ಮುರಿದಿದ್ದ ರಂಗಾಯಣ ಗ್ಯಾರೇಜ್ ಬಾಗಿಲು ರಿಪೇರಿ ಕಾರ್ಯ ಆರಂಭ `ಮೈಸೂರು ಮಿತ್ರ’ ವರದಿ ಫಲಶೃತಿ
ಮೈಸೂರು

ಮುರಿದಿದ್ದ ರಂಗಾಯಣ ಗ್ಯಾರೇಜ್ ಬಾಗಿಲು ರಿಪೇರಿ ಕಾರ್ಯ ಆರಂಭ `ಮೈಸೂರು ಮಿತ್ರ’ ವರದಿ ಫಲಶೃತಿ

April 21, 2019

ಮೈಸೂರು: ಕಾವಲುಗಾರನ ಮೇಲೆ ಬಿದ್ದು ಗಾಯವಾಗಲು ಕಾರಣವಾಗಿದ್ದ ಮೈಸೂರಿನ ರಂಗಾಯಣದ ವಾಹನ ನಿಲುಗಡೆ ಗ್ಯಾರೇಜಿನ ಬಾಗಿಲುಗಳನ್ನು ರಿಪೇರಿ ಮಾಡಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ.

ಗುರುವಾರ ಸಂಜೆ ಬಾಗಿಲು ಮುಚ್ಚಲು ಹೋದ ಕಾವಲುಗಾರ ಶೇಷ ಅವರ ಮೇಲೆ ಕಬ್ಬಿಣದ ಬಾಗಿಲು ಮುರಿದು ಬಿದ್ದ ಕಾರಣ ಆತನಿಗೆ ಗಾಯವಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಶೇಷ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಸುಮಾರು 15 ಅಡಿ ಎತ್ತರದ ಈ ಗ್ಯಾರೇಜಿನ ಭಾರವಾದ ಕಬ್ಬಿಣದ ಬಾಗಿಲುಗಳಿಗೆ ಕೇವಲ ಎರಡು ಕಡೆ ಮಾತ್ರ ಕೊಂಡಿಗಳನ್ನು ಹಾಕಿದ್ದರಿಂದ ಮೇಲಿನ ಕೊಂಡಿ ಕಿತ್ತು ಕಾವಲುಗಾರನ ಮೇಲೆ ಬಿದ್ದಿತ್ತು. ಅದಕ್ಕೆ ಹೊಂದಿಕೊಂಡಂತಿದ್ದ ಕ್ಯಾಂಟಿನ್ ಕಾಂಪೌಂಡ್ ಗೋಡೆ ಸಹ ಬಿರುಕು ಬಿಟ್ಟು ಬೀಳುವ ಹಂತದಲ್ಲಿತ್ತು.

ಈ ಬಗ್ಗೆ `ಮೈಸೂರು ಮಿತ್ರ’ ಶುಕ್ರವಾರ ಅಪಾಯದ ಅಂಚಿನಲ್ಲಿದ್ಧ ಗೋಡೆಯ ಚಿತ್ರ ಸಮೇತ ಘಟನೆಯನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ರಂಗಾಯಣ ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಿ ಬಿರುಕು ಬಿಟ್ಟಿದ್ದ ಗೋಡೆಯನ್ನು ತೆರವುಗೊಳಿಸಿರುವುದಲ್ಲದೆ, ಮುರಿದು ಬಿದ್ದಿರುವ ಗ್ಯಾರೇಜಿನ ಬಾಗಿಲುಗಳನ್ನು ರಿಪೇರಿ ಮಾಡಿಸುವ ಕೆಲಸವನ್ನು ಆರಂಭಿಸಿದ್ದಾರೆ.

Translate »