ಮೈಸೂರು

ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ
ಮೈಸೂರು

ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ

April 20, 2019

ಮೈಸೂರು:  ಮೈಸೂರಿನ ರಂಗಾಯಣದ ಕಾರ್ ಗ್ಯಾರೇಜ್‍ನ ಕಬ್ಬಿಣದ ಗೇಟ್ ಮುರಿದು ಬಿದ್ದು ಕಾವಲುಗಾರ (ವಾಚ್‍ಮನ್)ನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ರಂಗಾಯಣದ ಹೊರಗುತ್ತಿಗೆ ಆಧಾರ ದಲ್ಲಿ ಕಾವಲುಗಾರನಾಗಿ ಕೆಲಸ ಮಾಡು ತ್ತಿದ್ದ ಶೇಷ ಎಂಬುವರೇ ಗಾಯಗೊಂಡವ ರಾಗಿದ್ದು, ಅವರನ್ನು ಮೈಸೂರಿನ ಸರಸ್ವತಿ ಪುರಂ 14ನೇ ಮೇನ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ದೇಶಕರ ಕಾರು ಹಾಗೂ ರಂಗಾಯಣದ ಮಿನಿ ಬಸ್ ಅನ್ನು ನಿಲ್ಲಿಸಲು ಸಂಸ್ಥೆ ಆವರಣದ ಕ್ಯಾಂಟಿನ್ ಪಕ್ಕದಲ್ಲಿ ಗ್ಯಾರೇಜ್ ನಿರ್ಮಿಸಿ ಸುಮಾರು 15 ಅಡಿ…

ಇಂದು ವಿಶೇಷ ‘ಸ್ವಾತಿ’ ಪೂಜೆ
ಮೈಸೂರು

ಇಂದು ವಿಶೇಷ ‘ಸ್ವಾತಿ’ ಪೂಜೆ

April 20, 2019

ಮೈಸೂರು: ಮೈಸೂರು ನಗರದ ಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯಲ್ಲಿ ರುವ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏ.20 ರಂದು ಶ್ರೀ ವಿಕಾರಿ ನಾಮ ಸಂವತ್ಸರ, ಕೃಷ್ಣ ಪಕ್ಷ, ವಸಂತ ಋತು, ಚೈತ್ರ ಮಾಸ, ಶನಿವಾರ ‘ಸ್ವಾತಿ’ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ಶ್ರೀಯವರ ಆದೇಶಾ ನುಸಾರ ಅಂದು ಬೆಳಿಗ್ಗೆ 7.30 ಗಂಟೆಗೆ ಮಹಾ ಸುದರ್ಶನ ಸಂಕಲ್ಪ ಹೋಮ, ವಿಶೇಷ ಅಭಿಷೇಕ ಸೇವೆ, ಬೆಳಿಗ್ಗೆ 12.30 ಗಂಟೆಗೆ ಶ್ರೀಯವರಿಗೆ ವಿಶೇಷ ಅಲಂಕಾರ ಸೇವೆ,…

ಇಂದು ರಾಜು ಅನಂತಸ್ವಾಮಿ ಗಾನಲಹರಿ
ಮೈಸೂರು

ಇಂದು ರಾಜು ಅನಂತಸ್ವಾಮಿ ಗಾನಲಹರಿ

April 20, 2019

ಮೈಸೂರು: ಖ್ಯಾತ ಸುಗಮ ಸಂಗೀತಗಾರ ರಾಜು ಅನಂತಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ನಾದಾಮೃತ ಸಂಗೀತ ವಿದ್ಯಾ ಲಯದ ವತಿಯಿಂದ ಏ.20ರ ಸಂಜೆ 5.30 ಗಂಟೆಗೆ ಮೈಸೂರಿನ ಆದಿ ಚುಂಚನಗಿರಿ ರಸ್ತೆ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಾದಾಮೃತ ಸಂಗೀತ ವಿದ್ಯಾ ಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ, ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಾನಭಾರತಿ…

ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ
ಮೈಸೂರು

ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ

April 20, 2019

ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317ಎ, 43ನೇ ವಾರ್ಷಿಕ ಜಿಲ್ಲಾ ಅಧಿವೇಶನ ಏ.21ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ವಿ.ರೇಣುಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿರುವ ಕಾರ್ಯ ಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸುವರು. ಸಂಸ್ಥೆಯ ಅಂತಾ ರಾಷ್ಟ್ರೀಯ ನಿರ್ದೇಶಕರಾದ ವಿ.ವಿ.ಕೃಷ್ಣಾರೆಡ್ಡಿ, ಕೆ.ವಂಶೀಧರ ಬಾಬು ಅತಿಥಿ ಯಾಗಿ…

ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ
ಮೈಸೂರು

ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ

April 20, 2019

ಮೈಸೂರು: ಮೈಸೂರು ವೀರ ಶೈವ ಸಜ್ಜನ ಸಂಘದ ವತಿಯಿಂದ ಜೆಎಸ್‍ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅನ್ನ ಪೂರ್ಣ ಕಣ್ಣಿನ ಆಸ್ಪತ್ರೆ, ಯೋಗ ಪ್ರಾಣ ವಿದ್ಯಾಕೇಂದ್ರ, ಶ್ರೀರಂಗ ಆಯು ರ್ವೇದ ಚಿಕಿತ್ಸಾ ಮಂದಿರ ಮತ್ತು ಡೆಂಟಲ್ ಕೇರ್ ಮೈಸೂರು ಇವರುಗಳ ಸಹಕಾರದೊಂ ದಿಗೆ ಏ.23ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೈಸೂರಿನ ಕಬೀರ್ ರಸ್ತೆಯಲ್ಲಿರುವ ಶ್ರೀಕಂಠಿ ಮಲ್ಲಣ್ಣ ನವರ್ ಕಲ್ಯಾಣ ಮಂದಿರದ ಆವರಣ ದಲ್ಲಿ ಉಚಿತ ಹೃದಯ, ಕಣ್ಣು, ಯೋಗ ಪ್ರಾಣವಿದ್ಯಾ, ಆಯುರ್ವೇದ ಮತ್ತು ದಂತ ತಪಾಸಣಾ ಶಿಬಿರವನ್ನು…

ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು
ಮೈಸೂರು

ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು

April 20, 2019

ಮೈಸೂರು: ಬೈಕ್‍ನಲ್ಲಿ ಬಂದ ಯುವಕ ರಿಬ್ಬರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಗಿರುವ ಘಟನೆ ಮೈಸೂರಿನ ಆಕಾಶವಾಣಿ ಸರ್ಕಲ್ ಬಳಿ ಸುನಂದ ಶಾಲೆ ಎದುರು ಇಂದು ಸಂಜೆ ಸಂಭವಿಸಿದೆ. ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ಮಹೇಂದ್ರಕುಮಾರ್ ಅವರ ಪತ್ನಿ ಶ್ರೀಮತಿ ಭಾಗ್ಯ ಸರ ಕಳೆದುಕೊಂಡವರು. ಯಾದವಗಿರಿ 1ನೇ ಮುಖ್ಯ ರಸ್ತೆಯಲ್ಲಿ ರುವ ಮಹಿಳಾ ಸಂಘದಲ್ಲಿ ಶುಕ್ರವಾರದ ಪೂಜೆ ಮುಗಿಸಿ ಕೊಂಡು ಮಧು ಮತ್ತು ಪುಷ್ಪಲತಾರೊಂದಿಗೆ ಆಕಾಶವಾಣಿ ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿ ನಿಂದ…

ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23,  ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ
ಮೈಸೂರು

ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23, ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ

April 19, 2019

ಮೈಸೂರು: ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 18,95,056 ಮತದಾರರಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸ್ಥಾಪಿಸಿದ್ದ ಒಟ್ಟು 2,187 ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪ್ರತೀ ಮತಗಟ್ಟೆಯ ಬಳಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಗಳನ್ನು ಬರೆದು ಅಂಟಿಸಲಾಗಿತ್ತು. ಮತಗಟ್ಟೆ…

ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ

April 19, 2019

ಮೈಸೂರು: ಲೋಕ ಸಮರದ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ. ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದು ಮೇ 23ರಂದು ಬಹಿ ರಂಗಗೊಳ್ಳಲಿದೆ. ಇಂದು ರಾತ್ರಿ ವೇಳೆಗೆ ಮತಗಳಿರುವ ಸೀಲ್ ಮಾಡಿದ ಇವಿಎಂಗಳನ್ನು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ತಂದು ಪರಿಶೀಲಿಸಿದ ನಂತರ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇರಿಸಿ ದಿನದ 24 ಗಂಟೆಯೂ ಮೂರು ಸುತ್ತಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ…

ಶೇ.67.79 ಶಾಂತಿಯುತ ಮತದಾನ
ಮೈಸೂರು

ಶೇ.67.79 ಶಾಂತಿಯುತ ಮತದಾನ

April 19, 2019

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನವಾಗಿದ್ದು, ಒಟ್ಟಾರೆ ಶೇ.67.79 ರಷ್ಟು ಮತ ಚಲಾವಣೆಯಾಗಿದೆ. ಅಬ್ಬರದ ಪ್ರಚಾರ, ನಂತರ ಈಗ ಮತದಾನ ಮುಗಿಸಿ ನಿಟ್ಟುಸಿರು ಬಿಟ್ಟಿರುವ ಅಭ್ಯರ್ಥಿ ಗಳು ಫಲಿತಾಂಶಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಕಾಯಬೇಕಿದೆ. ಪ್ರಚಾರಕ್ಕೆ ಕೇವಲ 15 ದಿನಗಳು ದೊರೆತರೆ, ಫಲಿತಾಂಶಕ್ಕೆ ಹಲವು ದಿನ ಎದುರು ನೋಡಬೇಕಾದ ಪರಿಸ್ಥಿತಿ ಕಣದಲ್ಲಿರುವ 241 ಅಭ್ಯರ್ಥಿಗಳಿಗೆ ಎದುರಾಗಿದೆ. ಇದೇ ಮೊದಲ ಬಾರಿಗೆ 14…

ಮೈಸೂರಲ್ಲಿ ಜನ ಸಂಚಾರ ವಿರಳ
ಮೈಸೂರು

ಮೈಸೂರಲ್ಲಿ ಜನ ಸಂಚಾರ ವಿರಳ

April 19, 2019

ಮೈಸೂರು: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮೈಸೂರಿನ ಹೃದಯ ಭಾಗಗಳೂ ಸೇರಿದಂತೆ ಹಲ ವೆಡೆ ಜನ ಸಂಚಾರ ವಿರಳವಾಗಿತ್ತು. ಮೈಸೂರಿನ ಕೆಆರ್ ವೃತ್ತ, ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿತ್ಯ ಇರುತ್ತಿದ್ದಷ್ಟು ಜನ ಸಂಚಾರವೇ ಇರಲಿಲ್ಲ. ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ತಲ್ಲೀನರಾದರೆ, ರಜೆಯೊಂದಿಗೆ ಬಿಸಿಲಿನ ಬೇಗೆ ಯಿಂದಲೂ ಅನೇಕರು ಹೊರ ಬಾರದಿರಬಹುದು. ಸಾಮಾನ್ಯವಾಗಿ ನಿತ್ಯ ಇರುತ್ತಿದ್ದ ಜನ ಸಂದಣಿ…

1 1,031 1,032 1,033 1,034 1,035 1,611
Translate »