ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ
ಮೈಸೂರು

ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ

April 20, 2019

ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317ಎ, 43ನೇ ವಾರ್ಷಿಕ ಜಿಲ್ಲಾ ಅಧಿವೇಶನ ಏ.21ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ವಿ.ರೇಣುಕುಮಾರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿರುವ ಕಾರ್ಯ ಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸುವರು. ಸಂಸ್ಥೆಯ ಅಂತಾ ರಾಷ್ಟ್ರೀಯ ನಿರ್ದೇಶಕರಾದ ವಿ.ವಿ.ಕೃಷ್ಣಾರೆಡ್ಡಿ, ಕೆ.ವಂಶೀಧರ ಬಾಬು ಅತಿಥಿ ಯಾಗಿ ಭಾಗವಹಿಸುವರು ಎಂದರು. ಅಧಿವೇಶನದ ಅಂಗವಾಗಿ 7.5 ಲಕ್ಷ ರೂ. ಮೌಲ್ಯದಲ್ಲಿ ಮೈಸೂರಿನ ಸರ್ಕಾರಿ ಆಸ್ಪತ್ರೆ ಮತ್ತು ಮಂಡ್ಯ ಸರ್ಕಾರಿ ಆಸ್ಪತ್ರೆ ತಲಾ ಒಂದೊಂದು ಮಾರುತಿ ಎಕ್ಕೋ ವಾಹನ ಕೊಡುಗೆ ನೀಡಲಾಗುವುದು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ರಾಮನಗರ ಕಂದಾಯ ಜಿಲ್ಲೆಗಳ 145 ಸಂಸ್ಥೆಗಳನ್ನು ಒಳಗೊಂಡಿರುವ ಲಯನ್ಸ್ ಜಿಲ್ಲೆ 317ಎ ಒಟ್ಟು 5 ಸಾವಿರ ಸದಸ್ಯರನ್ನು ಹೊಂದಿದೆ. ಅಧಿವೇಶನದಲ್ಲಿ 2.5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಧಿವೇಶದನ ಆತಿಥೇಯ ಸಮಿತಿ ಅಧ್ಯಕ್ಷ ವಿ.ವೆಂಕಟೇಶ್, ಸಲಹೆಗಾರ ಎನ್.ಜಯರಾಮು, ಉಪಾಧ್ಯಕ್ಷ ಸುರೇಶ್‍ರಾಮು, ಕಾರ್ಯದರ್ಶಿ ಅಶ್ವಥ್ ಹೆಚ್.ನಾರಾಯಣ್, ಖಜಾಂಚಿ ಎಲ್.ವಿ.ಶ್ರೀನಿವಾಸ, ನಂಜುಂಡಸ್ವಾಮಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »