ಮೈಸೂರು ಜಿಲ್ಲಾಡಳಿತದಿಂದ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ
ಮೈಸೂರು

ಮೈಸೂರು ಜಿಲ್ಲಾಡಳಿತದಿಂದ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ

April 6, 2019

ಮೈಸೂರು: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 112ನೇ ಜನ್ಮ ದಿನವನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಇಂದಿಲ್ಲಿ ಆಚರಿಸಲಾಯಿತು. ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಡಾ.ಜಗಜೀವನರಾಂ ವೃತ್ತದಲ್ಲಿರುವ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾಲಾರ್ಪಣೆ ಮಾಡಿದರು.

ಮಾಲಾರ್ಪಣೆ ಸಂದರ್ಭದಲ್ಲಿ ಕರ್ನಾ ಟಕ ಪೊಲೀಸ್ ಬ್ಯಾಂಡ್‍ನ ಮುಖ್ಯಸ್ಥ ಬಿ. ಮಂಜುನಾಥ್ ನೇತೃತ್ವದ ಕರ್ನಾಟಕ ಪೊಲೀಸ್ ಬ್ಯಾಂಡ್ ಇಂಗ್ಲಿಷ್ ವಾದ್ಯ ಗೀತೆ ನುಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗ ರಾಜ ಗಾಂಧಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ವನ್ನು ಆಯೋಜಿಸಿತ್ತು.

Translate »