ಗೂಡ್ಸ್ ಆಟೋ ಪಲ್ಟಿ: ಚಾಲಕ ಸಾವು
ಮೈಸೂರು

ಗೂಡ್ಸ್ ಆಟೋ ಪಲ್ಟಿ: ಚಾಲಕ ಸಾವು

April 21, 2019

ಮೈಸೂರು: ಗೂಡ್ಸ್ ಆಟೋವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಮೈಸೂರಿನ ಕುಪ್ಪಲೂರು ಗೇಟ್ ಬಳಿ ರಿಂಗ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ಚೆಲುವೇಗೌಡ ಅವರ ಮಗ ಸ್ವಾಮಿ (35) ಸಾವನ್ನಪ್ಪಿದವರು. ಆಪೆ ಆಟೋ (ಕೆಎ 55, 7239)ದಲ್ಲಿ ಬಾಡಿಗೆ ಮನೆ ಸ್ಥಳಾಂತರಿಸುತ್ತಿದ್ಧ ಕುಟುಂಬವೊಂದರ ಮನೆ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಟೋ ಹೆಚ್.ಡಿ.ಕೋಟೆ ರಸ್ತೆ ಮತ್ತು ನಂಜನಗೂಡು ರಸ್ತೆ ನಡುವೆ ಕುಪ್ಪಲೂರು ಗ್ರಾಮದ ಗೇಟ್ ಬಳಿ ರಿಂಗ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ 2.20 ಗಂಟೆ ವೇಳೆ ಪಲ್ಪಿಯಾಯಿತು. ಆಟೋ ಅಡಿ ಸಿಲುಕಿದ ಚಾಲಕ ಸ್ವಾಮಿ ಅವರ ತಲೆಗೆ ತೀವ್ರ ಗಾಯಗಳಾಗಿತ್ತು ಅವರನ್ನು ಸಾರ್ವಜನಿಕರು ಜೆಎಸ್‍ಎಸ್ ಆಸ್ಪತ್ರೆಗೆ ಕರೆತಂದರಾದರೂ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆಂದು ದೃಢಪಡಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಂಚಾರ ಠಾಣೆ ಪೊಲೀಸರು, ಮಹಜರು ನಡೆಸಿ ಆಪೆ ಆಟೋ ಅನ್ನು ವಶಕ್ಕೆ ಪಡೆದರು. ಇಂದು ಬೆಳಿಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ. ನಂತರ ಸ್ವಾಮಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

Translate »