ಭಾರತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆ ಇದೆ
ಮೈಸೂರು

ಭಾರತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆ ಇದೆ

April 21, 2019

ಮೈಸೂರು: ಭಾರ ತೀಯ ಪರಂಪರೆಯಲ್ಲಿ ಕಲೆಗೆ ವಿಶಿಷ್ಟ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ವಿವಿಧ ಆಯಾಮಗಳಲ್ಲಿ ಕಲೆಯ ಮೂಲಕ ಮನುಷ್ಯ ತನ್ನ ಸಂಸ್ಕøತಿಯನ್ನು ವ್ಯಕ್ತ ಪಡಿಸುತ್ತಿದ್ದಾನೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾ ನಂದಜೀ ಹೇಳಿದರು.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕಾವಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಅವರ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಯ ಮೂಲಕ ಅನಂತವಾದುದನ್ನು ಪಡೆಯಲು ಸಾಧ್ಯ. ಶಿಲ್ಪಕಲೆಗಳು ಮನು ಷ್ಯನಷ್ಟೇ ಅಲ್ಲದೆ ಭಗವಂತನನ್ನು ಪ್ರತಿನಿ ಧಿಸುತ್ತವೆ. ಹೊಟ್ಟೆಯ ಚಿಂತೆಯನ್ನು ನೀಗಿಸಿಕೊಂಡ ಬಳಿಕ ಮನುಷ್ಯ ಹೊಸ ಹೊಸ ವಿಚಾರಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಾನೆ ಎಂದರು.

ಕಲೆಯಿಂದ ಹೊಸ ಕಲ್ಪನೆಗಳು ಬೆಳೆ ಯುತ್ತವೆ. ಕಲೆಯು ಒಂದು ಮಾಧ್ಯಮ ವಾಗಿದ್ದು, ತನ್ನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ನೋಡುವವನ ದೃಷ್ಟಿಗೆ ತಕ್ಕಂತೆ ಕಲಾಕೃತಿಗಳು ಆಕಾರ ಪಡೆದು ಕೊಳ್ಳುತ್ತವೆ ಎಂದು ನುಡಿದರು.

ಕಲಾಕೃತಿಗಳ ಪ್ರದರ್ಶನ: ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಅವರ ಕೈಚಳಕ ದಲ್ಲಿ ಮೂಡಿಬಂದ ಬೋಧಿವೃಕ್ಷ, ಮಳೆ ಮೋಡ, ಸ್ವರ್ಗದಲ್ಲಿ ಚಿಂತಿಸುವ ವ್ಯಕ್ತಿ, ಜರ್ನಿ ಆಫ್ ಲೈಫ್ ಕುರಿತಂತೆ 28ಕ್ಕೂ ಹೆಚ್ಚು ಕಲಾಕೃತಿಗಳು ನೋಡುಗರ ಮನಸೆಳೆದವು.
ಬಾಂಬೆಯಲ್ಲಿರುವ ಜಹಾಂಗಿರ್ ಆರ್ಟ್ ಗ್ಯಾಲರಿಯಲ್ಲಿ ಏ.30ರಿಂದ ಮೇ 6ರವ ರೆಗೆ ನಡೆಯುವ ಪ್ರದರ್ಶನದ ಹಿನ್ನೆಲೆ ಯಲ್ಲಿ ಇಂದಿನಿಂದ ನಾಲ್ಕು ದಿನಗಳ ವರೆಗೆ ಕಾವಾ ಕಾಲೇಜಿನಲ್ಲಿ ಕಲಾಕೃತಿ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಎಲ್.ಎಸ್.ಎನ್.ಆಚಾರ್, ನಿವೃತ್ತ ಡೀನ್ ವಿ.ಎ.ದೇಶಪಾಂಡೆ, ನರರೋಗ ತಜ್ಞ ಡಾ.ಎಂ.ಎಸ್.ಬಾಸ್ಕರ್, ಪ್ರೊ. ವಿಜಯ ರಾವ್, ಭಾರತಿ ಅರ್ಕಸಾಲಿ, ಸಾಂಚಿ ಅರ್ಕಸಾಲಿ, ಕಿರಣ್ ಕುಮಾರ್, ಸಂಕೇತ್ ಮತ್ತಿತರರು ಉಪಸ್ಥಿತರಿದ್ದರು.

Translate »