ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಬಹುನಿರೀಕ್ಷೆಯ ಲೋಕಸಭೆ ಚುನಾವಣೆ 2019ರ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಹೊರಬಿದ್ದಿದೆ. ದೆಹಲಿಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್‍ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪ್ರಣಾಳಿಕೆಯನ್ನು 12 ಭಾಗಗಳಾಗಿ ವಿಂಗಡಿ ಸಲಾಗಿದ್ದು ‘ಸಂಕಲ್ಪದ ಭಾರತ, ಸಶಕ್ತ ಭಾರತ’ ಪ್ರಣಾಳಿಕೆಯ ಧ್ಯೇಯವಾಕ್ಯವಾಗಿದೆ. ಪ್ರಣಾಳಿಕೆ ಯಲ್ಲಿ 75 ಘೋಷಣೆಗಳನ್ನು ಮಾಡಲಾಗಿದೆ….
50 ವರ್ಷದ ಕೆಲಸವನ್ನು 5 ವರ್ಷದಲ್ಲಿ ಮಾಡಿದ್ದೇವೆ…
April 9, 2019ನವದೆಹಲಿ: ಒಂದು ನಿರ್ದಿಷ್ಟ ಗುರಿಯೆಡೆಗೆ ಒಂದೇ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯುವ ಭರವಸೆಯನ್ನು ನಾವು ದೇಶದ ಜನತೆಗೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಳೆದ 5 ವರ್ಷಗಳಲ್ಲಿ ಸರ್ಕಾರದ ಆಡಳಿತದಲ್ಲಿ ಸಹಕಾರ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಮ್ಮ ಪಕ್ಷದ ಪ್ರಣಾಳಿಕೆ ಹೊರತರಲು 2-3 ತಿಂಗಳು ನಿರಂತರ ಕೆಲಸ ಮಾಡಲಾಯಿತು. ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಬಹುದಾದ ಸಾಧ್ಯತೆ…
ಕೆಆರ್‍ಎಸ್‍ನಲ್ಲಿ ಸಿಎಂ ಸೀಕ್ರೆಟ್ ಸಭೆ
April 9, 2019ಶ್ರೀರಂಗಪಟ್ಟಣ: ರಾಜ್ಯದ ಗಮನವನ್ನು ಸೆಳೆದಿ ರುವ ಹೈ ವೋಲ್ಟೇಜ್ ಕ್ಷೇತ್ರವಾದ ಮಂಡ್ಯದಲ್ಲಿ ಅಂಬರೀಶ್ ಪತ್ನಿ ಸುಮಲತಾ ಆರ್ಭಟದ ಮುಂದೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ. ತಾಲೂಕಿನ ಕೆಆರ್‍ಎಸ್ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ರಾತ್ರಿ ಮುಖ್ಯಮಂತ್ರಿಗಳು ಮಂಡ್ಯ ಕ್ಷೇತ್ರದ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭಾರೀ ಅಂತರದಲ್ಲಿ ಮಣಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಕೂಡ…
ಮೈಸೂರಲ್ಲಿ ಭರ್ಜರಿ ಮೊದಲ ಮಳೆ
April 9, 2019ಮೈಸೂರು: ಮೈಸೂರಿನಲ್ಲಿ ಸೋಮವಾರ ರಾತ್ರಿ ಗಾಳಿ, ಗಡುಗು ಸಹಿತ ಭಾರೀ ಮಳೆ ಸುರಿಯಿತು. ಒಂದೂವರೆ ತಿಂಗಳಿಂದ ಬೇಸಿಗೆ ಬಿಸಿಲ ಬೇಗುದಿಯಲ್ಲಿ ಬೆಂದಿದ್ದ ಮೈಸೂರು, ಯುಗಾದಿ ನಂತರದ ಮೊದಲ ಮಳೆಯಿಂದ ಕೊಂಚ ತಂಪಾಯಿತು. ಇಂದು ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಸುಮಾರು 8.30 ಗಂಟೆಗೆ ಗುಡುಗು ಸಹಿತ ಆರಂಭವಾಗಿ ಗಂಟೆಗೂ ಹೆಚ್ಚು ಕಾಲ ಬೋರ್ಗರೆದ ಪರಿಣಾಮ ಹಲವೆಡೆ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವುದಲ್ಲದೆ, ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ…
ನನ್ನ ಗೆಲುವಿಗೆ ಸಹಕರಿಸಿ: ಪ್ರತಾಪ್ ಸಿಂಹ
April 9, 2019ಮೈಸೂರು: ಕಳೆದ ಬಾರಿ ಯಂತೆ ಈ ಸಲವೂ ಬೆಂಬಲ ನೀಡಿ ನನ್ನ ಗೆಲುವಿಗೆ ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ನಾಯಕ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಮುಖಂಡರಿಗೆ ಮನವಿ ಮಾಡಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಳವಾರ ಮತ್ತು ಉಪ್ಪಾರ ಸಮುದಾಯಗಳನ್ನು ಎಸ್ಟಿಗೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬಗ್ಗೆ ನಾನು ಸಂಸತ್ತಿನಲ್ಲಿ ಧನಿ ಎತ್ತಿ ಒಪ್ಪಿಗೆ ಸೂಚಿಸಲು ಶ್ರಮಿಸಿದ್ದೇನೆ ಎಂದರು….
ಪೆನ್ಸಿಲ್ ಗ್ರಾಫೈಟ್‍ನ ತುದಿಯಲ್ಲಿ ಅರಳಿದ ಪ್ರಧಾನಿ ಮೋದಿ ಮುಖ
April 9, 2019ಮೈಸೂರು,: ಪೆನ್ಸಿಲ್ ಗ್ರಾಫೈಟ್ (ಲೆಡ್)ನಲ್ಲಿ ಸೂಕ್ಷ್ಮ ನರೇಂದ್ರ ಮೋದಿ ಅವರ ಮುಖವನ್ನು ರೂಪಿಸಿದ್ದು, ಮಂಗಳವಾರ ಮೈಸೂರಿಗೆ ಆಗಮಿಸಲಿ ರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಆಶಿಸಿದ್ದಾರೆ. ಮೈಸೂರಿನ ಮೈಕ್ರೋ ಆರ್ಟ್ (ಸೂಕ್ಷ್ಮ ಕಲೆ) ಕಲಾವಿದ ನಂಜುಂಡ ಸ್ವಾಮಿ 6 ಇಂಚಿನ ಪೆನ್ಸಿಲ್‍ನಲ್ಲಿ ಮೋದಿ ಮುಖ ರೂಪಿಸಿದ್ದಾರೆ. ಪೆನ್ಸಿಲ್‍ನ ತುದಿಯಲ್ಲಿ ಸ್ಪಷ್ಟವಾಗಿ ನರೇಂದ್ರ ಮೋದಿಯವರ ಮುಖ ರಚಿಸಿದ್ದಾರೆ. ಇದನ್ನು ಮೋದಿಯ ವರಿಗೆ ನೀಡಲು ಶಾಸಕ ಎಸ್.ಎ.ರಾಮ ದಾಸ್ ಅವರ ಮೂಲಕ ಪೊಲೀಸರ ಅನು ಮತಿ ಕೋರಿದ್ದಾರೆ. ಕೇವಲ…
ಮೋದಿ ಜೊತೆ ಸೆಲ್ಫಿಗೆ ವ್ಯವಸ್ಥೆ
April 9, 2019ಮೈಸೂರು: ಮಂಗಳವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಯ ಸಿದ್ಧತೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇದಿಕೆಯ ಬಲಭಾಗದಲ್ಲಿ ಒಂದು ಪ್ರತ್ಯೇಕ ಸೆಲ್ಫಿ ಜೋನ್ ಮಾಡಿ, ಅಲ್ಲಿ ಅಭಿಮಾನಿಗಳು ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಲು ಚಿಂತನೆ ಮಾಡಲಾಗಿದ್ದು, ಇದು ವಿಶೇಷ ಆಕರ್ಷಣೆಯಾಗಿದೆ ಎಂದರು….
ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕೇಂದ್ರಗಳ ಸುತ್ತ ನಿಷೇಧಾಜ್ಞೆ
April 9, 2019ಮೈಸೂರು: ನಗರದ ವಿವಿಧೆಡೆ ಏ.9ರಿಂದ ಏ.20 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಶೋಕಪುರಂ ಠಾಣಾ ವ್ಯಾಪ್ತಿಯ ಕಾವೇರಿ ಪ್ರೌಢಶಾಲೆ, ವಿವಿ ಪುರಂ ಠಾಣಾ ವ್ಯಾಪ್ತಿಯ ನಿರ್ಮಲ ಕಾನ್ವೆಂಟ್, ಜಯಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯ ಚಿನ್ಮಯ ಪ್ರೌಢಶಾಲೆ, ಸರಸ್ವತಿಪುರಂ ಠಾಣಾ ವ್ಯಾಪ್ತಿಯ ವಿಜಯವಿಠಲ ವಿದ್ಯಾ ಸಂಸ್ಥೆ, ಕುವೆಂಪುನಗರ ಠಾಣಾ ವ್ಯಾಪ್ತಿಯ ಜ್ಞಾನಗಂಗಾ ಪ್ರೌಢಶಾಲೆ, ಎನ್.ಆರ್. ಮೊಹಲ್ಲಾ ಠಾಣಾ ವ್ಯಾಪ್ತಿಯ ಸೆಂಟ್ ಫಿಲೋಮಿನಾ…
ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆ
April 9, 2019ಮೈಸೂರು: ಹೆಚ್.ಡಿ.ಕೋಟೆ ತಾಲೂಕು ವಿವಿಧ ಮುಖಂಡರು ಮಾಜಿ ಸಚಿವ ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಸಮ್ಮುಖದಲ್ಲಿ ಶಾಸಕ ಬಿ.ಶ್ರೀರಾಮುಲು, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ವಿ.ರಾಮ ಸ್ವಾಮಿ ಹಾಗೂ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗ ಮೈಸೂರು ವತಿ ಯಿಂದ ನೂರಾರು ಮುಖಂಡರು ವಿ.ಶ್ರೀನಿವಾಸಪ್ರಸಾದ್ ಅವರನ್ನು ಬೆಂಬಲಿಸಿ ಬಿಜೆಪಿ ಸೇರ್ಪಡೆಗೊಂಡರು. ಬಿಎಸ್‍ಪಿ ಜಿಲ್ಲಾ ಮಾಜಿ ಅಧ್ಯಕ್ಷ ದೇವದತ್ತ, ಹೆಚ್.ಡಿ.ಕೋಟೆ ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ, ಹೊಸಹಳ್ಳಿ ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಹೆಚ್.ಎನ್.ಸುಧಾ, ಬಿದ್ದರಹಳ್ಳಿ ಗ್ರಾಪಂ ಹಾಲಿ…
ಸಿಪಿಕೆ ಸಾಹಿತ್ಯ ಸಂಪುಟ ಹೊರತರಲು ಸರ್ಕಾರ ನೆರವು ಅವಶ್ಯ
April 9, 2019ಮೈಸೂರು: ಹಿರಿಯ ಸಾಹಿತಿ ಸಿಪಿಕೆ ಅವರ ಎಲ್ಲಾ ಸಾಹಿತ್ಯ ಕೃತಿ ಗಳನ್ನು ಒಟ್ಟಾಗಿಸಿ, ಸಮಗ್ರ ಸಾಹಿತ್ಯವನ್ನು ಹೊರ ತರಲು ಸರ್ಕಾರದ ನೆರವು ಅಗತ್ಯ ವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಅಭಿಪ್ರಾಯಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ, ನೃಪತುಂಗ ಚಾರಿ ಟಬಲ್ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿ ವತಿಯಿಂದ ಆಯೋಜಿಸಿದ್ದ `ಡಾ.ಸಿಪಿಕೆ ಅವರ 80ರ ಸಂಭ್ರಮ’ ಹಾಗೂ ಕೃತಿ ಬಿಡುಗಡೆ…










