`ನಮೋ ಪ್ರಮತಿ’ಯಲ್ಲಿ ತರಬೇತಿ ಪಡೆದ 15 ಮಂದಿ ನಾಗರಿಕ ಸೇವೆಗಳಿಗೆ ಆಯ್ಕೆ
ಮೈಸೂರು

`ನಮೋ ಪ್ರಮತಿ’ಯಲ್ಲಿ ತರಬೇತಿ ಪಡೆದ 15 ಮಂದಿ ನಾಗರಿಕ ಸೇವೆಗಳಿಗೆ ಆಯ್ಕೆ

April 8, 2019

ಮೈಸೂರು: ಮೈಸೂರಿನ ನಮೋ ಪ್ರಮತಿ ಕೇಂದ್ರದಲ್ಲಿ ತರಬೇತಿ ಪಡೆದ 15 ಮಂದಿ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ಸಂಸ್ಥಾಪಕ ಹೆಚ್.ವಿ.ರಾಜೀವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮೋ ಕೇಂದ್ರದಲ್ಲಿ ತರಬೇತಿ ಪಡೆದು ನಾಗರಿಕ ಸೇವೆಗಳಿಗೆ ಆಯ್ಕೆಯಾ ದವರಲ್ಲಿ ಹಾಜರಿದ್ದ ರೋಹನ್ ಜಗದೀಶ್, ಮಂಜುನಾಥ್, ಅಶೋಕ್‍ಕುಮಾರ್ ಮತ್ತು ನಿವೇದಿತಾ ಅವರನ್ನು ಅಭಿ ನಂದಿಸಿದರು. ಹಲವರು ಪರೀಕ್ಷೆಗಳಲ್ಲಿ ತೇರ್ಗಡೆಯಾದರೂ ಸಂದರ್ಶನದಲ್ಲಿ ಸೋಲುತ್ತಾರೆ. ಇಂಥವರಿಗೆ ಮಾರ್ಗದರ್ಶನ ಅಗತ್ಯವಿದೆ. ಬೆಂಗಳೂರು, ದೆಹಲಿ ಮೊದಲಾದ ಕಡೆ ತರಬೇತಿ ಪಡೆಯಲು ಅಸಾಧ್ಯವಾದವರಿಗೆ ಕೇಂದ್ರ ಉತ್ತಮ ಅವಕಾಶ ಕಲ್ಪಿಸದೆ. ಪ್ರಮುಖವಾಗಿ ಗ್ರಾಮೀಣರೂ ಸೇರಿದಂತೆ ರಾಜ್ಯದ ಎಲ್ಲಾ ಪ್ರದೇಶಗಳ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳಿಗೆ ತಮ್ಮ ಕೇಂದ್ರ ಉಚಿತ ತರಬೇತಿ ನೀಡುತ್ತಿದೆ ಎಂದು ಹೇಳಿದರು. ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಈವರೆಗೆ ಅನೇಕರು ಉತ್ತಮ ಫಲಿತಾಂಶದ ಮೂಲಕ ಕೇಂದ್ರಕ್ಕೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. 2020ರ ನಾಗರಿಕ ಸೇವಾ ಪರೀಕ್ಷೆಗಳಿಗೆ ಸದ್ಯದಲ್ಲೇ ಆರಂಭವಾಗಲಿರುವ ತರಬೇತಿಗೆ ಏಪ್ರಿಲ್ 28ರಂದು ಪ್ರಮತಿ ವ್ಯೂ ಅಕಾಡೆಮಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಏ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 9686072224 ಸಂಪರ್ಕಿಸುವಂತೆ ಕೋರಿ ದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಆರ್.ರವಿ ಉಪಸ್ಥಿತರಿದ್ದರು.

Translate »