ಸಂಸದ ಪ್ರತಾಪ ಸಿಂಹ ಬಿರುಸಿನ ಪ್ರಚಾರ
ಮೈಸೂರು

ಸಂಸದ ಪ್ರತಾಪ ಸಿಂಹ ಬಿರುಸಿನ ಪ್ರಚಾರ

April 6, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳವಾಡಿ ಗ್ರಾಮದ ಬಸವೇಶ್ವರ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರೋಡ್‍ಶೋ ಮೂಲಕ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ನಡೆಸಿದ ಪ್ರತಾಪ ಸಿಂಹ, ಪ್ರಧಾನಿ ಮೋದಿ ಅವರ ಸಾಧನೆ ಹಾಗೂ ಕಳೆದ 5 ವರ್ಷಗಳಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ರೋಡ್ ಶೋ ನಡುವೆ ಅಲ್ಲಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಮತ ಯಾಚನೆ ಮಾಡಿದರು.

ಪ್ರತಿ ಗ್ರಾಮದಲ್ಲಿ ಪ್ರತಾಪ ಸಿಂಹ ಅವರಿಗೆ ಅಭೂತ ಪೂರ್ವ ಸ್ವಾಗತ ದೊರಕಿತು. ಮಹಿಳೆಯರು ಆರತಿ ಬೆಳಗಿ, ಆಶೀರ್ವದಿಸಿದರು. ದಾರಿಯುದ್ದಕ್ಕೂ ಕಿಕ್ಕಿರಿದಿದ್ದ ಬೆಂಬಲಿ ಗರು ಹಾಗೂ ಅಭಿಮಾನಿಗಳು ಹೂಮಳೆಗರೆದು ಸಂಭ್ರ ಮಿಸಿದರು. ಪ್ರಚಾರದ ನಡುವೆ ಮಾತನಾಡಿದ ಪ್ರತಾಪ ಸಿಂಹ, ಪ್ರಧಾನಿ ಮೋದಿ ಅವರು 5 ವರ್ಷ ಕಳಂಕ ರಹಿತ ಆಡಳಿತ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಗೌರವ, ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಆರಂಭದಿಂ ದಲೂ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಿರುವ ಮೋದಿ ಅವರು, ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡುವ ಮೂಲಕ ರಾಷ್ಟ್ರದ ಶಕ್ತಿ ತೋರಿಸಿಕೊಟ್ಟಿದ್ದಾರೆ. ರಾಷ್ಟ್ರ ರಕ್ಷಣೆಯೊಂ ದಿಗೆ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಹಿಂದೆಂದೂ ನೀಡದಷ್ಟು ಅನುದಾನ ನೀಡಿದ್ದಾರೆ. ಅಭಿವೃದ್ಧಿಗೆ ಮೂಲಭೂತವಾಗಿ ಉತ್ತಮ ಸಂಪರ್ಕ ವ್ಯವಸ್ಥೆ ಇರಬೇಕೆಂದು ರೈಲ್ವೆ ಸಂಪರ್ಕ ವಿಸ್ತರಣೆ, ನೂತನ ರೈಲು ಸಂಚಾರ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಉಡಾನ್ ಯೋಜನೆಯಡಿ ರಾಷ್ಟ್ರದ ಪ್ರಮುಖ ನಗರಗಳಿಗೆ ವಿಮಾನ ಯಾನ ಸಂಪರ್ಕ ಇವೆಲ್ಲವೂ ಬಿಜೆಪಿ ಕೊಡುಗೆ. 5 ವರ್ಷ ಗಳಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಮುಂದಿಟ್ಟು, ಬೆಂಬಲ ಕೋರುತ್ತಿದ್ದೇನೆ. ನನ್ನನ್ನು ಪುನರಾಯ್ಕೆ ಮಾಡುವ ಮೂಲಕ ದೇಶಕ್ಕೆ ಸಿಕ್ಕಿರುವ ಬಲಿಷ್ಠ ನಾಯಕ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಮನವಿ ಮಾಡಿದರು.

ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ಕುಮಾರಬೀಡು, ಬೋಗಾದಿ, ಬೀರಿಹುಂಡಿ, ಶೆಟ್ಟಿನಾಯಕನಹಳ್ಳಿ, ದೊಡ್ಡ ಮಾರನಗೌಡಹಳ್ಳಿ, ವiರಯ್ಯನಹುಂಡಿ ಸೇರಿದಂತೆ ಚಾಮುಂ ಡೇಶ್ವರಿ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿ, ಮತ ಯಾಚನೆ ಮಾಡಿದರು. ಪ್ರತಾಪ ಸಿಂಹ ಅವ ರೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್. ಅರುಣ್‍ಕುಮಾರ್‍ಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹೇಮಂತಕುಮಾರ್‍ಗೌಡ, ಬೋಗಾದಿ ನಂದೀಶ್, ಬೋಗಾದಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿನ ಪುಟ್ಟೇಗೌಡ, ತಾಪಂ ಮಾಜಿ ಸದಸ್ಯ ಸಿದ್ದೇಗೌಡ, ಗೋಪಾಲ್‍ರಾವ್, ರವೀಶ, ಮಧು, ಗೋಪಾಲಗೌಡ, ನಿಂಗರಾಜು, ಮಹದೇವು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಶಾಸಕ ನಾಗೇಂದ್ರ ಪ್ರಚಾರ: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಪ್ರತಾಪ ಸಿಂಹ ಪರ ನಿರಂತರ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ 18ನೇ ವಾರ್ಡ್ ವ್ಯಾಪ್ತಿಯ ಯಾದವಗಿರಿಯಲ್ಲಿ ಮತ ಯಾಚಿಸಿದರು. ಸಂಜೆ 4ನೇ ವಾರ್ಡ್ ವ್ಯಾಪ್ತಿಯ ಬಸವನಗುಡಿ ಸುತ್ತಮುತ್ತ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು. ಪಾಲಿಕೆ ಸದಸ್ಯ ಗುರು ವಿನಾ ಯಕ, ಮುಖಂಡರಾದ ಸತೀಶ್ ಚಂದ್ರ, ಸತೀಶ್ ಕದಂಬ, ಜಯಪ್ಪ, ಕಿರಣ್‍ಗೌಡ, ಚಿಕ್ಕವೆಂಕಟ, ರಾಮೇಗೌಡ, ಮರಿ ದಾಸಗೌಡ, ಶುಭಾ ಮತ್ತಿತರರು ಪಾಲ್ಗೊಂಡಿದ್ದರು.

Translate »