ಇಂದು ರಾಜು ಅನಂತಸ್ವಾಮಿ ಗಾನಲಹರಿ
ಮೈಸೂರು

ಇಂದು ರಾಜು ಅನಂತಸ್ವಾಮಿ ಗಾನಲಹರಿ

April 20, 2019

ಮೈಸೂರು: ಖ್ಯಾತ ಸುಗಮ ಸಂಗೀತಗಾರ ರಾಜು ಅನಂತಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ನಾದಾಮೃತ ಸಂಗೀತ ವಿದ್ಯಾ ಲಯದ ವತಿಯಿಂದ ಏ.20ರ ಸಂಜೆ 5.30 ಗಂಟೆಗೆ ಮೈಸೂರಿನ ಆದಿ ಚುಂಚನಗಿರಿ ರಸ್ತೆ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಾದಾಮೃತ ಸಂಗೀತ ವಿದ್ಯಾ ಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ, ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಾನಭಾರತಿ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್ ಅಧ್ಯಕ್ಷತೆ ವಹಿಸುವರು. ಗಾಯಕಿ ರಮ್ಯಾ ವಸಿಷ್ಠ, ಮೈಸೂರು ಅನಂತಸ್ವಾಮಿಯವರ ಪತ್ನಿ ಶಾಂತಾ ಅನಂತ ಸ್ವಾಮಿ ಭಾಗವಹಿಸುವರು ಎಂದರು. ನಂತರ ವಿದ್ಯಾರ್ಥಿಗಳು ರಾಜು ಅನಂತಸ್ವಾಮಿ ಅವರ ಸಂಯೋಜನೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ಸ್ಮರಣಾರ್ಥ ಪ್ರತಿ ತಿಂಗಳ ಎರಡನೇ ಶನಿವಾರದಂದು ನಾಡಿನಾದ್ಯಂತ ಇರುವ ರಾಜು ಅನಂತಸ್ವಾಮಿ ಶಿಷ್ಯರನ್ನು ಕರೆಸಿ ಸಂಗೀತ ಕಚೇರಿ ನಡೆಸುವ ಯೋಜನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಮೃತಾ ರಾಜಾರಾಂ ಶಾಸ್ತ್ರಿ ಇನ್ನಿತರರು ಉಪಸ್ಥಿತರಿದ್ದರು.

Translate »