ನೇ ತಂಡದ ಶಿಬಿರ ಮೇ 5ರಿಂದ 14ರವರೆಗೆ ನಡೆಯಲಿದೆ. ಪ್ರತೀ ದಿನ 9.30ರಿಂದ ಸಂಜೆ 4.30ರವರೆಗೆ ತರಗತಿ ನಡೆಯಲಿದ್ದು, ಒಂದೊಂದು ತಂಡದಲ್ಲಿ 65 ವಿದ್ಯಾರ್ಥಿಗಳು…
ಗೂಡ್ಸ್ ಆಟೋ ಪಲ್ಟಿ: ಚಾಲಕ ಸಾವು
April 21, 2019ಮೈಸೂರು: ಗೂಡ್ಸ್ ಆಟೋವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಮೈಸೂರಿನ ಕುಪ್ಪಲೂರು ಗೇಟ್ ಬಳಿ ರಿಂಗ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ಚೆಲುವೇಗೌಡ ಅವರ ಮಗ ಸ್ವಾಮಿ (35) ಸಾವನ್ನಪ್ಪಿದವರು. ಆಪೆ ಆಟೋ (ಕೆಎ 55, 7239)ದಲ್ಲಿ ಬಾಡಿಗೆ ಮನೆ ಸ್ಥಳಾಂತರಿಸುತ್ತಿದ್ಧ ಕುಟುಂಬವೊಂದರ ಮನೆ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಟೋ ಹೆಚ್.ಡಿ.ಕೋಟೆ ರಸ್ತೆ ಮತ್ತು ನಂಜನಗೂಡು ರಸ್ತೆ ನಡುವೆ ಕುಪ್ಪಲೂರು…
ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರದಿಂದ ಲಕ್ಷ ಮಂದಿ ಮತದಾರರ ಹೆಸರು ನಾಪತ್ತೆ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ
April 20, 2019ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರ ದಿಂದ ಒಂದು ಲಕ್ಷದವ ರೆಗೂ ಮತದಾರರ ಹೆಸರು ಅಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಆರೋಪ ಮಾಡಿದೆ. ರಾಜ್ಯದ 14 ಲೋಕ ಸಭಾ ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯ ಮರುದಿನವೇ ಈ ಅಪಸ್ವರ ಎತ್ತಿರುವ ಬಿಜೆಪಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗು ವುದಾಗಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸ್ಥಳೀಯ ಸಂಸ್ಥೆಗಳು ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿ ಹಾಕಿವೆ…
ಮೊದಲ ಹಂತ ಮುಕ್ತಾಯದ ನಂತರ ಎರಡನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ನಾಯಕರ ಪ್ರಚಾರ ಅಬ್ಬರ
April 20, 2019ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಇದಕ್ಕೂ ಮುನ್ನವೇ ಮತದಾರರನ್ನು ಓಲೈಸಿ ಕೊಳ್ಳಲು ಮೈತ್ರಿ ಪಕ್ಷ ಹಾಗೂ ಬಿಜೆಪಿ ನಾಯಕರು ಬಿಸಿಲು ನಾಡಿನತ್ತ ತೆರಳಿದ್ದಾರೆ. ಮೊದಲ ಹಂತದ ಚುನಾ ವಣೆ ಮುಗಿಯುತ್ತಿದ್ದಂತೆ ವಿಶ್ರಾಂತಿಗೂ ಅವಕಾಶ ನೀಡದೇ ತಮ್ಮ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ವಿಜಯಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಹಾವೇರಿ, ಧಾರ ವಾಡ ಚಿಕ್ಕೋಡಿ,…
ಮತಯಂತ್ರಗಳಿರುವ ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ
April 20, 2019ಮೈಸೂರು: ಮತಗಳು ದಾಖಲಾಗಿರುವ ಇವಿಎಂಗಳನ್ನು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂ ಗಳಲ್ಲಿರಿಸಿ, ಭದ್ರಪಡಿಸಲಾಗಿದೆ. ಗುರುವಾರ ನಡೆದ ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಳಕೆಯಾದ ಇವಿಎಂಗಳನ್ನು ರಾತ್ರಿಯೇ ಪೊಲೀಸ್ ಸರ್ಪ ಗಾವಲಿನಲ್ಲಿ ಟ್ರಕ್‍ಗಳಲ್ಲಿ ತಂದು ಇಲ್ಲಿ ಇರಿಸಲಾ ಗಿತ್ತು. ಸುರಕ್ಷತೆ ದೃಷ್ಟಿಯಿಂದ ಮಡಿಕೇರಿ ಮತ್ತು ವಿರಾಜ ಪೇಟೆ ವಿಧಾನಸಭಾ ಕ್ಷೇತ್ರಗಳ ಇವಿಎಂ ಗಳನ್ನು ಇಂದು ಬೆಳಿಗ್ಗೆ ಮೈಸೂರಿಗೆ ತಂದ ಸಹಾ ಯಕ ಚುನಾವಣಾಧಿಕಾರಿಗಳು, ಪೊಲೀಸ್ ಭದ್ರತೆ ಯೊಂದಿಗೆ ಇಲ್ಲಿನ…
ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು, ಕುಟುಂಬ ಸದಸ್ಯರು…
April 20, 2019ಮೈಸೂರು: ಈಗ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್, ಶುಕ್ರವಾರ ಬೆಳಿಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಹಾರ, ಬಂದವರಿಗೆ ಉಪಚಾರ, ಸಮಾ ಲೋಚನೆಯಲ್ಲಿ ಕಾಲ ಕಳೆದರು. ಸುಡು ಬಿಸಿಲಿನ ನಡುವೆಯೂ ಕಳೆದ 15 ದಿನ ಗಳಿಂದ ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಈ ಇಬ್ಬರು ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ವಿಶ್ರಾಂತಿಗೆ ಹೊರಳಿದರು. ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸದ ಕಾಲ ಕಳೆದರು. ಹಾಲಿ ಸಂಸದರೂ ಆದ…










