ಇಂದಿನಿಂದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದಿಂದ ಕ್ರೀಡಾ ಕೌಶಲ್ಯ
ಮೈಸೂರು

ಇಂದಿನಿಂದ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದಿಂದ ಕ್ರೀಡಾ ಕೌಶಲ್ಯ

April 21, 2019

ಮೈಸೂರು: ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ವತಿ ಯಿಂದ ಮೈಸೂರಿನ ಮೃಗಾಲಯದ ಎದುರು ಇರುವ ಹ್ಯಾಂಡಿಕ್ರಾಫ್ಟ್ಸ್ ಸೇಲ್ಸ್ ಎಂಪೋರಿಯಂನಲ್ಲಿ ಏ. 21 ರಿಂದ ಮೇ 5 ರವರೆಗೆ ಕ್ರೀಡಾ ಕೌಶಲ್ಯ, ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ಪ್ರದ ರ್ಶನವನ್ನು ಏರ್ಪಡಿಸಲಾಗಿದೆ.

ಏ.21ರಂದು ಬೆಳಿಗ್ಗೆ 11 ಗಂಟೆಗೆ ಆರಂಭ ಗೊಳ್ಳುವ ಪ್ರದರ್ಶನವನ್ನು ಪೊಲೀಸ್ ಪ್ರಶಿಕ್ಷಣ ವಿದ್ಯಾಲಯ ಪ್ರಾಚಾರ್ಯ ಡಾ. ಧರಣೀದೇವಿ ಮಾಲಗತ್ತಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆದಿ-ಹೊನ್ನಾಯ ಕನಹಳ್ಳಿ ಮತ್ತು ಶ್ರೀ ಕಪ್ಪಡಿ ಶ್ರೀ ಕ್ಷೇತ್ರ, ಮಂಟೇಸ್ವಾಮಿ ಮಠದ ಮಠಾಧಿಪತಿ ಗಳಾದ ಎಂ.ಎಲ್.ವರ್ಚಸ್ವಿನ್ ಎಸ್.ಎಸ್. ರಾಜೇಅರಸ್ ಭಾಗವಹಿಸುವರು. ಪ್ರದರ್ಶ ನವು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಗೆ ಇರುತ್ತದೆ. ಪ್ರವೇಶ ಉಚಿತ.

ಪ್ರತಿಷ್ಠಾನದ ಮುಖ್ಯಗುರಿ ಕಾಲಗರ್ಭ ದಲ್ಲಿ ಅಡಗಿಹೋಗಿರುವ ಕರ್ನಾಟಕದ/ಭಾರತೀಯ ಜನಪದ ಆಟಗಳಿಗೆ ಮರು ಹುಟ್ಟು ನೀಡುವುದು, ಅದಕ್ಕೆ ಪೂರಕವಾಗಿ ಕರಕುಶಲಕಲೆ. ಈ ಪ್ರದರ್ಶನದಲ್ಲಿ ಜನ ಪದ ಆಟಗಳು ಕಲೆಯನ್ನು ಪರಿಚಯಿಸಿ ದರೆ, ಕಲೆಗಳು ಆಟಗಳನ್ನು ಮನಮುಟ್ಟು ವಂತೆ ಅನಾವರಣಗೊಳಿಸುತ್ತವೆ, ಪ್ರದ ರ್ಶನಕ್ಕೆ ವೈವಿಧ್ಯತೆಯನ್ನು ವರ್ಣಶೋಭೆ ಯನ್ನು ನೀಡುತ್ತವೆ. ಸದಭಿರುಚಿಯ ಸಂಯೋ ಜನೆ, ಇದೊಂದು ವಿಶಿಷ್ಟ ಪ್ರಯೋಗ.

ಪೂರ್ವದಲ್ಲಿ ಕಲಾವಿದರು ಆಟದ ಮಣೆಗಳು ಮತ್ತು ಅದಕ್ಕೆ ಒಪ್ಪುವ ಕಾಯಿ, ದಾಳ ಮೊದಲಾದುವನ್ನು ಮರ ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಸುಂದರ ವಾಗಿ ತಯಾರಿಸುತ್ತಿದ್ದರು. ಅವು ಬರಿಯ ಆಟದ ಸಾಮಗ್ರಿಗಳಲ್ಲ, ಬಣ್ಣಬಣ್ಣದ ಸುಂದರ ಕಲಾಕೃತಿಗಳು ಕೂಡ. ಕರಕುಶಲ ಕಲಾ ವಿದರಿಂದ ತಯಾರಾಗುತ್ತಿದ್ದ ಅಂತಹ ಆಟದ ಮಣೆಗಳು, ಕಾಯಿಗಳು ಮತ್ತು ದಾಳಗಳು ಇಂದು ಬಹುಪಾಲು ಕಣ್ಮರೆಯಾಗಿವೆ. ಅದಕ್ಕೆ ಕಾರಣ, ಇಂದು ದೊಡ್ಡ ಪ್ರಮಾಣ ದಲ್ಲಿ ತಯಾರಾಗುವ ಪ್ಲಾಸ್ಟಿಕ್ ಆಟಿಕೆಗಳು, ‘ವೀಡಿಯೋಗೇಮ್ಸ್’, ಮೊದಲಾದವು.

ನಮ್ಮ ಕ್ರೀಡಾ ಸಂಸ್ಕøತಿಯ ಶ್ರೀಮಂ ತಿಕೆಯನ್ನು ಪ್ರತಿಬಿಂಬಿಸುವ, ಪರಿಚಯಿ ಸುವ ಈ ಪ್ರದರ್ಶನದಲ್ಲಿ ಭಾರತದ ವಿವಿಧ ರಾಜ್ಯಗಳ ಕರಕುಶಲ ಕಲಾವಿದರು ವಿವಿಧ ಮಾಧ್ಯಮಗಳಲ್ಲಿ ನಿರ್ಮಿಸಿರುವ ಆಟದ ಹಾಸುಗಳು, ಮಣೆಗಳು, ಕಾಯಿಗಳು ಮತ್ತು ದಾಳಗಳು ಇವೆ. ಈ ವರ್ಷದ ಪ್ರದರ್ಶ ನದಲ್ಲಿ ಕರ್ನಾಟಕದ ಕರಕುಶಲ ಕಲೆಗಾರರು ವಿವಿಧ ಮಾಧ್ಯಮಗಳಲ್ಲಿ ಸೃಷ್ಟಿಸಿರುವ ಹಾಸಂಗಿ ಮತ್ತು ಮಣೆಗಳಿಗೆ ಆದ್ಯತೆ ನೀಡ ಲಾಗಿದೆ. ಪ್ರತಿಷ್ಠಾನ ನೀಡಿದ ವಿನ್ಯಾಸಕ್ಕೆ ತಮ್ಮ ಕರಕೌಶಲ್ಯವನ್ನು ಧಾರೆಯೆರೆದು ಅಪೂರ್ವವಾದ ಕಲಾಸೃಷ್ಟಿ ಮಾಡಿದ್ದಾರೆ.

ಕೇವಲ ಆಟದ ಮಣೆ, ಕಾಯಿ, ದಾಳ ಗಳ ಮೇಳವಲ್ಲ, ಇದು ಒಂದು ಅಪೂರ್ವ ಕಲಾ ಪ್ರದರ್ಶನವೂ ಹೌದು. ಬದುಕಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸೃಜನಶೀಲ ಮೌಲಿಕ ಚಿತ್ರಗಳನ್ನು ರಚಿಸಿ ದ್ದಾರೆ. ಕರ್ನಾಟಕದ ಕಲಾವಿದರಾದ ರಘು ಪತಿ ಭಟ್, ಜಿ.ಎಲ್.ಎನ್.ಸಿಂಹ, ಮಂಜು ನಾಥ ಮಾನೆ, ಶ್ರೀಹರಿ, ಮುಂತಾದವರು. ಜೈಪುರದ ಪ್ರಾಚೀನ ಚಿಕಣೀ ಚಿತ್ರಗಳು, ಕೇರಳದ ಭಿತ್ತಿಚಿತ್ರ ಶೈಲಿಯ ಚಿತ್ರಗಳು, ಮೈಸೂರು ಶೈಲಿಯ ಪೌರಾಣಿಕ ಚಿತ್ರಗಳು ಪ್ರದರ್ಶನಕ್ಕೆ ಶ್ರೀಮಂತಿಕೆಯ ಶೋಭೆ ತಂದಿವೆ.
ವೈವಿಧ್ಯಮಯ ಚದುರಂಗದಾಟಗಳ ಸೃಷ್ಟಿಕರ್ತರೆನಿಸಿರುವ ದಿವಂಗತ ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಣೀವಾಸದಲ್ಲಿ ಹಾಸು ಆಟವನ್ನು ಆಡುತ್ತಿರುವ 2 ಚಿತ್ರಗಳು ವಿವಿಧ ಕಲಾ ಮಾಧ್ಯಮದಲ್ಲಿ ರೂಪುಗೊಂಡಿವೆ. ಕೆ.ಎಸ್.ಶ್ರೀಹರಿ, ಮೈಸೂರು ಸಾಂಪ್ರದಾ ಯಿಕ ಚಿತ್ರಶೈಲಿಯಲ್ಲಿ ಈ ಸನ್ನಿವೇಶವನ್ನು ರಚಿಸಿದ್ದರೆ ಅದಕ್ಕೆ ಸರಿಸಾಟಿಯಾಗಿ ಹುದುಗುಕಲೆಯ ಅದ್ಭುತ ಕಲಾವಿದ ಆರ್. ಪುಟ್ಟರಾಜು ವಿವಿಧ ವರ್ಣಗಳ ಮರಗಳ ಜೋಡಣೆ ಮಾಡಿ ವಿಶಿಷ್ಟವಾದ ಮರದ ಉಬ್ಬು ಕಲಾ ಕೃತಿಯನ್ನು ನಿರ್ಮಿಸಿದ್ದಾರೆ. ಇದರಲ್ಲಿ ಮುಮ್ಮಡಿಯವರು ತಮ್ಮ ಮಡದಿ ಯೊಡನೆ ತಮ್ಮದೇ ಸೃಷ್ಟಿಯಾದ ನವಗ್ರಹ ಪಗಡೆಯಾಟ ಆಡುವುದರಲ್ಲಿ ತಲ್ಲೀನರಾಗಿ ದ್ದಾರೆ. ಹಿಂದೆ ಚಾಮುಂಡಿ ಬೆಟ್ಟ ಹಾಗೂ ನೀರು ತುಂಬಿ ನಳನಳಿಸುತ್ತಿರುವ ದೇವರಾಯ ಸಾಗರ (ಈಗಿನ ದೊಡ್ಡಕೆರೆ) ಕಾಣುತ್ತದೆ. ಹೀಗೆ ವಿವಿಧ ಶೈಲಿಯಲ್ಲಿ, ಮಾಧ್ಯಮಗಳಲ್ಲಿ ಕಲಾ ಕೃತಿಗಳ ನಿರ್ಮಾಣದ ಸಾಧ್ಯತೆ, ವೈವಿ ಧ್ಯತೆಗೆ ಈ ಪ್ರದರ್ಶನ ಒಂದು ನಿದರ್ಶನ.

2019ರ ಕ್ರೀಡಾಕೌಶಲ್ಯದ ವೈಶಿಷ್ಟ್ಯ ಇಷ್ಟಕ್ಕೇ ಸೀಮಿತವಾಗಿಲ್ಲ. ಪಗಡೆ, ಅಳುಗುಳಿಮಣೆ, ಆಡುಹುಲಿ ಕಟ್ಟಾಟ ಮೊದಲಾದ ಪ್ರಾಚೀನ ಆಟಗಳನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವ ಸಲುವಾಗಿ ವಿಶಾಲವಾದ ಪ್ರದರ್ಶನಶಾಲೆಯಲ್ಲಿ ಒಂದು ಭಾಗ ಆಟದ ಅಂಕಣಕ್ಕೆ ವಿಶೇಷವಾಗಿ ಮೀಸ ಲಾಗಿದೆ. ಆಟಗಳ ವಿಧಾನಗಳನ್ನು ಹೇಳಿ ಕೊಡಲು ಮಾರ್ಗದರ್ಶಕರಿದ್ದಾರೆ.

ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಪಾರಂ ಪರಿಕ ಆಟಗಳ ಬಗೆಗೆ ಹಾಗೂ ಅವುಗಳ ಪ್ರಾದೇಶಿಕ ವೈವಿಧ್ಯತೆಗಳ ಬಗೆಗೆ ದಾಖ ಲೀಕರಣದಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡಿದೆ. ಈ ದಾಖಲೆಗಳನ್ನು ಒಳಗೊಂಡ ಒಂದು ಕಿರುಹೊತ್ತಿಗೆ ಲಭ್ಯ ವಿದ್ದು ಬಹುಮಾಧ್ಯಮದ ವೀಡಿಯೋ ಪ್ರದರ್ಶನವೂ ನಿರಂತರವಾಗಿ ನೋಡಲು ಲಭ್ಯ. ಇದು ನಮ್ಮ ಪ್ರಾಚೀನ ಕ್ರೀಡಾ ಸಂಸ್ಕøತಿಯ ವೈಭವವನ್ನು, ನಮ್ಮ ರಾಷ್ಟ್ರದ ಕರಕುಶಲ ಕೌಶಲ್ಯವನ್ನು, ವೈವಿಧ್ಯತೆಯನ್ನು ಮನ ವರಿಕೆ ಮಾಡಿಕೊಳ್ಳಲು ನೆರವಾಗುವ ಒಂದು ಕಲಾತ್ಮಕ ಪ್ರದರ್ಶನ.

Translate »