`ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿ ಬಿಡುಗಡೆ
ಮೈಸೂರು

`ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿ ಬಿಡುಗಡೆ

April 8, 2019

ಮೈಸೂರು: ಡಾ. ಸಚ್ಚಿದಾನಂದಮೂರ್ತಿ ಅವರು ಬರೆದ `ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿಯನ್ನು ಪ್ರಾಧ್ಯಾಪಕ ರುದ್ರೇಶ್ ಅವರು ಭಾನು ವಾರ ಮೈಸೂರಿನ ಕಲಾಮಂದಿರ ಮನೆ ಯಂಗಳದಲ್ಲಿ ಬಿಡುಗಡೆ ಮಾಡಿದರು.

ಸಂವಹನ ಪ್ರಕಾಶನ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಂದರ್ಭ ದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವೈದ್ಯಕೀಯ ಸಾಹಿತ್ಯ ಇಂದು ಬೆಳೆಯುತ್ತಿದ್ದು, 2000ಕ್ಕೂ ಹೆಚ್ಚು ವೈದ್ಯಕೀಯ ಸಾಹಿತ್ಯ ಕೃತಿಗಳಿವೆ. ಇನ್ನಷ್ಟು ವೈದ್ಯರು ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾಗಬೇಕು ಎಂದರು.

ಇಂದಿನ ಯುವ ವೈದ್ಯರಿಗೆ ಸಾಹಿತ್ಯದ ಗಂಧವೇ ತಿಳಿದಿರುವುದಿಲ್ಲ. ವೈದ್ಯರು ಸಾಹಿತ್ಯವನ್ನು ಓದಬೇಕು. ಸಾಹಿತ್ಯ ತಿಳಿದಿ ದ್ದರೆ ಕೃತಿ ರಚಿಸಲು ಸುಲಭವಾಗುತ್ತದೆ. ಹೀಗಾಗಿ ಹೆಚ್ಚು ವೈದ್ಯಕೀಯ ಸಾಹಿತ್ಯ ಕೃತಿಗಳು ಹೊರ ಬರಲು ಸಾದ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವ ವಿದ್ಯಾನಿಲಯವು ವೈದ್ಯ ವಿಜ್ಞಾನ ವಿಷಯ ಕೋಶವನ್ನು ಹೊರ ತರುತ್ತಿದ್ದು, ಈ ವರ್ಷದ ಕೊನೆಯಲ್ಲಿ ಅದು ಬಿಡುಗಡೆಗೊಳ್ಳವ ಸಾಧ್ಯತೆಯಿದೆ. ನನ್ನ ಸಂಪಾದಕತ್ವದಲ್ಲಿಯೇ ಪುಸ್ತಕ ಪ್ರಕಟಿಸ ಲಾಗುತ್ತಿದ್ದು, ವೈದ್ಯಕೀಯಕ್ಕೆ ಸಂಬಂಧಿಸಿದ 30,000 ಆಂಗ್ಲ ಪದಗಳನ್ನು ಕನ್ನಡ ಪದ ಗಳಾಗಿ ಪರಿವರ್ತಿಸಿದ್ದೇನೆ ಎಂದರು.

ಹಿಂದಿನ ದಿನಗಳಲ್ಲಿ ವೈದ್ಯ ಮತ್ತು ರೋಗಿಯ ನಡುವೆ ಉತ್ತಮ ಸಂಬಂಧ ವಿತ್ತು. ಆದರೆ ಇಂದು ಅದು ಹಳಸುತ್ತಿದೆ. ಯುವ ವೈದ್ಯರಿಗೆ ಸಾಹಿತ್ಯ, ಮಾನವೀಯ ಮೌಲ್ಯಗಳನ್ನೂ ಸಹ ಕಲಿಸುವಂತಾಗ ಬೇಕು ಎಂದು ಅಭಿಪ್ರಾಯಪಟ್ಟರು.

ಕೃತಿ ಕುರಿತು ಡಾ.ಹೆಚ್.ಎ ಪಾಶ್ರ್ವ ನಾಥ್, ಕೃತಿಯಲ್ಲಿ ಸಾಹ್ಯ, ಶೈಲಿ, ಪಾತ್ರಗಳು ಸೇರಿದಂತೆ ಉತ್ತಮ ಬರಹ ಇದಾಗಿದೆ. ಡಾ.ಅನುಪಮಾ ನಿರಂಜನ ಇನ್ನಿತರ ವೈದ್ಯ ಸಾಹಿತಿಗಳ ಸಾಲಿಗೆ ಡಾ.ಸಚ್ಚಿದಾನಂದ ಮೂರ್ತಿ ಸೇರ್ಪಡೆಯಾಗಿದ್ದಾರೆ ಎಂದರು.
ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಪಹನ ಪ್ರಕಾಶನದ ಡಾ.ಡಿ.ಎನ್.ಲೋಕಪ್ಪ, ಸಾಹಿತಿ ಜಯಪ್ಪ ಹೊನ್ನಾಳಿ ಇನ್ನಿತರರು ಉಪಸ್ಥಿತರಿದ್ದರು.

Translate »