ಇಂದು ವಿಶೇಷ ‘ಸ್ವಾತಿ’ ಪೂಜೆ
ಮೈಸೂರು

ಇಂದು ವಿಶೇಷ ‘ಸ್ವಾತಿ’ ಪೂಜೆ

April 20, 2019

ಮೈಸೂರು: ಮೈಸೂರು ನಗರದ ಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯಲ್ಲಿ ರುವ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏ.20 ರಂದು ಶ್ರೀ ವಿಕಾರಿ ನಾಮ ಸಂವತ್ಸರ, ಕೃಷ್ಣ ಪಕ್ಷ, ವಸಂತ ಋತು, ಚೈತ್ರ ಮಾಸ, ಶನಿವಾರ ‘ಸ್ವಾತಿ’ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ.

ಶ್ರೀ ಶ್ರೀಯವರ ಆದೇಶಾ ನುಸಾರ ಅಂದು ಬೆಳಿಗ್ಗೆ 7.30 ಗಂಟೆಗೆ ಮಹಾ ಸುದರ್ಶನ ಸಂಕಲ್ಪ ಹೋಮ, ವಿಶೇಷ ಅಭಿಷೇಕ ಸೇವೆ, ಬೆಳಿಗ್ಗೆ 12.30 ಗಂಟೆಗೆ ಶ್ರೀಯವರಿಗೆ ವಿಶೇಷ ಅಲಂಕಾರ ಸೇವೆ, ಮಧ್ಯಾಹ್ನ 1.00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಸಂಜೆ 7.30ಕ್ಕೆ ಪ್ರಾಕಾರೋತ್ಸವ ಮತ್ತು 8.00 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಎಲ್ಲಾ ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎಂದು ದೇವಸ್ಥಾನದ ವ್ಯವಸ್ಥಾಪಕರಾದ ಯೋಗಾನರಸಿಂಹನ್ (ಯೋಗಾ ಮಾಮ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »