ಜನರ ನಡುವೆ ಶಾಸಕ ರಾಮದಾಸ್, ಸಂಸದ  ಪ್ರತಾಪಸಿಂಹರಿಂದ ಯುಗಾದಿ ಆಚರಣೆ
ಮೈಸೂರು

ಜನರ ನಡುವೆ ಶಾಸಕ ರಾಮದಾಸ್, ಸಂಸದ ಪ್ರತಾಪಸಿಂಹರಿಂದ ಯುಗಾದಿ ಆಚರಣೆ

April 8, 2019

ಮೈಸೂರು: ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರೊಂದಿಗೆ ಯುಗಾದಿ ಹಬ್ಬದ ದಿನವಾದ ಶನಿವಾರ ಮೈಸೂರಿನ 48ನೇ ವಾರ್ಡ್ ವ್ಯಾಪ್ತಿಯ ಜಯನಗರ, ಚಿನ್ನಗಿರಿಕೊಪ್ಪಲು ಪ್ರದೇಶ ದಲ್ಲಿ ಜನರ ನಡುವೆ ಯುಗಾಗಿ ಹಬ್ಬವನ್ನು ಆಚರಿಸಿದರು. ಯುಗಾದಿ ಹಬ್ಬ ಹಾಗೂ ಬಿಜೆಪಿ ಸಂಸ್ಥಾಪನಾ ದಿನ ಅಂಗವಾಗಿ ಈ ಪ್ರದೇಶದ ಮನೆ ಮನೆಗೆ ತೆರಳಿ ಬೇವು-ಬೆಲ್ಲ ನೀಡಿ, ಜನರಿಗೆ ಹಬ್ಬದ ಶುಭ ಕೋರಿ ದರು. ಏ.9ರಂದು ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.

ಬಳಿಕ ಈ ಭಾಗದಲ್ಲಿ ಅತೀ ಹೆಚ್ಚು ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು ನಿರ್ಮಾಣ ಮಾಡು ತ್ತಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀ ಲಿಸಿದರು. ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಮಹಿಳಾ ಮೋಚಾ ಅಧ್ಯಕ್ಷೆ ನೂರ್ ಫಾತಿಮಾ, ಮುಖಂಡರಾದ ಗೌರಿ, ಸುಜಾತಾ, ವಾಡ್ ಅಧ್ಯಕ್ಷ ಸೋಮಣ್ಣ, ಗಿರೀಶ್, ರಾಮಪ್ರಸಾದ್, ನಾಗರಾಜು, ಚಿನ್ಮಯಿ, ಪ್ರೇಮ್‍ಕುಮಾರ್, ಮಹೇಶ್, ಅನ್ನಪೂರ್ಣ ಇನ್ನಿತರರಿದ್ದರು.

Translate »