ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಸಂಗೀತೋತ್ಸವ
ಮೈಸೂರು

ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಸಂಗೀತೋತ್ಸವ

April 21, 2019

ಮೈಸೂರು: ಮೈಸೂರು ಶಿವರಾಂಪೇಟೆಯ ಶ್ರೀಮತಿ ಆಲಮ್ಮನವರ ಛತ್ರದಲ್ಲಿ ಆಯೋಜಿಸಿರುವ `ಸಂಗೀತೋತ್ಸವದಲ್ಲಿ ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರಿಂದ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನತಣಿಸಿತು. ಶ್ರೀ ರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹ ಯೋಗದೊಂದಿಗೆ ಆಯೋಜಿಸಿರುವ ಸಂಗೀತೋತ್ಸವದ 6ನೇ ದಿನವಾದ ಶನಿ ವಾರ, ಸಂಗೀತ ವಿದ್ವಾನ್ ವೆಂಕಟರಾಮ್ ಮತ್ತು ಮಾ.ವಿಷ್ಣು ವೆಂಕಟರಾಮ್ ಅವರ ದ್ವಂದ್ವ ಪಿಟೀಲು ವಾದನ ಪ್ರೇಕ್ಷಕರ ಮನ ಸೂರೆಗೊಂಡಿತು. ಪಕ್ಕವಾದ್ಯದಲ್ಲಿ ಅನೂರು ಅನಂತ ಕೃಷ್ಣ ಶರ್ಮಾ (ಮೃದಂಗ), ಸುನಾದ್ (ಖಜೀರ) ಸಾಥ್ ನೀಡಿದರು. ಏ.21: ಸಂಗೀತ ವಿದ್ವಾನ್ ಅಶ್ವಥ ನಾರಾಯಣ ಅವರಿಂದ ಶಾಸ್ತ್ರೀಯ ಸಂಗೀತ.

ಏ.22: ಸಂಗೀತ ವಿದ್ವಾನ್ ಎನ್.ರವಿಕಿರಣ್ ಅವ ರಿಂದ ಚಿತ್ರ ವೀಣಾವಾದನ. ಏ.23: ಸಂಗೀತ ವಿದ್ವಾನ್ ಟಿ.ಎಂ.ಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ. ಏ.24: ಸಂಗೀತ ವಿದ್ವಾನ್ ವಿದ್ಯಾಭೂಷಣ ಮತ್ತು ವೃಂದದಿಂದ ಶಾಸ್ತ್ರೀಯ ಸಂಗೀತ ಮತ್ತು ದೇವರನಾಮ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 9.30ರವರೆಗೆ ನಡೆಯಲಿವೆ.

Translate »