ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿಎಂಗೆ ಅನುಮಾನವೆ…!?
ಮೈಸೂರು

ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿಎಂಗೆ ಅನುಮಾನವೆ…!?

April 6, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಅನುಮಾನ ಕಾಡುತ್ತಿದೆಯೇ?

ಇಂದು ಸುದ್ದಿಗಾರರ ಜೊತೆ ಅವರು ಮಾತನಾಡಿದ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತದೆ. `ಒಬ್ಬ ನಿಖಿಲ್‍ನನ್ನು ಸೋಲಿ ಸಲು ಕಾಂಗ್ರೆಸ್, ಬಿಜೆಪಿ, ರೈತ ಸಂಘ ಇವರ ಜೊತೆಗೆ ಮಾಧ್ಯಮಗಳೂ ಸೇರಿ ಒಂದು ರೀತಿ ಚಕ್ರವ್ಯೂಹವನ್ನೇ ರಚಿಸಿ ದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಆದರೂ ದುಡಿಮೆ ಮಾಡುವವರ ಪರವಾಗಿ ಮಂಡ್ಯದ ಜನತೆ ಈಗಾಗಲೇ ತೀರ್ಮಾನ ಮಾಡಿಕೊಂಡಿದೆ. ನಿಖಿಲ್ ಗೆಲುವು ನಿಶ್ಚಿತ. ಮೇ 23ರ ನಂತರ ಚಕ್ರ ವ್ಯೂಹದ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ನಿನ್ನೆ ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೂ ಕೂಡ `ಮಂಡ್ಯದಲ್ಲಿ ಪರಿಸ್ಥಿತಿ ಕೈಮೀರಿದೆ. ಸಿದ್ದ ರಾಮಯ್ಯನವರೇ ಬಂದರೂ ಪ್ರಯೋ ಜನವಾಗುವುದಿಲ್ಲ. ನಿಖಿಲ್‍ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆತನನ್ನು ಗೆಲ್ಲಿಸು ವುದು ನಿಮ್ಮ ಕೈಯ್ಯಲ್ಲಿದೆ’ ಎಂದು ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಿ ದ್ದನ್ನು ಇಲ್ಲಿ ಸ್ಮರಿಸಬಹುದು.

Translate »