ಮಂಡ್ಯ:ಇಡೀ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವೆನಿಸಿ ಕೊಂಡಿರುವ ಮಂಡ್ಯದಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಆರೋಪಗಳ ನಡುವೆಯೇ ಹಿರಿಯ ಕಾಂಗ್ರೆಸ್ ಮುತ್ಸದ್ಧಿ, ಮಾಜಿ ಸಂಸದ ಜಿ.ಮಾದೇಗೌಡರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟ ರಾಜು ಬಳಿ ಹಣದ ಬೇಡಿಕೆಯಿಟ್ಟ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಷೇತ್ರದಲ್ಲಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ…
ಚುನಾವಣೆ ನಂತರ ಮೈತ್ರಿ ಸರ್ಕಾರ ಪತನ
April 8, 2019ಮೈಸೂರು:ಲೋಕಸಭಾ ಚುನಾವಣೆ ನಂತರ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಧಿಕಾರದ ಆಸೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಇದೀಗ ಲೋಕಸಭಾ ಚುನಾ ವಣೆ ಎದುರಿಸಲು ಮುಂದಾಗಿದ್ದಾರೆ. ದೊಡ್ಡವರ ಮಟ್ಟದಲ್ಲಿ ಮಾಡಿಕೊಂಡಿ ರುವ ಮೈತ್ರಿಗೆ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಸಹಮತವಿಲ್ಲದ ಕಾರಣ ಈ ಚುನಾವಣೆಯಲ್ಲಿ ಅವರು ನೆಲಕಚ್ಚುವುದು ಗ್ಯಾರಂಟಿ ಎಂದು ವ್ಯಂಗ್ಯ ಮಾಡಿದರು….
ಸುಲಲಿತವಾಗಿ ನಡೆದ ರಂಗಾಯಣ `ಚಿಣ್ಣರ ಮೇಳ’ ಅರ್ಜಿ ವಿತರಣೆ
April 8, 2019ಮೈಸೂರು: ಈ ತಿಂಗಳ 13ರಿಂದ ಮೈಸೂರು ರಂಗಾ ಯಣ ಹಮ್ಮಿಕೊಂಡಿರುವ `ಚಿಣ್ಣರ ಮೇಳ’ಕ್ಕೆ ಅರ್ಜಿ ವಿತರಣೆ ಯಾವುದೇ ಗೊಂದಲ, ಗದ್ದಲಗಳಿಗೆ ಅವಕಾಶವಾಗದಂತೆ ಸುಲಲಿತವಾಗಿ ನಡೆಯಿತು. 26 ದಿನಗಳ ಚಿಣ್ಣರ ಮೇಳದ ಅರ್ಜಿ ಗಳನ್ನು ಭಾನುವಾರ ಬೆಳಿಗ್ಗೆ 10 ಗಂಟೆ ಯಿಂದ ನೀಡಲಾಗುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸೇರ್ಪಡೆ ಮಾಡುವ ಆಶಯದೊಂದಿಗೆ ಭಾನು ವಾರ ಮುಂಜಾನೆ 4 ಗಂಟೆಯಿಂದಲೇ ರಂಗಾಯಣ ಆವರಣದಲ್ಲಿ ಜಮಾಯಿ ಸಿದ್ದರು. ಕೆಲವರು ಶನಿವಾರ ರಾತ್ರಿ ಯಿಂದಲೇ ರಂಗಾಯಣ ಹೊರ ಆವ ರಣದಲ್ಲಿ ಕಾದು…
`ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿ ಬಿಡುಗಡೆ
April 8, 2019ಮೈಸೂರು: ಡಾ. ಸಚ್ಚಿದಾನಂದಮೂರ್ತಿ ಅವರು ಬರೆದ `ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿಯನ್ನು ಪ್ರಾಧ್ಯಾಪಕ ರುದ್ರೇಶ್ ಅವರು ಭಾನು ವಾರ ಮೈಸೂರಿನ ಕಲಾಮಂದಿರ ಮನೆ ಯಂಗಳದಲ್ಲಿ ಬಿಡುಗಡೆ ಮಾಡಿದರು. ಸಂವಹನ ಪ್ರಕಾಶನ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಂದರ್ಭ ದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವೈದ್ಯಕೀಯ ಸಾಹಿತ್ಯ ಇಂದು ಬೆಳೆಯುತ್ತಿದ್ದು, 2000ಕ್ಕೂ ಹೆಚ್ಚು ವೈದ್ಯಕೀಯ ಸಾಹಿತ್ಯ ಕೃತಿಗಳಿವೆ. ಇನ್ನಷ್ಟು ವೈದ್ಯರು ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾಗಬೇಕು ಎಂದರು. ಇಂದಿನ…
ಜನರ ನಡುವೆ ಶಾಸಕ ರಾಮದಾಸ್, ಸಂಸದ ಪ್ರತಾಪಸಿಂಹರಿಂದ ಯುಗಾದಿ ಆಚರಣೆ
April 8, 2019ಮೈಸೂರು: ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರೊಂದಿಗೆ ಯುಗಾದಿ ಹಬ್ಬದ ದಿನವಾದ ಶನಿವಾರ ಮೈಸೂರಿನ 48ನೇ ವಾರ್ಡ್ ವ್ಯಾಪ್ತಿಯ ಜಯನಗರ, ಚಿನ್ನಗಿರಿಕೊಪ್ಪಲು ಪ್ರದೇಶ ದಲ್ಲಿ ಜನರ ನಡುವೆ ಯುಗಾಗಿ ಹಬ್ಬವನ್ನು ಆಚರಿಸಿದರು. ಯುಗಾದಿ ಹಬ್ಬ ಹಾಗೂ ಬಿಜೆಪಿ ಸಂಸ್ಥಾಪನಾ ದಿನ ಅಂಗವಾಗಿ ಈ ಪ್ರದೇಶದ ಮನೆ ಮನೆಗೆ ತೆರಳಿ ಬೇವು-ಬೆಲ್ಲ ನೀಡಿ, ಜನರಿಗೆ ಹಬ್ಬದ ಶುಭ ಕೋರಿ ದರು. ಏ.9ರಂದು ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ನಡೆಯುವ…
ಹಾಡಹಗಲೇ ವೃದ್ಧೆಯ ಮಾಂಗಲ್ಯ ಸರ ಅಪಹರಣ
April 8, 2019ಮೈಸೂರು: ಮೊಮ್ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಎಗರಿಸಿ ಅಪರಿಚಿತ ಬೈಕ್ ಸವಾರನೋರ್ವ ಪರಾರಿ ಯಾಗಿರುವ ಘಟನೆ ಮೈಸೂರಿನ ಹೆಬ್ಬಾಳು ಬಡಾವಣೆಯ ಸೂರ್ಯಬೇಕರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಸೂರ್ಯಬೇಕರಿ ಸಮೀಪ ಸುಭಾಷನಗರದ ಚಾಮುಂಡೇಶ್ವರಿ ದೇವಸ್ಥಾನ ರಸ್ತೆ, 3ನೇ ಕ್ರಾಸ್ ನಿವಾಸಿ ಆರ್.ನಾಗರಾಜು ಅವರ ಪತ್ನಿ ಶ್ರೀಮತಿ ಶಶಿಕಲಾ(52) ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಅದೇ ಬಡಾವಣೆಯ ಮತ್ತೊಂದು ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿದ್ಧ ಅವರು ಸಾಮಗ್ರಿಗಳನ್ನು ಸಾಗಿಸಿದ ನಂತರ ಮೊಮ್ಮಕ್ಕಳಿಬ್ಬರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ…
`ನಮೋ ಪ್ರಮತಿ’ಯಲ್ಲಿ ತರಬೇತಿ ಪಡೆದ 15 ಮಂದಿ ನಾಗರಿಕ ಸೇವೆಗಳಿಗೆ ಆಯ್ಕೆ
April 8, 2019ಮೈಸೂರು: ಮೈಸೂರಿನ ನಮೋ ಪ್ರಮತಿ ಕೇಂದ್ರದಲ್ಲಿ ತರಬೇತಿ ಪಡೆದ 15 ಮಂದಿ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ಸಂಸ್ಥಾಪಕ ಹೆಚ್.ವಿ.ರಾಜೀವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮೋ ಕೇಂದ್ರದಲ್ಲಿ ತರಬೇತಿ ಪಡೆದು ನಾಗರಿಕ ಸೇವೆಗಳಿಗೆ ಆಯ್ಕೆಯಾ ದವರಲ್ಲಿ ಹಾಜರಿದ್ದ ರೋಹನ್ ಜಗದೀಶ್, ಮಂಜುನಾಥ್, ಅಶೋಕ್‍ಕುಮಾರ್ ಮತ್ತು ನಿವೇದಿತಾ ಅವರನ್ನು ಅಭಿ ನಂದಿಸಿದರು. ಹಲವರು ಪರೀಕ್ಷೆಗಳಲ್ಲಿ ತೇರ್ಗಡೆಯಾದರೂ ಸಂದರ್ಶನದಲ್ಲಿ ಸೋಲುತ್ತಾರೆ. ಇಂಥವರಿಗೆ ಮಾರ್ಗದರ್ಶನ ಅಗತ್ಯವಿದೆ. ಬೆಂಗಳೂರು, ದೆಹಲಿ ಮೊದಲಾದ ಕಡೆ…
ಮೈಸೂರಲ್ಲೂ ಮೈತ್ರಿ ಮುನಿಸು
April 6, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಪರ ಕೆಲಸ ಮಾಡಲು ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಲೀ ರುಚಿ ಹೋಟೆಲಿ ನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಇಂದು ಕರೆದಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸಚಿವರಿಬ್ಬರ ಸಮ್ಮುಖದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಯಿತು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರು ಮಾತನಾಡುತ್ತಿದ್ದಂತೆಯೇ…
ಮಾರ್ಕೆಟ್‍ನಲ್ಲಿ ಸುಮಲತಾ ಪ್ರಚಾರ
April 6, 2019ಮಂಡ್ಯ: ಸುಮಲತಾ ಪರ ಪ್ರಚಾರದಲ್ಲಿ ಹಾರಾಡಿದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬಾವುಟ… ಸುಮಲತಾಗೆ ಅಂಬಿಗೆ ಪ್ರಿಯವಾದ ಮಿಠಾಯಿ ನೀಡಿದ ಅಭಿಮಾನಿ… ಚುನಾವಣಾ ಖರ್ಚಿಗಾಗಿ ಹಣ ಸಹಾಯ ಮಾಡಿದ ವೃದ್ದೆ ವ್ಯಾಪಾರಿ… ಮುಸ್ಲಿಂ ಮುಖಂಡರು, ಮತದಾರರೊಂದಿಗೆ ಉರ್ದುವಿನಲ್ಲಿಯೇ ಮತ ಯಾಚನೆ..! ಇವಿಷ್ಟು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರು ಮಂಡ್ಯ ಸಿಟಿ ಸೇರಿದಂತೆ ವಿವಿಧೆಡೆ ನಡೆಸಿದ ಪ್ರಚಾ ರದ ವೇಳೆ ಕಂಡು ಬಂದ ವಿಶೇಷತೆ ಗಳು. ಕಳೆದೊಂದು ವಾರದಿಂದ ಚಿತ್ರ ನಟರಾದ…
ಮಸೀದಿಯಲ್ಲಿ ನಿಖಿಲ್ ಪ್ರಾರ್ಥನೆ
April 6, 2019ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಂದು ಮಂಡ್ಯ ಗಾಂಧಿನಗರದ ಮಸೀದಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮುಸ್ಲಿಂ ಟೋಪಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಿಖಿಲ್‍ಗೆ ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಮುಸ್ಲಿಂ ಮುಖಂಡರು ಸಾಥ್ ನೀಡಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ಶುಕ್ರವಾರ ಮುಸ್ಲಿಮರಿಗೆ ಪವಿತ್ರ ದಿನವಾಗಿದೆ. ಹಾಗಾಗಿ ಮಸೀದಿಗೆ ಬಂದೆ. ಏಪ್ರಿಲ್ 8 ರಿಂದ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ, ಡಿಕೆಶಿ ಪ್ರಚಾರ ಮಾಡುತ್ತಾರೆ.ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ…










