ಮೈಸೂರು

ಹೆಚ್.ಡಿ. ದೇವೇಗೌಡರ ಸಂಬಂಧಿ ಪರಮೇಶ್ ಬ್ಯಾಂಕ್ ಲಾಕರ್‍ನಲ್ಲಿ 6.5 ಕೋಟಿ ರೂ. ಪತ್ತೆ
ಮೈಸೂರು

ಹೆಚ್.ಡಿ. ದೇವೇಗೌಡರ ಸಂಬಂಧಿ ಪರಮೇಶ್ ಬ್ಯಾಂಕ್ ಲಾಕರ್‍ನಲ್ಲಿ 6.5 ಕೋಟಿ ರೂ. ಪತ್ತೆ

April 6, 2019

ಶಿವಮೊಗ್ಗ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಜೆಡಿಎಸ್ ವರಿಷ್ಠರೂ ಆದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಹತ್ತಿರದ ಸಂಬಂಧಿ ಪಿ.ಟಿ. ಪರಮೇಶ್ ಅವರು ಬ್ಯಾಂಕ್ ಲಾಕರ್‍ಗಳಲ್ಲಿ ಇರಿಸಿದ್ದ 6.5 ಕೋಟಿ ರೂ. ನಗದು ಪತ್ತೆಯಾಗಿದೆ. ಪರಮೇಶ್ ಅವರು ಶಿವಮೊಗ್ಗದಲ್ಲಿ ಮಾರುತಿ ಕಾರು ಮಾರಾಟದ ಶ್ರುತಿ ಮೋಟಾರ್ಸ್ ಷೋ ರೂಂ ಹೊಂದಿದ್ದಾರೆ. ಷೋರೂಂ ಮತ್ತು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದ್ದರು. ಈ ಸಂದರ್ಭ ಅವರ ಬ್ಯಾಂಕ್ ಲಾಕರ್‍ಗಳನ್ನು…

ನಾನು ಬಿಜೆಪಿ ಸೇರಲ್ಲ, ನನ್ನ ಗೆಲುವಿಗಾಗಿ  ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ
ಮೈಸೂರು

ನಾನು ಬಿಜೆಪಿ ಸೇರಲ್ಲ, ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ

April 6, 2019

ಮಂಡ್ಯ: `ನಾನು ಬಿಜೆಪಿ ಸೇರಲ್ಲ’, ಮಂಡ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿ ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ ಅಷ್ಟೆ. ಮುಂದೆ ಏನೇ ನಿರ್ಧಾರವಾದರೂ ಮಂಡ್ಯದ ಎಲ್ಲಾ ಜನರ ಅಭಿಪ್ರಾಯದಂತೆಯೇ ತೆಗೆದುಕೊಳ್ಳುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸ್ಪಷ್ಟಪಡಿಸಿದರು. ನಗರದ ಗುತ್ತಲಿನಲ್ಲಿಂದು ಮುಸ್ಲಿಂ ಮುಖಂಡರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು,ನಾನು ಬಿಜೆಪಿ ಸೇರ್ಪಡೆ ವಿಚಾರ ಕೇವಲ ಊಹಾಪೋಹ. ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರ ವಾಗಿ…

ಸುಮಲತಾ ಅಂಬರೀಶ್ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ: ಹೆಚ್‍ಡಿಕೆ
ಮೈಸೂರು

ಸುಮಲತಾ ಅಂಬರೀಶ್ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ: ಹೆಚ್‍ಡಿಕೆ

April 6, 2019

ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಕುರಿತು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯ ವಿಲ್ಲ ಎಂಬುದಾಗಿ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳಿದ್ದಾರಲ್ಲಾ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅವರು, ಈ ಬಗ್ಗೆ ನಾನೂ ಅಧಿಕಾರಿಗಳೊಂದಿಗೆ…

ಸಂಸದ ಪ್ರತಾಪ ಸಿಂಹ ಬಿರುಸಿನ ಪ್ರಚಾರ
ಮೈಸೂರು

ಸಂಸದ ಪ್ರತಾಪ ಸಿಂಹ ಬಿರುಸಿನ ಪ್ರಚಾರ

April 6, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳವಾಡಿ ಗ್ರಾಮದ ಬಸವೇಶ್ವರ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರೋಡ್‍ಶೋ ಮೂಲಕ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ನಡೆಸಿದ ಪ್ರತಾಪ ಸಿಂಹ, ಪ್ರಧಾನಿ ಮೋದಿ ಅವರ ಸಾಧನೆ ಹಾಗೂ ಕಳೆದ 5 ವರ್ಷಗಳಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ರೋಡ್ ಶೋ ನಡುವೆ ಅಲ್ಲಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಮತ ಯಾಚನೆ ಮಾಡಿದರು. ಪ್ರತಿ…

ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿಎಂಗೆ ಅನುಮಾನವೆ…!?
ಮೈಸೂರು

ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿಎಂಗೆ ಅನುಮಾನವೆ…!?

April 6, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಅನುಮಾನ ಕಾಡುತ್ತಿದೆಯೇ? ಇಂದು ಸುದ್ದಿಗಾರರ ಜೊತೆ ಅವರು ಮಾತನಾಡಿದ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತದೆ. `ಒಬ್ಬ ನಿಖಿಲ್‍ನನ್ನು ಸೋಲಿ ಸಲು ಕಾಂಗ್ರೆಸ್, ಬಿಜೆಪಿ, ರೈತ ಸಂಘ ಇವರ ಜೊತೆಗೆ ಮಾಧ್ಯಮಗಳೂ ಸೇರಿ ಒಂದು ರೀತಿ ಚಕ್ರವ್ಯೂಹವನ್ನೇ ರಚಿಸಿ ದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು. ಆದರೂ ದುಡಿಮೆ ಮಾಡುವವರ ಪರವಾಗಿ ಮಂಡ್ಯದ ಜನತೆ ಈಗಾಗಲೇ ತೀರ್ಮಾನ ಮಾಡಿಕೊಂಡಿದೆ. ನಿಖಿಲ್ ಗೆಲುವು…

ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ
ಮೈಸೂರು

ಗಗನಕ್ಕೇರಿದ ಕೆಲ ತರಕಾರಿ ಹೂವು, ಹಣ್ಣಿನ ದರ

April 6, 2019

ಮೈಸೂರು: ಯುಗಾದಿ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಮೈಸೂರಿನ ದೇವರಾಜ ಮಾರುಕಟ್ಟೆ ಭಾರೀ ಜನಜಂಗುಳಿಯಿಂದ ಕೂಡಿತ್ತು. ಹೂವು, ಹಣ್ಣು, ತರಕಾರಿ ಕೊಳ್ಳುವವರಿಂದ ತುಂಬಿ ತುಳುಕಿ ಕಾಲಿಡಲು ಜಾಗವಿಲ್ಲ ಎಂಬಂತಿತ್ತು. ಹಿಂದು ಪಂಚಾಂಗದ ಪ್ರಕಾರ ವಿಳಂಬಿ ನಾಮ ಸಂವತ್ಸರ ಕಳೆದು ಶನಿವಾರದಿಂದ (ಏ.6) ಶ್ರೀವಿಕಾರಿನಾಮ ಸಂವತ್ಸರ ಆರಂಭ ವಾಗುತ್ತಿದೆ. ಸಂವತ್ಸರದ ಆರಂಭವನ್ನು ಹಿಂದೂಗಳು ಯುಗದ ಆದಿ ಯುಗಾದಿ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ. ಯುಗಾದಿ ಅಂಗವಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಸುತ್ತಮುತ್ತ ಹಾಗೂ ಮೈಸೂರಿನ ವಿವಿಧೆಡೆ ಇರುವ ಮಾರುಕಟ್ಟೆ,…

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಮೈಸೂರು

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ

April 6, 2019

ಮೈಸೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು, ಪಣಕ್ಕಿಟ್ಟಿದ್ದ 28,100 ರೂ. ನಗದು, 5 ಮೊಬೈಲ್ ಫೋನ್, ಬೆಲೆಬಾಳುವ ಎಲ್‍ಇಡಿ ಟಿವಿ ಹಾಗೂ ಇತರೆ ಪರಿಕರಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಹುರುಳಿ ಕ್ಯಾತನಹಳ್ಳಿಯ ನಿವಾಸಿ, ಮಹಾಲಕ್ಷ್ಮೀ ಟೀ ಕಾರ್ನರ್ ಮಾಲೀಕ ಹರೀಶ್ (30) ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿ. ಇದೇ ಗ್ರಾಮದ ಅರವಿಂದ (22), ಹೆಚ್.ಡಿ. ಕೋಟೆ ತಾಲೂಕು ಸರಗೂರು ಹೋಬಳಿ ನಾಜೀಪುರದ ಉಮೇಶ್ (19), ಚಾಮರಾಜ ನಗರದ ಕೆಎಚ್‍ಬಿ ಕಾಲೋನಿಯ…

ಮೈಸೂರು ಜಿಲ್ಲಾಡಳಿತದಿಂದ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ
ಮೈಸೂರು

ಮೈಸೂರು ಜಿಲ್ಲಾಡಳಿತದಿಂದ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ

April 6, 2019

ಮೈಸೂರು: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 112ನೇ ಜನ್ಮ ದಿನವನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಇಂದಿಲ್ಲಿ ಆಚರಿಸಲಾಯಿತು. ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಡಾ.ಜಗಜೀವನರಾಂ ವೃತ್ತದಲ್ಲಿರುವ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾಲಾರ್ಪಣೆ ಮಾಡಿದರು. ಮಾಲಾರ್ಪಣೆ ಸಂದರ್ಭದಲ್ಲಿ ಕರ್ನಾ ಟಕ ಪೊಲೀಸ್ ಬ್ಯಾಂಡ್‍ನ ಮುಖ್ಯಸ್ಥ ಬಿ. ಮಂಜುನಾಥ್ ನೇತೃತ್ವದ ಕರ್ನಾಟಕ ಪೊಲೀಸ್ ಬ್ಯಾಂಡ್ ಇಂಗ್ಲಿಷ್ ವಾದ್ಯ ಗೀತೆ ನುಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು…

ಸಿದ್ದು-ಜಿಟಿಡಿ ಸಮಾಗಮ: ಮೈತ್ರಿ ಧರ್ಮ ಪಾಲನೆ ನಿರ್ಧಾರ, ಒಟ್ಟಾಗಿ ಚುನಾವಣಾ ಪ್ರಚಾರ
ಮೈಸೂರು

ಸಿದ್ದು-ಜಿಟಿಡಿ ಸಮಾಗಮ: ಮೈತ್ರಿ ಧರ್ಮ ಪಾಲನೆ ನಿರ್ಧಾರ, ಒಟ್ಟಾಗಿ ಚುನಾವಣಾ ಪ್ರಚಾರ

April 5, 2019

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಿ, ನಂತರವೂ ಹಾವು-ಮುಂಗುಸಿ ಯಂತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕೊನೆಗೂ ಒಂದೂವರೆ ದಶಕದ ನಂತರ ಸಂದಿಸಿದ್ದಾರೆ. ಇದೀಗ ಒಂದಾಗಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಜಿಟಿಡಿ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿದ್ದರು. ಸಚಿವ ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣ ಹಾಗೂ ಇತರ ಕಾಂಗ್ರೆಸ್…

ರಾಜಕೀಯ ವೈರತ್ವದಿಂದ ಅಭಿವೃದ್ಧಿ ಕಾಣದ ಮಂಡ್ಯ ಗ್ರಾಮಗಳ ಪುನಶ್ಚೇತನಕ್ಕೆ ಆದ್ಯತೆ
ಮೈಸೂರು

ರಾಜಕೀಯ ವೈರತ್ವದಿಂದ ಅಭಿವೃದ್ಧಿ ಕಾಣದ ಮಂಡ್ಯ ಗ್ರಾಮಗಳ ಪುನಶ್ಚೇತನಕ್ಕೆ ಆದ್ಯತೆ

April 5, 2019

ಬೆಂಗಳೂರು: ಸಂಸದರಾಗಿ ಆಯ್ಕೆ ಗೊಂಡರೆ ರಾಜಕೀಯ ವೈರತ್ವದಿಂದ ಅಭಿವೃದ್ಧಿಯೇ ಕಾಣದ ಗ್ರಾಮಗಳ ಪುನ ಶ್ಚೇತನಕ್ಕೆ ಆದ್ಯತೆ ನೀಡುವುದಾಗಿ ಚಿತ್ರನಟಿ ಸುಮಲತಾ ಅಂಬರೀಶ್ ಇಂದಿಲ್ಲಿ ತಿಳಿಸಿದ್ದಾರೆ. ಪತಿ ಅಂಬರೀಶ್ ಮಂಡ್ಯ ಜಿಲ್ಲೆಯ ಬಗ್ಗೆ ಕನಸುಗಳ ಸರಮಾಲೆ ಹೊತ್ತುಕೊಂಡಿದ್ದರು. ಆದರೆ ಅವರಿಗೆ ಆ ಕನಸುಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅಂತಹ ಕನಸುಗಳನ್ನು ನನಸು ಮಾಡಲು ಮೊದಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತಿ ಇದ್ದಾಗ ಜಿಲ್ಲೆಯ ಪ್ರವಾಸ…

1 1,048 1,049 1,050 1,051 1,052 1,611
Translate »