ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ
ಮೈಸೂರು

ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ

April 20, 2019

ಮೈಸೂರು:  ಮೈಸೂರಿನ ರಂಗಾಯಣದ ಕಾರ್ ಗ್ಯಾರೇಜ್‍ನ ಕಬ್ಬಿಣದ ಗೇಟ್ ಮುರಿದು ಬಿದ್ದು ಕಾವಲುಗಾರ (ವಾಚ್‍ಮನ್)ನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ರಂಗಾಯಣದ ಹೊರಗುತ್ತಿಗೆ ಆಧಾರ ದಲ್ಲಿ ಕಾವಲುಗಾರನಾಗಿ ಕೆಲಸ ಮಾಡು ತ್ತಿದ್ದ ಶೇಷ ಎಂಬುವರೇ ಗಾಯಗೊಂಡವ ರಾಗಿದ್ದು, ಅವರನ್ನು ಮೈಸೂರಿನ ಸರಸ್ವತಿ ಪುರಂ 14ನೇ ಮೇನ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿರ್ದೇಶಕರ ಕಾರು ಹಾಗೂ ರಂಗಾಯಣದ ಮಿನಿ ಬಸ್ ಅನ್ನು ನಿಲ್ಲಿಸಲು ಸಂಸ್ಥೆ ಆವರಣದ ಕ್ಯಾಂಟಿನ್ ಪಕ್ಕದಲ್ಲಿ ಗ್ಯಾರೇಜ್ ನಿರ್ಮಿಸಿ ಸುಮಾರು 15 ಅಡಿ ಎತ್ತರದ ಕಬ್ಬಿಣದ ಗೇಟ್ ಅಳವಡಿಸಲಾಗಿದೆ.

ಸದಾ ಕಾವಲು ಕಾಯುತ್ತಿದ್ದ ಶೇಷ ಅವರು, ಗುರುವಾರ ಸಂಜೆ ಸುಮಾರು 4.20 ಗಂಟೆ ವೇಳೆಗೆ ಗ್ಯಾರೇಜಿನ ಗೇಟ್ ಬಂದ್ ಮಾಡು ತ್ತಿದ್ದಾಗ ಎಡಭಾಗದ ಮೇಲಿನ ಕೊಂಡಿ ಕಳಚಿದ ಪರಿಣಾಮ ಭಾರವಾದ ಕಬ್ಬಿಣದ ಗೇಟ್ ಅವರ ಮೇಲೆ ಬಿದ್ದಿತು.

ಪರಿಣಾಮ ಶೇಷ ಅವರ ಕೈ, ಮುಖ ಹಾಗೂ ತಲೆಗೆ ತೀವ್ರ ಗಾಯಗಳಾಯಿತು. ವಿಷಯ ತಿಳಿದ ತಕ್ಷಣ ರಂಗಾಯಣದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಲಾವಿ ದರು ಶೇಷ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಅಂದು ರಾತ್ರಿ ಅವರ ಕೈಗೆ ಆಪರೇಷನ್ ಮಾಡಿದ ವೈದ್ಯರು ರಾಡ್ ಅಳವಡಿಸಿದ್ದಾರೆ ಎಂದು ಹೇಳಲಾಗಿದೆ.

ವಾಹನ ನಿಲುಗಡೆ ಗ್ಯಾರೇಜ್‍ಗೆ ಅಳವಡಿಸಿರುವ ಎತ್ತರದ ಕಬ್ಬಿಣದ ಗೇಟ್‍ನ ಕೊಂಡಿ ಅದರ ಭಾರಕ್ಕೆ ಕಿತ್ತು ಬಂದಿದ್ದೇ ಅವಘಡಕ್ಕೆ ಕಾರಣವಾಗಿದ್ದು, ಕ್ಯಾಂಟಿನ್‍ಗೆ ಹೊಂದಿ ಕೊಂಡಂತಿರುವ ಗ್ಯಾರೇಜ್ ಪಕ್ಕದ ಗೋಡೆಯೂ ಬಿರುಕು ಬಿಟ್ಟಿದ್ದು, ಉರುಳುವ ಸ್ಥಿತಿಯ ಲ್ಲಿದೆ. ರಂಗಾಯಣದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳದ ಮಕ್ಕಳು ಓಡಾಡುತ್ತಿರು ವುದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇ ಕೆಂದು ಅಲ್ಲಿನ ಕಲಾವಿದರು ಒತ್ತಾಯಿಸಿದ್ದಾರೆ.

 

Translate »